More

    FACT CHECK|ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭೇಟಿಯಿಂದ ತಾಜ್​ಮಹಲ್​ ಸ್ವಚ್ಛವಾಯಿತೇ?

    ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಟ್​ ಟ್ರಂಪ್​ ಅವರು ಭಾರತ ಭೇಟಿ ವೇಳೆ ಆಗ್ರಾದ ತಾಜ್​ಮಹಲ್​ಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ತಾಜ್​ಮಹಲ್​ ಕೊಳೆ ತೆಗೆಯಲು ನೀರು ಹರಿಸಲಾಗುತ್ತಿದೆ ಎನ್ನುವ ವಿಡಿಯೋ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಡೊನಾಲ್ಡ್​ ಟ್ರಂಪ್​ ಅವರು ಪತ್ನಿ ಹಾಗೂ ಮಗಳ ಸಮೇತ ತಾಜ್​ಮಹಲ್​ನಲ್ಲಿ ಒಂದು ತಾಸು ಕಾಲ ಕಳೆಯುವ ಹಿನ್ನೆಲೆಯಲ್ಲಿ ಪಾರಂಪರಿಕ ಕಟ್ಟಡವನ್ನು ಅಗ್ನಿಶಾಮಕ ಸಿಬ್ಬಂದಿ ನೀರು ಸಿಂಪಡಿಸಿ ಸ್ವಚ್ಛಗೊಳಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಆದರೆ ಈ ವಿಡಿಯೋ ಸುಳ್ಳು ಎಂಬುದು ಫ್ಯಾಕ್ಟ್​ಚೆಕ್​ನಿಂದ ಪತ್ತೆಯಾಗಿದೆ.

    ಮೀನಾ ಮ್ಯೂಸಿಕ್​ ಎಂಬ ಫೇಸ್​ಬುಕ್​ ಪುಟದಲ್ಲಿ 45 ಸೆಕೆಂಡುಗಳ ವಿಡಿಯೋ ದೃಶ್ಯ ಅಪ್​ಲೋಡ್​ ಮಾಡಿ ಹಿಂದಿಯಲ್ಲಿ ಶೀರ್ಷಿಕೆ ಬರೆಯಲಾಗಿದೆ. ಟ್ರಂಪ್​ಗಾಗಿ ತಾಜ್​ಮಹಲ್​ಗೆ ಸ್ನಾನ ಮಾಡಿಸಲಾಗುತ್ತಿದೆ. ತಾಜ್​ಮಹಲ್​ ನಿರ್ಮಿಸಿದವರನ್ನು ದ್ವೇಷ ಮಾಡುವವರು ಈಗ ಟ್ರಂಪ್​ಗಾಗಿ ತಾಜ್​ಮಹಲ್​ಗೆ ಸ್ನಾನ ಮಾಡಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ದೃಶ್ಯ ತಾಜ್​ಮಹಲ್​ಗೆ ಸಂಬಂಧಿಸಿದಲ್ಲ. ಬದಲಿಗೆ ಭೂಪಾಲ್​ನ ಮಾಲ್​ನಲ್ಲಿ ನಿರ್ಮಿಸಿರುವ ತಾಜ್​ ಪ್ರತಿಕೃತಿ ಎಂದು ಪತ್ತೆಯಾಗಿದೆ.

    ವೈರಲ್ ಆದ ವೀಡಿಯೊದಲ್ಲಿರುವ ಸ್ಮಾರಕ ಆಗ್ರಾದ ತಾಜ್ ಮಹಲ್ ಅಲ್ಲ ಎಂದು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಕಂಡುಹಿಡಿದಿದೆ. ವಾಸ್ತವವಾಗಿ ಇದು ಭೋಪಾಲ್‌ನ ಪೀಪಲ್ಸ್ ಮಾಲ್ ಬಳಿ ನಿರ್ಮಿಸಲಾದ ತಾಜ್​ಮಹಲ್​ನ ಪ್ರತಿಕೃತಿ ಎಂದು ಪತ್ತೆ ಮಾಡಿದೆ.

    ಟ್ರಂಪ್‌ ಆಗ್ರಾಕ್ಕೆ ಭೇಟಿ ನೀಡುವ ಮುನ್ನ ಭಾರತೀಯ ಪುರಾತತ್ತ್ವ ಇಲಾಖೆ ತಾಜ್​ಮಹಲ್​ ಕಟ್ಟದಲ್ಲಿರುವ ಕಪ್ಪು ಕಲೆಗಳನ್ನು ನಿರ್ಮೂಲ ಮಾಡಲು ಮಣ್ಣಿನ ಪ್ಯಾಕ್​ ಮಾಡಿ ಸ್ವಚ್ಛಗೊಳಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts