More

    ತೃಪ್ತಿ ದೇಸಾಯಿ ಶಬರಿಮಲೆ ಪ್ರವೇಶ ಯತ್ನದ ಹಿಂದೆ ಬಿಜೆಪಿ ಕೈವಾಡ?: ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಯಲು!

    ನವದೆಹಲಿ: ಮಹಿಳಾ ಕಾರ್ಯಕರ್ತೆ ತೃಪ್ತಿ ದೇಸಾಯಿ ಶಬರಿಮಲೆ ದೇವಸ್ಥಾನ ಪ್ರವೇಶ ಯತ್ನವು 2018 ಮತ್ತು 2019ರಲ್ಲಿ ರಾಷ್ಟ್ರದ ಗಮನ ಸೆಳೆದಿತ್ತು. 2018ರವರೆಗೆ ಇದ್ದ ಮುಟ್ಟಿನ ವಯಸ್ಸಿನ ಮಹಿಳೆಯರು ಶಬರಿಮಲೆಗೆ ಭೇಟಿ ನೀಡುವಂತಿಲ್ಲ ಎಂಬ ನಿಯಮವು ಸುಪ್ರೀಂಕೋರ್ಟ್​ ತೀರ್ಪಿನಿಂದ ಬದಲಾದ ಬಳಿಕ ಅನೇಕ ಮಹಿಳಾ ಕಾರ್ಯಕರ್ತರು ದೇವಸ್ಥಾನ ಪ್ರವೇಶಿಸಲು ಪ್ರಯತ್ನಿಸಿದಾದರೂ ಭಕ್ತರ ಆಕ್ರೋಶದಿಂದಾಗಿ ಸಾಧ್ಯವಾಗಿಲ್ಲ.

    ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸ್ಟ್ರೀನ್​ಶಾಟ್ ಒಂದು ಭಾರಿ ಚರ್ಚೆಗೆ ಗ್ರಾಸವಾಗಿದೆ. ತೃಪ್ತಿ ದೇಸಾಯಿ ದೇವಸ್ಥಾನ ಪ್ರವೇಶ ಯತ್ನದ ಹಿಂದೆ ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್​ ಕೈವಾಡವಿದೆ ಎಂಬ ಬಿಜೆಪಿ ಉಪಾಧ್ಯಕ್ಷೆ ಶೋಭಾ ಎಸ್​ ಅವರು ಮನೋರಮ ವೆಬ್​ಸೈಟ್​ಗೆ ನೀಡಿದ್ದಾರೆಂಬ ಹೇಳಿಕೆಯ ಸ್ಕ್ರೀನ್​ಶಾಟ್​ ಹರಿದಾಡುತ್ತಿದೆ. ಕೆ. ಸುರೇಂದ್ರನ್​ ಸೂಚನೆಯಂತೆಯೇ ತೃಪ್ತಿ ದೇಸಾಯಿ ಶಬರಿಮಲೆ ಪ್ರವೇಶಿಸಲು ಯತ್ನಿಸಿದರು ಎಂದು ಸುದ್ದಿಗೆ ಹೆಡ್​ಲೈನ್​ ಸಹ ನೀಡಲಾಗಿದೆ.

    ಇದನ್ನೂ ಓದಿ: ಪಕ್ಕಾ ಕಳ್ಳಿಯಾದ ‘ಮಿಸ್​ ದೆಹಲಿ’- ಬಾಯ್​ಫ್ರೆಂಡ್​ ಜತೆ ಮಜಾ ಮಾಡಹೋಗಿ ಸಿಕ್ಕಿಬಿದ್ಳು ಸುಂದರಿ!

    ತೃಪ್ತಿ ದೇಸಾಯಿ ಶಬರಿಮಲೆ ಪ್ರವೇಶ ಯತ್ನದ ಹಿಂದೆ ಬಿಜೆಪಿ ಕೈವಾಡ?: ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಯಲು!

    ಆದರೆ, ಜಾಲತಾಣದಲ್ಲಿ ಹರಿದಾಡುತ್ತಿರುವ ಸ್ಕ್ರೀನ್​ಶಾಟ್​ ನಕಲಿ ಮತ್ತು ತಿರುಚಲಾಗಿದೆ ಎಂಬುದು ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ನಡೆಸಿದ ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ. ಅಲ್ಲದೆ, ಈ ರೀತಿಯ ಯಾವುದೇ ಹೇಳಿಕೆ ನೀಡಿಲ್ಲ ಎಂದು ಸ್ವತಃ ಶೋಭಾ ಎಸ್​ ಸಹ ಸ್ಪಷ್ಟನೆ ನೀಡಿದ್ದಾರೆ. ಡಿಸೆಂಬರ್​ ತಿಂಗಳಲ್ಲಿ ನಡೆಯಲಿರುವ ಕೇರಳ ಸ್ಥಳೀಯ ಚುನಾವಣೆ ಹಿನ್ನೆಲೆಯಲ್ಲಿ ಸ್ಕ್ರೀನ್​ಶಾಟ್​ ವೈರಲ್​ ಆಗಿದ್ದು, ಜಾಲತಾಣದಲ್ಲಿ ಸಾಕಷ್ಟು ಟೀಕಾ ಟಿಪ್ಪಣಿಗೂ ಕಾರಣವಾಗಿದೆ.

    ಇದನ್ನೂ ಓದಿ: ಮೆದುಳಿನ ಶಸ್ತ್ರ ಚಿಕಿತ್ಸೆ ಸಮಯದಲ್ಲೂ ಬಿಗ್​ ಬಾಸ್​ ನೋಡಿದ ರೋಗಿ; ಕಾರಣವೇನು ಗೊತ್ತಾ?

    ಕೆ. ಸುರೇಂದ್ರನ್​ ಅವರು ನನ್ನನ್ನು ಮೂಲೆಗುಂಪು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶೋಭಾ ಅವರು ರಾಜ್ಯ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರಾಷ್ಟ್ರೀಯ ನಾಯಕರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ಸ್ಕ್ರೀನ್​ಶಾಟ್​ ಹರಿದಾಡುತ್ತಿದೆ. ಆದರೆ, ಶೋಭಾ ಅವರು ಹೇಳಿಕೆಯನ್ನು ಸಾಬೀತು ಮಾಡುವ ಯಾವುದೇ ಸುದ್ದಿ ಮನೋರಮಾ ಆನ್​ಲೈನ್​ನಲ್ಲಿ ಪ್ರಕಟವಾಗಿಲ್ಲ. ಅಲ್ಲದೆ, ತೃಪ್ತಿ ದೇಸಾಯಿ ಹಿಂದೆ ಬಿಜೆಪಿಯ ನಾಯಕರು ಇದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ ಯಾವ ಸುದ್ದಿಯು ಲಭ್ಯವಾಗಿಲ್ಲ ಎಂದು ಫ್ಯಾಕ್ಟ್​ಚೆಕ್​ ತಿಳಿಸಿದೆ.

    ವೈರಲ್​ ಸ್ಕ್ರೀನ್​ಶಾಟ್​ ಅನ್ನು ಮನೋರಮಾ ಆನ್​ಲೈನ್​ನಲ್ಲಿ ಪ್ರಕಟವಾದ ಇನ್ನಿತರ ಲೇಖನಗಳಿಗೆ ಹೋಲಿಕೆ ಮಾಡಿ ನೋಡಿದಾಗ ವೈರಲ್ ಸ್ಕ್ರೀನ್‌ಶಾಟ್‌ನಲ್ಲಿನ ಡೇಟ್‌ಲೈನ್‌ನ ಸ್ವರೂಪದಲ್ಲಿನ ವ್ಯತ್ಯಾಸ ಕಾಣಿಸಿದ್ದು, ಅಧಿಕೃತ ಮತ್ತು ನಕಲಿ ಚಿತ್ರಗಳಲ್ಲಿ ಡೇಟ್​ಲೈನ್​ ವ್ಯಾತ್ಯಾಸವನ್ನು ಈ ಕೆಳಗಿನ ಚಿತ್ರದಲ್ಲಿ ಗಮನಿಸಬಹುದಾಗಿದೆ. ಅಲ್ಲದೆ, ಮನೋರಮಾ ಆನ್​ಲೈನ್​​ನ ಸಂಯೋಜಕ ಸಂಪಾದಕ ಸಂತೋಷ್​ ಜಾರ್ಜ್​ ಜಾಕೋಬ್​ರನ್ನು ಫ್ಯಾಕ್ಟ್​ಚೆಕ್​ ತಂಡ ಸಂಪರ್ಕಿಸಿದಾಗ ವೈರಲ್​ ಸ್ಕ್ರೀನ್​ಶಾಟ್​ ನಕಲಿ ಎಂದು ಸ್ಪಷ್ಟನೆ ನೀಡಿದ್ದಾರೆ. ​

    ಇದನ್ನೂ ಓದಿ: ಭಾರಿ ವೈರಲ್​ ಆಗ್ತಿದೆ ಐಆರ್​ಟಿಎಸ್ ಅಧಿಕಾರಿಯ ಲಗ್ನ ಪತ್ರಿಕೆ ಸಂದೇಶ: ನೀವೂ ಫಿದಾ ಆಗೋದು ಗ್ಯಾರೆಂಟಿ!

    ತೃಪ್ತಿ ದೇಸಾಯಿ ಶಬರಿಮಲೆ ಪ್ರವೇಶ ಯತ್ನದ ಹಿಂದೆ ಬಿಜೆಪಿ ಕೈವಾಡ?: ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಯಲು!

    ಶೋಭಾ ಅವರು ಮಾತನಾಡಿ, ಶಬರಿಮಲೆ ವಿಚಾರದಲ್ಲಿ ನಾನೆಂದಿಗೂ ಆ ರೀತಿಯ ಹೇಳಿಕೆ ನೀಡಿಲ್ಲ. ಮನೋರಮಾ ಸಹ ಈ ಕುರಿತು ಖಚಿತಪಡಿಸಿದ್ದು, ಅದೊಂದು ನಕಲಿ ಸ್ಕ್ರೀನ್​ಶಾಟ್​ ಎಂದು ಹೇಳಿದೆ. ಈ ಕುರಿತು ಕಾನೂನು ಕ್ರಮ ತೆಗೆದುಕೊಳ್ಳಲು ನಾನು ಒತ್ತಾಯಿಸಿದ್ದೇವೆ ಎಂದು ಶೋಭಾ ತಿಳಿಸಿದ್ದಾರೆ. (ಏಜೆನ್ಸೀಸ್​)

    ಕುಟ್ಟಾಣಿ ಮಾರುತ್ತಿದ್ದವಳೀಗ ಪೊಲೀಸ್​ ಅಧಿಕಾರಿ: ಸ್ಫೂರ್ತಿಯ ಕತೆಗೆ ರೋಚಕ ಟ್ವಿಸ್ಟ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts