More

    ಬೈಕ್​ ಸವಾರನಿಗೆ ಮಧ್ಯದ ಬೆರಳು ತೋರಿದ ಯುವತಿ: ವೈರಲ್​ ವಿಡಿಯೋ ಹಿಂದಿನ ಅಸಲಿ ಕತೆ ಇಲ್ಲಿದೆ!

    ನವದೆಹಲಿ: ಇಂದು ಅಂತರ್ಜಾಲದಲ್ಲಿ ಅಸಂಖ್ಯಾತ ವಿಡಿಯೋಗಳು, ಫೋಟೋಗಳು ಮತ್ತು ಸುದ್ದಿಗಳು ತುಂಬಿದ್ದು, ಕೆಲವೇ ಕ್ಷಣಗಳಲ್ಲಿ ಸಾವಿರಾರು ಜನರಿಂದ ಶೇರ್​ ಆಗುವ ಮೂಲಕ ವೈರಲ್​ ಆಗಿ ಬಿಡುತ್ತವೆ. ಅದಕ್ಕೆ ಇತ್ತೀಚಿನ ತಾಜಾ ಉದಾಹರಣೆ ಎಂಬಂತೆ ಯುವತಿಯೊಬ್ಬಳು ಹೊಂಡಾ ಆ್ಯಕ್ಟೀವಾದಲ್ಲಿ ಕೆಟಿಎಂ ಬೈಕ್​ ಸವಾರನಿಗೆ ಅಡ್ಡಲಾಗಿ ಬಂದಿದ್ದಲ್ಲದೆ, ಮಧ್ಯದ ಬೆರಳು ತೋರುವ ಮೂಲಕ ಅಸಭ್ಯವಾಗಿ ವರ್ತಿಸಿದ ವಿಡಿಯೋ ಕಳೆದ ವಾರ ವೈರಲ್​ ಆಗಿತ್ತು.

    ಈ ವಿಡಿಯೋ ಮೀಮ್ಸ್​ ಪೇಜ್​ಗಳಲ್ಲಿ ಸಾಕಷ್ಟು ಖ್ಯಾತಿ ಪಡೆದಿತ್ತು. ಫೇಸ್​ಬುಕ್​, ಇನ್​ಸ್ಟಾಗ್ರಾಂ ಮತ್ತು ಟ್ವಿಟರ್​ನಲ್ಲಿ ಸಿಕ್ಕಾಪಟ್ಟೆ ಶೇರ್​ ಆಗಿ ಯುವತಿಯ ವರ್ತನೆ ಬಗ್ಗೆ ಆಕ್ರೋಶದ ಮಾತುಗಳು ಕೇಳಿಬಂದಿತ್ತು.

    ಇದನ್ನೂ ಓದಿರಿ: ಮೊದಲಿನಿಂದಲೂ ನನ್ನ ಕಂಡ್ರೆ ಹೆಂಡ್ತಿಗೆ ಆಗಲ್ಲ- ಹೇಗೋ ಎರಡು ಮಕ್ಕಳಾದ್ವು… ಆದರೀಗ….!

    ಈ ವಿಡಿಯೋವನ್ನು ಮಾರ್ಚ್​ 11ರಂದು ಎಎಂವಿ ಟ್ಯೂಬ್​ ಹೆಸರಿನ ಯೂಟ್ಯೂಬ್​ ಚಾನಲ್​ನಲ್ಲಿ ಮೊದಲು ಅಪ್​ಲೋಡ್​ ಮಾಡಲಾಗಿದೆ. ವಿಡಿಯೋದಲ್ಲಿ ಯೂಟ್ಯೂಬರ್​ ಕೆಟಿಎಂ ಡ್ಯೂಕ್​ ಬೈಕ್​ ಓಡಿಸುವುದನ್ನು ನೋಡಬಹುದು. ಈ ವೇಳೆ ದಿಢೀರನೇ ಯುವತಿಯೊಬ್ಬಳು ಹೊಂಡಾ ಆ್ಯಕ್ಟೀವಾ ಸವಾರಿ ಮಾಡಿಕೊಂಡು ಮೊಬೈಲ್​ನಲ್ಲಿ ಮಾತನಾಡುತ್ತಾ ಅಡ್ಡ ಬರುತ್ತಾಳೆ. ಇನ್ನೇನು ಡಿಕ್ಕಿ ಹೊಡೆಯಬೇಕೆನ್ನುವಷ್ಟರಲ್ಲಿ ತಕ್ಷಣ ಬ್ರೇಕ್​ ಹಾಕುವ ಕೆಟಿಎಂ ಬೈಕ್​ ಚಾಲಕ ಯುವತಿಯನ್ನು ಪಶ್ನಿಸಿದಾಗ ಆಕೆ ಮಧ್ಯದ ಬೆರಳು ತೋರುತ್ತಾಳೆ. ತಾನು ತಪ್ಪು ಮಾಡಿದ್ದೇನೆಂದು ಅರಿಯದೇ ಕೇಸ್​ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಾಳೆ.

    ಇದಾದ ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದು ಅನೇಕ ಜನರು ಅಲ್ಲಿ ಸೇರುತ್ತಾರೆ. ಕೊನೆಗೆ ಜಗಳ ಶಮನವಾಗುತ್ತದೆ. ಯೂಟ್ಯೂಬರ್​ ಅಮೆ ಭೋಸಲೆ ವಿಡಿಯೋವನ್ನು “ಪಾಪಾ ಕಿ ಪ್ಯಾರಿ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್​ ಮಾಡಿ ಇದು ಯಾರ ತಪ್ಪೆಂದು ನೀವೆ ಹೇಳಿ ಎಂದು ಕೇಳುತ್ತಾರೆ. ಇದಾದ ಬಳಿಕ ವಿಡಿಯೋ ವೈರಲ್​ ಆಗುತ್ತದೆ.

    ಈ ವಿಡಿಯೋ ಅಪ್​ಲೋಡ್​ ಮಾಡಿದ ನಾಲ್ಕು ದಿನಗಳ ಬಳಿಕ ಅಮೆ ಭೋಸಲೆ ಮತ್ತೊಂದು ವಿಡಿಯೋವನ್ನು ಅಪ್​​ಲೋಡ್​ ಮಾಡುತ್ತಾರೆ. ಅದರಲ್ಲಿ ಪಾಪಾ ಕಿ ಪ್ಯಾರಿ ವಿಡಿಯೋ ನಕಲಿ, ಅದು ಪೂರ್ವ ನಿಯೋಜಿತ ವಿಡಿಯೋ ಮತ್ತು ಅದರಲ್ಲಿರುವ ಯುವತಿಗೆ ನಟಿಸಲು ಹಣ ನೀಡಲಾಗಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿರಿ: ಪೋರ್ನ್​ ಸೈಟಿನಲ್ಲಿ ತಮ್ಮದೇ ವಿಡಿಯೋ ನೋಡಿ ದಂಪತಿ ಶಾಕ್​​: ತನಿಖೆಯಲ್ಲಿ ಬಯಲಾಯ್ತು ಬೆಚ್ಚಿ ಬೀಳಿಸೋ ಸತ್ಯ!

    ರೇಸಿಂಗ್​ ಮತ್ತು ಅತಿ ವೇಗದ ಚಾಲನೆ ಸರಿಯಲ್ಲ ಎಂದು ಜಾಗೃತಿ ಮೂಡಿಸಲು ವಿಡಿಯೋ ಮಾಡಿದ್ದಾಗಿ ಅಮೆ ಭೋಸಲೆ ಅವರು ತಿಳಿಸಿದ್ದಾರೆ. ಅಲ್ಲದೆ, ಮನರಂಜನೆ ಉದ್ದೇಶವು ಇದರಲ್ಲಿದೆ. (ಏಜೆನ್ಸೀಸ್​)

    ಟ್ರಕ್​ ಚಾಲನೆ ವೇಳೆ ಹೆಲ್ಮೆಟ್​ ಧರಿಸಿಲ್ಲ ಎಂದು ಹೀಗೆಲ್ಲಾ ಮಾಡೋದಾ? ಬೇಸ್ತು ಬಿದ್ದ ಚಾಲಕ!

    VIDEO| ಇದ್ದಕ್ಕಿದ್ದಂತೆ 35 ಕಿ.ಮೀ. ವರೆಗೆ ಹಿಮ್ಮುಖವಾಗಿ ಚಲಿಸಿದ ರೈಲು: ಮಾರ್ಗ ಮಧ್ಯೆ ಚಾಲಕನಿಗೆ ಎದುರಾಗಿದ್ದೇನು?

    ಮದ್ವೆ ಮಂಟಪದಲ್ಲಿ ಹೆಲಿಕಾಪ್ಟರ್​ನಲ್ಲಿ ಸುರಿಯಿತು ಹಣದ ಮಳೆ: ನೋಟಿಗಾಗಿ ಮುಗಿಬಿದ್ದ ಸಾರ್ವಜನಿಕರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts