More

    ಕರೊನಾ ಭೀತಿ: ಜನ ಹೊರಬರದಂತೆ ಮಾಡಲು ದೇಶದ ಬೀದಿಗಳಲ್ಲಿ ಹುಲಿ, ಸಿಂಹಗಳನ್ನು ಅಡ್ಡಾಡಲು ಬಿಟ್ಟರೆ ರಷ್ಯಾ ಅಧ್ಯಕ್ಷ?

    ಮಾಸ್ಕೋ: ಕರೊನಾ ಭೀತಿಯಿಂದ ಸೋಂಕು ತಡೆಗಟ್ಟಲು ಅನೇಕ ರಾಷ್ಟ್ರಗಳು ಲಾಕ್​ಡೌನ್ ಹೇರಿವೆ. ಈಗಾಗಲೇ ಜಾಗತಿಕವಾಗಿ 14 ಸಾವಿರಕ್ಕೂ ಹೆಚ್ಚು ಮಂದಿಯನ್ನು ಕರೊನಾ ಬಲಿಪಡೆದುಕೊಂಡಿದೆ. 3 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿತರಾಗಿದ್ದಾರೆ. ಇಂತಹ ಸಂದಿಗ್ಧ ಸಮಯಲ್ಲಿ ಸರ್ಕಾರಗಳು ಸೋಂಕು ತಡೆಗಟ್ಟಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.​

    ಇದರ ನಡುವೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಅವರು ದೇಶದ ಜನತೆ ಮನೆಯಲ್ಲೇ ಉಳಿಯುವಂತೆ ಮಾಡಲು ದೇಶಾದ್ಯಂತ 800 ಹುಲಿ ಮತ್ತು ಸಿಂಹಗಳನ್ನು ಬಿಡುಗಡೆ ಮಾಡಿದ್ದಾರೆ ಎಂಬ ಪೋಸ್ಟ್​ ಫೇಸ್​ಬುಕ್​ನಲ್ಲಿ​ ಹರಿದಾಡುತ್ತಿದೆ. ಖಾಲಿ ಬೀದಿಯಲ್ಲಿ ಸಿಂಹವೊಂದು ಅಡ್ಡಾಡುತ್ತಿರುವ ಫೋಟೋವನ್ನು ಹ್ಯೂಮರ್​ ಟಿವಿ ಹೆಸರಿನ ಫೇಸ್​ಬುಕ್​ ಪೇಜ್​ನಲ್ಲಿ ಪೋಸ್ಟ್​ ಮಾಡಿ ಈ ಮೇಲಿನಂತೆ ಬರೆಯಲಾಗಿದೆ.

    ಕರೊನಾ ಭೀತಿ: ಜನ ಹೊರಬರದಂತೆ ಮಾಡಲು ದೇಶದ ಬೀದಿಗಳಲ್ಲಿ ಹುಲಿ, ಸಿಂಹಗಳನ್ನು ಅಡ್ಡಾಡಲು ಬಿಟ್ಟರೆ ರಷ್ಯಾ ಅಧ್ಯಕ್ಷ?

    ಪೋಸ್ಟ್​ ಮಾಡಿದಾಗಿನಿಂದ ಈವರೆಗೂ 18 ಸಾವಿರಕ್ಕೂ ಹೆಚ್ಚು ಬಾರಿ ಶೇರ್​ ಆಗಿದ್ದು, ಫೇಸ್​ಬುಕ್​ ಮಾತ್ರವಲ್ಲದೇ ಟ್ವಿಟರ್​ನಲ್ಲೂ ವೈರಲ್​ ಆಗಿದೆ. ಆದರೆ, ಎಷ್ಟು ಸತ್ಯ ಎಂದು ಪರಿಶೀಲಿಸಿದಾಗ ಇದೊಂದು ನಕಲಿ ಪೋಸ್ಟ್​ ಎಂಬುದು ಬಹಿರಂಗವಾಗಿದೆ.

    ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ನಕಲಿ ಸುದ್ದಿ ಎಂಬುದು ಪತ್ತೆಯಾಗಿದೆ. ವೈರಲ್​ ಆಗುತ್ತಿರುವ ಫೋಟೋ ದಕ್ಷಿಣ ಆಫ್ರಿಕಾದ ಜೋಹಾನ್ಸ್​ಬರ್ಗ್​ ಸೇರಿದ್ದಾಗಿದ್ದು, 2016ರಲ್ಲಿ ಸೆರೆಹಿಡಿಯಲಾದ ಚಿತ್ರವಾಗಿದೆ.

    ಗೂಗಲ್​ ರಿವರ್ಸ್​ ಸರ್ಚ್​ ಇಂಜಿನಲ್ಲಿ ನೋಡಿದಾಗ ಈ ಸಂಬಂಧ ಡೈಲಿ ಮೇಲ್​ ವೆಬ್​ಸೈಟ್​ನಲ್ಲಿ 2016, ಏಪ್ರಿಲ್​ 15ರಂದು ಈ ಸಂಬಂಧ ಸುದ್ದಿ ಪ್ರಕಟವಾಗಿದೆ. ಇದರ ಪ್ರಕಾರ ಕೊಲಂಸ್​ ಹೆಸರಿನ ಸಿಂಹವನ್ನು ಜೋಹಾನ್ಸ್​ಬರ್ಗ್​ನಲ್ಲಿ ನಡೆದ ಸಿನಿಮಾ ಶೂಟಿಂಗ್​ಗಾಗಿ ಕರೆತರಲಾಗಿತ್ತು ಎಂದು ತಿಳಿದುಬಂದಿದೆ.

    ನ್ಯೂಯಾರ್ಕ್​ ಪೋಸ್ಟ್​ನಲ್ಲಿ ಪ್ರಕಟವಾದ ಮತ್ತೊಂದು ವರದಿಯ ಪ್ರಕಾರ ಶೂಟಿಂಗ್​ ಅನುಮತಿಯನ್ನು ನೀಡಿರಲಿಲ್ಲ ಎಂದು ತಿಳಿಸಲಾಗಿದೆ. ಫಿಲ್ಮ್​ ಕಂಪನಿಗೆ ಶೂಟಿಂಗ್​ ಮಾಡಲು ಅನುಮತಿ ನೀಡಿಲ್ಲ. ಮುಂಜಾಗ್ರತ ಕ್ರಮವಾಗಿ ಅನೇಕ ರಸ್ತೆಗಳನ್ನು ಮುಚ್ಚಲು ಅನುಮತಿ ಪಡೆಯದೇ ಹರೆಯದ ಸಿಂಹವನ್ನು ಬಳಸಿಕೊಂಡು ರಸ್ತೆಯಲ್ಲೇ ಶೂಟಿಂಗ್​ ನಡೆಸುವ ಮೂಲಕ ಜನರಿಗೆ ತೊಂದರೆ ನೀಡಲು ಮುಂದಾಗಿದ್ದರಿಂದ ಚಿತ್ರೀಕರಣಕ್ಕೆ ಅನುಮತಿ ನೀಡಲಿಲ್ಲ ಎಂದು ಜೋಹಾನ್ಸ್​ಬರ್ಗ್​ ರಸ್ತೆ ಸುರಕ್ಷತಾ ಸಂಸ್ಥೆ ಹೇಳಿದ್ದಾಗಿ ವರದಿಯಾಗಿದೆ.

    ಇದಲ್ಲದೆ, ನ್ಯೂಸ್ ಚಾನೆಲ್​ವೊಂದರ ಬ್ರೇಕಿಂಗ್​ ಪ್ಲೇಟ್​ ಬಳಸಿ ಇದೇ ಫೋಟೋದೊಂದಿಗೆ ಸಂದೇಶವನ್ನು ವಾಟ್ಸ್​ಆ್ಯಪ್​ಗಳಲ್ಲಿ ಹರಡಲಾಗಿದೆ. ಅದು ಕೂಡ ನಕಲಿ ಎಂದು ಫ್ಯಾಕ್ಟ್​ಚೆಕ್​ ಬಯಲು ಮಾಡಿದೆ. ಫೋಟೋಶೂಟ್​ ಮೂಲಕ ಸೃಷ್ಟಿಸಿ ಹರಿಬಿಡಲಾಗಿದೆ ಎಂದು ತಿಳಿಸಿದೆ. ಹೀಗಾಗಿ ಫೇಸ್​ಬುಕ್​ನಲ್ಲಿ ಓಡಾಡುತ್ತಿರುವ ಸಿಂಹಕ್ಕೂ ರಷ್ಯಾ ಸ್ತಬ್ಧಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕಂಡುಬಂದಿದೆ. (ಏಜೆನ್ಸೀಸ್​)

    ಬೆಂಗಳೂರು ನಿವಾಸಿಗಳೇ, ನಿಮ್ಮ ವಾಟ್ಸ್​​ಆ್ಯಪ್​ಗೆ ಈ ಮೆಸೇಜ್​ ಬಂದಿದೆಯಾ? ಒಮ್ಮೆ ಈ ಸುದ್ದಿಯನ್ನು ಓದಿಕೊಂಡು ಬಿಡಿ..ಸುಮ್ಮನೆ ಯಾಮಾರಬೇಡಿ…

    FACT CHECK| ಹೆಚ್ಚು ನೀರು ಕುಡಿದರೆ ಕರೊನಾ ಬರಲ್ವಾ? ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿದರೆ ವೈರಸ್​ ಹೊರಟು ಹೋಗುತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts