More

    ಇವರ‍್ಯಾರು ತಬ್ಲಿಘಿಗಳಲ್ಲ, ಹಿಂದುಗಳು ಎನ್ನುವ ಫೋಟೋ ವೈರಲ್​: ಫ್ಯಾಕ್ಟ್​ಚೆಕ್​ನಿಂದ ಬಯಲಾಯ್ತು ಸತ್ಯಾಂಶ!

    ನವದೆಹಲಿ: ಈ ಚಿತ್ರದಲ್ಲಿರುವುದು ತಬ್ಲಿಘಿಗಳಲ್ಲ, ಬದಲಾಗಿ ಹಿಂದುಗಳು. ಒಂದೇ ಮಹಡಿಯಲ್ಲಿ ಕಿಕ್ಕಿರಿದು ತುಂಬಿರುವ ಜನರು ಇಕ್ಕಾಟಾದ ಸ್ಥಳದಲ್ಲಿ ಮಲಗಿದ್ದಾರೆ. ಇವರೆಲ್ಲ ಲಾಕ್​ಡೌನ್​ನಿಂಡ ಸಿಲುಕಿಕೊಂಡಿದ್ದು, ಇವರ ಬಗ್ಗೆ ಪ್ರಧಾನಿ ಮೋದಿ ಸರ್ಕಾರವಾಗಲಿ, ಮಾಧ್ಯಮಗಳಾಗಲಿ ಗಮನವಹಿಸದೇ ಅಸಡ್ಡೆ ತೋರಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಚಿತ್ರದ ಹಿಂದೆ ಅಪಪ್ರಚಾರದ ತಂತ್ರವಿದೇ ಎಂಬುದು ಫ್ಯಾಕ್ಟ್​ಚೆಕ್​​ನಿಂದ ಬಯಲಾಗಿದೆ.

    ಸುರೇಶ್​ ಪ್ರಭು ಹೆಸರಿನ ಫೇಸ್​ಬುಕ್​ ಖಾತೆಯಲ್ಲಿ ಒಂದೇ ಮಹಡಿಯಲ್ಲಿ ಒತ್ತೊತ್ತಾಗಿ ಮಲಗಿರುವ ಫೋಟೋವನ್ನು ಅಪ್​ಲೋಡ್​ ಮಾಡಲಾಗಿದೆ. ಫೋಟೋ ಮೇಲ್ಭಾಗದಲ್ಲಿ ಈ ಅಸಹಾಯಕ ಜನರು ತಬ್ಲಿಘಿಗಳಲ್ಲ. ಅವರು ಬಡ ಹಿಂದುಗಳು. ಲಾಕ್​ಡೌನ್​ನಿಂದ ಸಿಲುಕಿಕೊಂಡಿದ್ದಾರೆ. ಯಾವುದಾದರೂ ನ್ಯೂಸ್​ ಚಾನಲ್​ಗಳು ಈ ಬಗ್ಗೆ ಚರ್ಚೆ ನಡೆಸಿವೆಯೇ? ಎಂದು ಬರೆಯಲಾಗಿದೆ. ಅಲ್ಲದೆ, ನಮ್ಮ ಮಾಧ್ಯಮಗಳು ಮೋದಿ ಹೇಳುವುದನ್ನು ಕೇಳುವುದರಲ್ಲೇ ನಿರತರಾಗಿವೆ ಎಂದು ಫೋಟೋ ಬಗ್ಗೆ ಸುರೇಶ್​ ಪ್ರಭು ಎಂಬುವರು ಬರೆದುಕೊಂಡಿದ್ದಾರೆ.

    ಏಪ್ರಿಲ್​ 10ರಂದು ಫೋಟೋ ಅಪ್​ಲೋಡ್​​ ಆಗಿದ್ದು, ಈವರೆಗೆ 3 ಸಾವಿರಕ್ಕೂ ಹೆಚ್ಚು ಶೇರ್​ ಆಗಿದ್ದು ತುಂಬಾ ವೈರಲ್​ ಆಗಿದೆ.

    Our Media is busy in taking dictation from Modi! Shoooo now don't disturb.

    Suresh Prabhu ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಏಪ್ರಿಲ್ 10, 2020

    ಈ ವಿಚಾರ ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ಗಮನಕ್ಕೆ ಬಂದಿದ್ದು, ಸತ್ಯಾಂಶ ತಿಳಿಯಲು ಫ್ಯಾಕ್ಟ್​​ಚೆಕ್​ ನಡೆಸಿದಾಗ ಅಸಲಿ ವಿಚಾರ ಬಯಲಾಗಿದೆ. ವೈರಲ್​ ಫೋಟೋ ನಾಲ್ಕು ತಿಂಗಳಿಗೂ ಹೆಚ್ಚು ಹಳೆಯದಾಗಿದ್ದು, ಮಲೇಷಿಯಾದ ವಲಸಿಗ ಕೇಂದ್ರಕ್ಕೆ ಸಂಬಂಧಿಸಿದ್ದಾಗಿದೆ. ಫೋಟೋದಲ್ಲಿರುವವರು ಅಕ್ರಮ ವಲಸಿಗರಾಗಿದ್ದು, ಅವರೆಲ್ಲರೂ ಬಾಂಗ್ಲಾದೇಶ ಮೂಲದವರು. ತವರಿಗೆ ಮರಳಲು ಕಾಯುತ್ತಿರುವ ಫೋಟೋ ಇದಾಗಿದೆ.

    ಗೂಗಲ್​ ರಿವರ್ಸ್​ ಸರ್ಚ್​ ಇಂಜಿನ್​ನಲ್ಲಿ ಫೋಟೋವನ್ನು ಹುಡುಕಾಡಿದಾಗ ಫೋಟೋಗೆ ಸಂಬಂಧಿಸಿದ ನ್ಯೂಸ್​ ಅನ್ನು ಕಳೆದ ವರ್ಷ ಬಂಗಾಳಿ ನ್ಯೂಸ್​ ವೆಬ್​ಸೈಟ್​ಗಳಲ್ಲಿ ಪ್ರಕರಟವಾಗಿದೆ. ಜಾಗೊನ್ಯೂಸ್​ 24 ಡಾಟ್​ ಕಮ್​ (Jagonews24.com) ವೆಬ್​ಸೈಟ್​ನಲ್ಲಿ 2019, ಡಿಸೆಂಬರ್​ 25ರಂದು ಮಲೇಷಿಯಾದಲ್ಲಿರುವ ಅಕ್ರಮ ವಲಸಿಗರು ತವರಿಗೆ ಮರಳಲು ಕಾಯುತ್ತಿರುವುದು ಎಂಬ ತಲೆಬರಹದೊಂದಿಗೆ ಸುದ್ದಿ ಪ್ರಕಟವಾಗಿದೆ.

    ಅಕ್ರಮ ವಲಸಿಗರು ತಮ್ಮ ತವರಿಗೆ ಮರಳಬೇಕೆಂದು ಮಲೇಷಿಯಾ ಸರ್ಕಾರ ಗಡುವು ನೀಡಿದಾಗ ಅನೇಕ ಬಾಂಗ್ಲಾದೇಶಿಗರು ಮಲೇಷಿಯಾ ತೊರೆಯಲು ಅಲ್ಲಿನ ವಲಸಿಗರ ಕೇಂದ್ರದಲ್ಲಿ ಕಾದು ಕುಳಿತ್ತಿದ್ದ ಫೋಟೋ ಎಂಬುದು ತಿಳಿದುಬಂದಿದೆ.

    ಸದ್ಯದ ಲಾಕ್​ಡೌನ್​ ಸಮಯದಲ್ಲೂ ವಲಸಿಗ ಕಾರ್ಮಿಕರು ತೊಂದರೆ ಅನುಭವಿಸುತ್ತಿರುವುದು ಕೂಡ ನಿಜವಾಗಿದೆ. ಕರೊನಾಗೆ ಹೆದರಿ ಅನೇಕರು ತಮ್ಮ ಊರುಗಳಿಗೆ ತೆರಳಿದ್ದಾರೆ. ಆದರೆ, ವೈರಲ್​ ಆಗಿರುವ ಫೋಟೋಗೂ ಹೇಳಿರುವ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಫ್ಯಾಕ್ಟ್​ಚೆಕ್​ ಬಹಿರಂಗಪಡಿಸಿದೆ. (ಏಜೆನ್ಸೀಸ್​)

    ಕ್ವಾರಂಟೈನ್‌ ಅವಧಿ ಮುಗಿಸಿದ ಬಳಿಕ 17 ತಬ್ಲಿಘಿಗಳು ಜೈಲಿಗೆ ರವಾನೆ

    ಮನೆ ಬಾಡಿಗೆ ವಿನಾಯಿತಿ ಘೋಷಿಸಿ, ದೆಹಲಿ ಸರ್ಕಾರದ ಯೋಜನೆಯನ್ನು ಇಡೀ ದೇಶಕ್ಕೆ ಅನ್ವಯಿಸಿ: ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದ ಮಾಜಿ ಸಿಎಂ ಎಚ್​ಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts