More

  ಬಾಂಗ್ಲಾದಲ್ಲಿ ಅಗ್ನಿ ಅವಘಡ..40ಮಂದಿ ಮೃತ್ಯು

  ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದ ಏಳು ಅಂತಸ್ತಿನ ರೆಸ್ಟೋರೆಂಟ್‌ನಲ್ಲಿ ಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 44ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ 75 ಜನರನ್ನು ರಕ್ಷಿಸಿದ್ದಾರೆ. ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ.

  ಇದನ್ನೂ ಓದಿ: ಪ್ರಾಣಿ ಪ್ರಿಯರಿಗೆ ಸಿಹಿಸುದ್ದಿ.. ದೇಶದಲ್ಲಿ ಹೆಚ್ಚಾದ ಚಿರತೆ ಸಂತತಿ!

  ಢಾಕಾದ ಬೈಲಿ ರಸ್ತೆಯಲ್ಲಿರುವ ಬಿರಿಯಾನಿ ರೆಸ್ಟೋರೆಂಟ್‌ನಲ್ಲಿ ಗುರುವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಹಂತಹಂತವಾಗಿ ಮೇಲಿನ ಮಹಡಿಗಳಿಗೂ ವಿಸ್ತರಿಸಿದೆ. ಎರಡು ಗಂಟೆಯೊಳಗೆ ಬೆಂಕಿಯನ್ನು ಹತೋಟಿಗೆ ತರಲಾಯಿತು. ಘಟನೆ ನಡೆದ ಪ್ರದೇಶದಲ್ಲಿ ಅನೇಕ ರೆಸ್ಟೋರೆಂಟ್‌ಗಳು, ಬಟ್ಟೆ ಅಂಗಡಿಗಳು ಮತ್ತು ಮೊಬೈಲ್ ಫೋನ್ ಮಾರಾಟ ಕೇಂದ್ರಗಳಿವೆ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿ ಮೊಹಮ್ಮದ್ ಶಿಹಾಬ್ ತಿಳಿಸಿದ್ದಾರೆ.

  “ನಾವು ಆರನೇ ಮಹಡಿಯಲ್ಲಿದ್ದೆವು. ಮೆಟ್ಟಿಲುಗಳಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ್ದೆವು. ಎಲ್ಲರೂ ಕೆಳಗಿನಿಂದ ಮೇಲಕ್ಕೆ ಧಾವಿಸಿದರು. ನಾವೆಲ್ಲರೂ ನೀರಿನ ಪೈಪ್‌ಗಳ ಮೂಲಕ ಕೆಳಗೆ ಹೋದೆವು. ಕೆಲವರು ಮೇಲಿನಿಂದ ಜಿಗಿದ ನಂತರ ಗಂಭೀರವಾಗಿ ಗಾಯಗೊಂಡರು. ಕೆಲವರು ಕಟ್ಟಡದ ಮೇಲಕ್ಕೆ ತಲುಪಿದರು. ಅವರು ಸಹಾಯಕ್ಕಾಗಿ ಕರೆದರು ” ಎಂದು ರೆಸ್ಟೋರೆಂಟ್ ಮ್ಯಾನೇಜರ್ ಸೊಹೆಲ್ ಹೇಳಿದರು.

  ಬಾಂಗ್ಲಾದೇಶದ ಅಪಾರ್ಟ್‌ಮೆಂಟ್‌ಗಳು ಮತ್ತು ಫ್ಯಾಕ್ಟರಿ ಸಂಕೀರ್ಣಗಳಲ್ಲಿ ಬೆಂಕಿ ಅವಘಡಗಳು ಆಗಾಗ್ಗೆ ಸಂಭವಿಸುತ್ತವೆ. ಜುಲೈ 2021 ರಲ್ಲಿ ಆಹಾರ ಸಂಸ್ಕರಣಾ ಉದ್ಯಮದಲ್ಲಿ ಸಂಭವಿಸಿದ ಬೆಂಕಿಯಲ್ಲಿ ಅನೇಕ ಮಕ್ಕಳು ಸೇರಿದಂತೆ 52 ಜನರು ಮೃತಪಟ್ಟಿದ್ದರು. ಫೆಬ್ರವರಿ 2019 ರಲ್ಲಿ ಢಾಕಾದ ಅಪಾರ್ಟ್‌ಮೆಂಟ್ ಬ್ಲಾಕ್‌ಗಳಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 70 ಜನರು ಅಗ್ನಿಗೆ ಆಹುತಿಯಾಗಿದ್ದರು.

  ನೆರವಿಗೆ ಕಾದವರ ಮೇಲೆ ದಾಳಿ: 70 ಸಾವು – ಗಾಜಾದಲ್ಲಿ ಮೃತರ ಸಂಖ್ಯೆ 30ಸಾವಿರಕ್ಕೆ ಏರಿಕೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts