More

    ಪ್ರಾಣಿ ಪ್ರಿಯರಿಗೆ ಸಿಹಿಸುದ್ದಿ.. ದೇಶದಲ್ಲಿ ಹೆಚ್ಚಾದ ಚಿರತೆ ಸಂತತಿ!

    ನವದೆಹಲಿ: ಪ್ರಾಣಿ ಪ್ರಿಯರಿಗೆ ಪರಿಸರ ಸಚಿವಾಲಯ ಸಿಹಿಸುದ್ದಿ ನೀಡಿದೆ. ಫೆಬ್ರವರಿ 29ರ ವರೆಗೆ ದೇಶದಲ್ಲಿನ ಚಿರತೆಗಳ ಅಂಕಿಅಂಶ ಬಿಡುಗಡೆ ಮಾಡಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.1.08ರಷ್ಟು ಹೆಚ್ಚಾಗಿವೆ.

    ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ 2018-2022 ರ ಅವಧಿಯ ಚಿರತೆಗಳ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿದ್ದು, ಅದರಂತೆ 2022ರ ವೇಳೆಗೆ ಭಾರತದಲ್ಲಿ ಒಟ್ಟು 13,874 ಚಿರತೆಗಳು ಸಂಚರಿಸಿವೆ.

    ಇದನ್ನೂ ಓದಿ: ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಗೆ ಸಂಪುಟ ಅನುಮೋದನೆ..ಉಚಿತ ವಿದ್ಯುತ್​ಗಾಗಿ ಅರ್ಜಿ ಸಲ್ಲಿಸಿ

    ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 3,907 ಚಿರತೆಗಳಿವೆ. 2018ರಲ್ಲಿ ಕೇವಲ 3,421 ಚಿರತೆಗಳಿದ್ದವು. ಮಧ್ಯಪ್ರದೇಶದ ನಂತರ, ಮಹಾರಾಷ್ಟ್ರದಲ್ಲಿ ಹೆಚ್ಚು ಚಿರತೆಗಳು 1,985, ಕರ್ನಾಟಕ (1,879) ಮತ್ತು ತಮಿಳುನಾಡು (1,070) ಇವೆ.

    ಕೇಂದ್ರ ಅಧಿಕಾರಿಗಳ ತಂಡವು ನಾಲ್ಕು ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳನ್ನು ಒಳಗೊಂಡಂತೆ ಸುಮಾರು 18 ರಾಜ್ಯಗಳಲ್ಲಿ ಚಿರತೆಗಳ ಎಣಿಕೆ ಮಾಡಿದೆ. ಅರಣ್ಯರಹಿತ ಪ್ರದೇಶಗಳು, ಕರಾವಳಿ ಪ್ರದೇಶಗಳು, ಮರುಭೂಮಿಗಳು ಮತ್ತು ಎತ್ತರದ ಹಿಮಾಲಯದಂತಹ ಪ್ರದೇಶಗಳನ್ನು ಈ ಸಮೀಕ್ಷೆಯಲ್ಲಿ ಪರಿಗಣಿಸಲಾಗುವುದಿಲ್ಲ.
    2018 ರಲ್ಲಿ ಚಿರತೆಗಳ ಸಂಖ್ಯೆ 12,852 ಆಗಿತ್ತು, 5 ವರ್ಷಗಳಲ್ಲಿ 1,022 ಹೆಚ್ಚಾಗಿವೆ.

    ಚಿರತೆಗಳು ಮಧ್ಯ ಭಾಗದ ರಾಜ್ಯಗಳು ಮತ್ತು ಪೂರ್ವ ಘಟ್ಟಗಳಲ್ಲಿ 1.5 ಪ್ರತಿಶತದಷ್ಟು ಹೆಚ್ಚಾಗಿವೆ. ಶಿವಾಲಿಕ್ ಬೆಟ್ಟಗಳು ಮತ್ತು ಗಂಗಾ ಬಯಲು ಪ್ರದೇಶಗಳಲ್ಲಿ ಶೇಕಡಾ 3.4 ರಷ್ಟು ಇಳಿಕೆ ದಾಖಲಾಗಿವೆ. ಪ್ರಕೃತಿ ವಿನಾಶ, ಚಿರತೆಗಳ ಬೇಟೆ, ಕಾಡುಪ್ರಾಣಿಗಳ ನಡುವಿನ ಸಂಘರ್ಷವೇ ಚಿರತೆಗಳ ಸಾವಿಗೆ ಪ್ರಮುಖ ಕಾರಣ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಹೇಳಿದೆ.

    ಚಿರತೆಗಳ ಸಂಖ್ಯೆ ತಿಳಿಯಲು ಕೇಂದ್ರ ತಂಡ 6,41,449 ಕಿ.ಮೀ ಪ್ರದೇಶ ಸುತ್ತಿ ಸಮೀಕ್ಷೆ ನಡೆಸಿದೆ. 32,803 ಕಡೆ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಒಟ್ಟು 4 ಕೋಟಿ 70 ಲಕ್ಷ 81 ಸಾವಿರದ 881 ಫೋಟೋಗಳನ್ನು ಸಂಗ್ರಹಿಸಲಾಗಿದೆ. 85,488 ಫೋಟೋಗಳಲ್ಲಿ 13,874 ಚಿರತೆಗಳನ್ನು ಗುರುತಿಸಲಾಗಿದೆ.
    ಸಚಿವ ಭೂಪೇಂದರ್ ಮಾತನಾಡಿ, ವನ್ಯಜೀವಿಗಳ ರಕ್ಷಣೆಗೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಚಿರತೆಗಳ ಸಂಖ್ಯೆ ಹೆಚ್ಚಿರುವ ಬಗ್ಗೆ ಅಧಿಕಾರಿಗಳನ್ನು ಅಭಿನಂದಿಸಿದರು. ಕಾಡು ಪ್ರಾಣಿಗಳನ್ನು ರಕ್ಷಿಸುವ ಗುರಿ ತಲುಪಲಾಗುತ್ತಿದೆ ಎಂದು ವಿವರಿಸಿದರು.

    ಆತ್ಮಹತ್ಯೆಗೆ ಕಿರುಕುಳವೊಂದೇ ಕಾರಣವಲ್ಲ: ಪತಿ-ಪತ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ ಅಭಿಮತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts