More

    ಆತ್ಮಹತ್ಯೆಗೆ ಕಿರುಕುಳವೊಂದೇ ಕಾರಣವಲ್ಲ: ಪತಿ-ಪತ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ ಅಭಿಮತ

    ನವದೆಹಲಿ: ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಕಿರುಕುಳ ಮಾತ್ರ ಸಾಕಾಗುವುದಿಲ್ಲ, ಆತ್ಮಹತ್ಯೆಗೆ ಕಾರಣವಾಗುವ ಸಕ್ರಿಯ ಕ್ರಮ ಅಥವಾ ನೇರ ಕ್ರಮವೂ ಅಗತ್ಯ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

    ಪತಿಯ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಪತ್ನಿಯ ಪರವಾಗಿ ಸಂಬಂಧಿಕರು ಹೂಡಿರುವ ಪ್ರಕರಣ ಹಾಗೂ ಇದಕ್ಕೆ ಪ್ರತಿಕ್ರಿಯಿಸಿ ಪತಿ ಸಲ್ಲಿಸಿದ್ದ ಅರ್ಜಿ ನ್ಯಾಯಾಲಯದ ಮೆಟ್ಟಿಲೇರಿತ್ತು.

    ಇದನ್ನೂ ಓದಿ: ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಗೆ ಸಂಪುಟ ಅನುಮೋದನೆ..ಉಚಿತ ವಿದ್ಯುತ್​ಗಾಗಿ ಅರ್ಜಿ ಸಲ್ಲಿಸಿ

    ಕಿರುಕುಳ ಅಥವಾ ಕ್ರೌರ್ಯದ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದಿದ್ದಲ್ಲಿ, ಮದುವೆಯಾದ ಏಳು ವರ್ಷಗಳಲ್ಲಿ ತನ್ನ ಹೆಂಡತಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪುರುಷನನ್ನು ಅಪರಾಧಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

    ಹರಿಯಾಣದ ದಂಪತಿ 1992 ರಲ್ಲಿ ವಿವಾಹವಾಗಿದ್ದು, ಮದುವೆಯಾದ ದಿನದಿಂದ ಪತಿ ಮತ್ತು ಅತ್ತೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ಪ್ರಾಸಿಕ್ಯೂಷನ್ ಹೇಳಿದೆ. ಅಂಗಡಿ ತೆರೆಯುವಂತೆ ಪತಿ ಪತ್ನಿಗೆ ಒತ್ತಡ ಹೇರಿದ್ದ. ಪತಿ ಹಾಗೂ ಅತ್ತೆಯ ಕಿರುಕುಳ ತಾಳಲಾರದೆ ಮಹಿಳೆ 1993ರ ನವೆಂಬರ್ 19ರಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಳು.

    ಪತಿಯ ಕಿರುಕುಳದಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು. ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಪತಿ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದರು. ಎರಡೂವರೆ ದಶಕಗಳಿಂದ ನಡೆಯುತ್ತಿರುವ ಈ ಪ್ರಕರಣದಲ್ಲಿ ನ್ಯಾಯಮೂರ್ತಿ ಜೆ.ಬಿ.ಪರ್ಧಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಫೆ.29ರಂದು ತೀರ್ಪು ನೀಡಿದೆ.

    ಮದುವೆಯಾದ ಏಳು ವರ್ಷಗಳಲ್ಲಿ ಮಹಿಳೆಯನ್ನು ಆತ್ಮಹತ್ಯೆಗೆ ಪ್ರೇರೇಪಿಸುವ ವಿಷಯವನ್ನು ನಿಯಂತ್ರಿಸುವ ಕಾನೂನಿನ ಸರಿಯಾದ ತತ್ವಗಳನ್ನು ಅನ್ವಯಿಸುವಲ್ಲಿ ನ್ಯಾಯಾಲಯಗಳು ಬಹಳ ಎಚ್ಚರಿಕೆಯಿಂದ ಮತ್ತು ಜಾಗರೂಕರಾಗಿರಬೇಕು ಎಂದು ಅದು ಹೇಳಿದೆ.

    ಮೇಲ್ಮನವಿದಾರರ ಕಷ್ಟಗಳು 1993 ರಲ್ಲಿ ಪ್ರಾರಂಭವಾಯಿತು ಮತ್ತು 30 ವರ್ಷ ಪ್ರಕರಣ ಮುಂದುವರೆಯಿತು. 1998 ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಪತಿಯನ್ನು ದೋಷಿ ಎಂದು ತೀರ್ಪು ನೀಡಿತ್ತು. ಇದನ್ನು ನ್ಯಾಯಾಲಯವು ಗಮನಿಸಿತು.ಆತ ದೀರ್ಘಕಾಲದವರೆಗೆ ಅನುಭವಿಸಿದ ಮಾನಸಿಕ ಹಿಂಸೆಯು “ಅಪರಾಧ ನ್ಯಾಯ ವ್ಯವಸ್ಥೆಯು ವಿಧಿಸಿದ ಶಿಕ್ಷೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

    ಆತ್ಮಹತ್ಯೆಗೆ ಪ್ರಚೋದನೆ ನೀಡಿದ ವ್ಯಕ್ತಿಯನ್ನು ಶಿಕ್ಷೆಗೆ ಗುರಿಪಡಿಸಲು ಸಾಧ್ಯವಿಲ್ಲವಾದ್ದರಿಂದ ಕ್ರೌರ್ಯ ಅಥವಾ ಚಿತ್ರಹಿಂಸೆ ನೀಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಲ್ಲಿ ನ್ಯಾಯಾಲಯಗಳು ಜಾಗರೂಕರಾಗಿರಬೇಕು ಎಂದು ಪೀಠ ಸೂಚಿಸಿತು.

    ಸೈಕ್ಲಿಂಗ್​ ಮಾಡುವಾಗ ಕ್ಯಾಬ್​ ಡಿಕ್ಕಿ: ಇಂಟೆಲ್ ಇಂಡಿಯಾ ಮಾಜಿ ಮುಖ್ಯಸ್ಥ ಅವತಾರ್ ಸೈನಿ ಮೃತ್ಯು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts