More

    ನೆರವಿಗೆ ಕಾದವರ ಮೇಲೆ ದಾಳಿ: 70 ಸಾವು – ಗಾಜಾದಲ್ಲಿ ಮೃತರ ಸಂಖ್ಯೆ 30ಸಾವಿರಕ್ಕೆ ಏರಿಕೆ

    ರಾಪಾ: ಗಾಜಾ ನಗರದಲ್ಲಿ ಮತ್ತೆ ನೆತ್ತರು ಚೆಲ್ಲಿದೆ. ಮಾನವೀಯ ನೆರವಿಗಾಗಿ ಕಾಯುತ್ತಿದ್ದ ಜನರ ಮೇಲೆ ನಡೆದ ಉಗ್ರ ದಾಳಿಯಲ್ಲಿ ಸುಮಾರು 70 ಮಂದಿ ಮೃತಪಟ್ಟಿದ್ದಾರೆ. ಸುಮಾರು 280 ಜನ ಗಾಯಗೊಂಡಿದ್ದಾರೆ.

    ಇದನ್ನೂ ಓದಿ: ಪ್ರಾಣಿ ಪ್ರಿಯರಿಗೆ ಸಿಹಿಸುದ್ದಿ.. ದೇಶದಲ್ಲಿ ಹೆಚ್ಚಾದ ಚಿರತೆ ಸಂತತಿ!

    2023ರ ಅಕ್ಟೋಬರ್ 7 ರಂದು ಹಮಾಸ್​ ಉಗ್ರರು ಇಸ್ರೇಲ್​ ಮೇಲೆ ನಡೆಸಿದ ದಾಳಿಯ ನಂತರ, ಇಸ್ರೇಲ್ ಹಮಾಸ್ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಗಾಜಾ ಮೇಲೆ ಯುದ್ಧ ಸಾರಿರುವುದು ತಿಳಿದ ಸಂಗತಿಯೇ. ವೈಮಾನಿಕ ದಾಳಿಯಲ್ಲಿ ಗಾಜಾ ನಗರವು ಬಹುತೇಕ ಸ್ಮಶಾನದಂತಾಗಿದೆ. ಸ್ಥಳೀಯವಾಗಿ ಸಹಾಯ ಮಾಡುವುದು ಸಹ ಕಷ್ಟಕರವಾಗಿದೆ ಎಂದು ಸಂಬಂಧಿತ ಸಂಸ್ಥೆಗಳು ಬಹಿರಂಗಪಡಿಸಿವೆ.

    ಈ ಬೆಳವಣಿಗೆಗಳ ನಡುವೆಯೇ ಮತ್ತೆ ದಾಳಿ ನಡೆದಿದೆ. ಮೃತ ದೇಹಗಳು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಾಕಷ್ಟು ಆಂಬ್ಯುಲೆನ್ಸ್‌ಗಳಿಲ್ಲದ ಕಾರಣ ಕತ್ತೆ ಗಾಡಿಯಲ್ಲಿ ಕರೆತರಲಾಗುತ್ತಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಘಟನೆಯ ವಿವರಗಳನ್ನು ತನಿಖೆ ನಡೆಸುತ್ತಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

    ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡವರ ಒಟ್ಟು ಸಂಖ್ಯೆ 30 ಸಾವಿರ ಮೀರಿದೆ ಎಂದು ಗಾಜಾದ ಆರೋಗ್ಯ ಇಲಾಖೆ ಬಹಿರಂಗಪಡಿಸಿದೆ. ಸತ್ತವರಲ್ಲಿ ಮೂರನೇ ಎರಡರಷ್ಟು ಮಹಿಳೆಯರು ಮತ್ತು ಮಕ್ಕಳು ಎಂದು ಅದು ಹೇಳಿದೆ. 70 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸುಮಾರು ಆರು ಲಕ್ಷ ಜನರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಈಗಾಗಲೇ ಕಳವಳ ವ್ಯಕ್ತಪಡಿಸಿದೆ.

    ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಗೆ ಸಂಪುಟ ಅನುಮೋದನೆ..ಉಚಿತ ವಿದ್ಯುತ್​ಗಾಗಿ ಅರ್ಜಿ ಸಲ್ಲಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts