More

    ಧರಣಿ ನಿರತ ರೈತರ ಬಂಧನ ಖಂಡನೀಯ

    ಸಾಗರ: ಕಳೆದ ಮೂರು ವರ್ಷಗಳಿಂದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ರೈತ ವಿರೋಧಿ ಧೋರಣೆ ಖಂಡಿಸಿ ಮಂಗಳವಾರ ತಡರಾತ್ರಿ ರೈತ ಸಂಘ(ಡಾ. ಎಚ್.ಗಣಪತಿಯಪ್ಪ ಬಣ) ಸದಸ್ಯರು ಉಪವಿಭಾಗಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಿದರು.
    ರೈತ ಸಂಘವು ಮೂರು ವರ್ಷಗಳಿಂದ ತಾಳಗುಪ್ಪ ಕೂಡ್ಲಿ ಮಠ ರೈತರ ಸಮಸ್ಯೆ ಸೇರಿ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟ, ಪಾದಯಾತ್ರೆ, ಪ್ರತಿಭಟನೆ, ಧರಣಿ ನಡೆಸುತ್ತಿದೆ. ಆದರೆ ಅಧಿಕಾರಿಗಳು ಸರ್ಕಾರದ ಸುತ್ತೋಲೆ ಇದ್ದರೂ ರೈತರಿಗೆ ನ್ಯಾಯ ದೊರಕಿಸಿ ಕೊಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಹೋರಾತ್ರಿ ಧರಣಿ ನಡೆಸಿದರು.
    ಬುಧವಾರ ಬೆಳಗ್ಗೆ ಮಿನಿ ವಿಧಾನಸೌಧ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಪಕ್ಕದಲ್ಲಿ ಧರಣಿ ಕುಳಿತ್ತಿದ್ದ ರೈತರನ್ನು ಅಲ್ಲಿಂದ ಕಳಿಸಲು ಬೆಳಗ್ಗೆ 5ರ ಸುಮಾರಿಗೆ 20ಕ್ಕೂ ಹೆಚ್ಚು ಅಧಿಕಾರಿಗಳು ಭೇಟಿ ನೀಡಿ ರೈತರನ್ನು ವಶಕ್ಕೆ ಪಡೆದು, ಅಹೋರಾತ್ರಿ ಧರಣಿ ಮೊಟಕುಗೊಳಿಸುವಂತೆ ಮಾಡಿದರು.
    ಬೆಳ್ಳಂಬೆಳಗ್ಗೆ ಸ್ಥಳಕ್ಕಾಗಮಿಸಿದ ರೈತರನ್ನು ಬಂಧಿಸಲು ಪೊಲೀಸರು ಮುಂದಾದ ಕ್ರಮದ ವಿರುದ್ಧ ರೈತ ಪ್ರಮುಖರು ತೀವ್ರ ವಿರೊಧ ವ್ಯಕ್ತಪಡಿಸದರು. ರೈತರು ಕಷ್ಟದಲ್ಲಿದ್ದಾಗ ವಿಷಯ ತಿಳಿದರೂ ಸ್ಥಳಕ್ಕೆ ಬಾರದ ಪೊಲೀಸರು ಪ್ರತಿಭಟನಾ ನಿರತ ರೈತರನ್ನು ವಶಕ್ಕೆ ಪಡೆಯಲು ಮುಂದಾಗಿರುವ ಕ್ರಮ ಖಂಡನೀಯ. ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಪೊಲೀಸರ ಜತೆ ರೈತರು ವಾಗ್ವಾದ ನಡೆಸಿದರು.

    ರೈತ ಮುಖಂಡರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ಸಂಘದ ಪ್ರಮುಖರು ನಗರಸಭೆ ಆವರಣದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಸಂಘದ ತಾಲೂಕು ಅಧ್ಯಕ್ಷ ಡಾ.ರಾಮಚಂದ್ರಪ್ಪ ಮನೆಘಟ್ಟ, ಪ್ರಮುಖರಾದ ಹೊಯ್ಸಳ ಗಣಪತಿಯಪ್ಪ, ರಮೇಶ್ ಇ. ಕೆಳದಿ, ಕುಮಾರ ಗೌಡ, ಭದ್ರೇಶ್ ಬಾಳಗೋಡು, ಕಿರಣ್ ಕುಮಾರ್ ಇತರರಿದ್ದರು.

    ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಸತ್ತು ಹೋಗಿದೆ. ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೂ ಜನಪ್ರತಿನಿಧಿಗಳು ಏಕೆ ಪ್ರತಿಭಟನೆ ಎಂದು ಕನಿಷ್ಟ ಸೌಜನ್ಯಕ್ಕೂ ಕೇಳಿಲ್ಲ. ಪೂರ್ಣ ಸೌಲಭ್ಯ ಇರದ ಮಿನಿ ವಿಧಾನಸೌಧ ಲೋಕಾರ್ಪಣೆ ಸಂದರ್ಭದಲ್ಲಿ ರೈತರಿಂದ ತೊಂದರೆ ಎದುರಾಗಬಹುದೆಂದು ನಮ್ಮನ್ನು ಬಂಧಿಸಿರುವುದು ಅಕ್ಷಮ್ಯ.
    ದಿನೇಶ್ ಶಿರವಾಳ ರೈತ ಸಂಘದ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts