ನವದೆಹಲಿ: ವಿಶ್ವ ವ್ಯಾಪಿ ಕರೊನಾ ವೈರಸ್ ತೀವ್ರವಾಗಿ ಹರಡುತ್ತಿರುವ ಬೆನ್ನಲ್ಲೇ ಕರೊನಾ ವೈರಸ್, ಹರಡುವ ಬಗ್ಗೆ, ವೈರಸ್ ಸೋಂಕು ತಗುಲಿದಾಗ ಉಂಟಾಗುವ ಪರಿಣಾಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದೆ.
ಸುಳ್ಳು ವದಂತಿಯಿಂದ ಸಾರ್ವಜನಿಕರು ಭೀತಿಗೊಳ್ಳುವ ಹಿನ್ನೆಲೆಯಲ್ಲಿ ಕರೊನಾ ವೈರಸ್ ಬಗ್ಗೆ ಯಾವ ಮೂಲದಿಂದ ಮಾಹಿತಿ ಪಡೆಯಬೇಕು ಎಂಬುದರ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕರೊನಾ ವೈರಸ್ ಬಗ್ಗೆ ಅಧಿಕೃತ ಮಾಹಿತಿಗಾಗಿ ಕೆಳಕಂಡ ಸಾಮಾಜಿಕ ಜಾಲ ತಾಣದಿಂದ ಮಾಹಿತಿ ಪಡೆಯುವಂತೆ ಇಲಾಖೆ ಸಾರ್ವಜನಿಕರಿಗೆ ಸೂಚಿಸಿದೆ. ಈ ತಾಣಗಳಲ್ಲಿ ಲಭ್ಯವಾಗುವ ಮಾಹಿತಿ ಅಧಿಕೃತ ಎಂದು ಇಲಾಖೆ ತಿಳಿಸಿದೆ.
ಅಧಿಕೃತ ಜಾಲತಾಣಗಳು ಯಾವುವು:
ಕೇಂದ್ರ ಆರೋಗ್ಯ ಸಚಿವಾಲಯದ ಟ್ವಿಟ್ಟರ್ ಹ್ಯಾಂಡಲ್: twitter@MOHFW_INDIA
ಕೇಂದ್ರ ಆರೋಗ್ಯ ಸಚಿವಾಲಯದ ಫೇಸ್ಬುಕ್ ಖಾತೆ: facebook@MOHFWindia
ಕೇಂದ್ರ ಸರ್ಕಾರದ ಪ್ಪ್ರೆಸ್ ಇನ್ಫರ್ಮೇಷನ್ ಆಫ್ ಬ್ಯೂರೋದ ಟ್ವಿಟರ್ ಹ್ಯಾಂಡಲ್: twitter@PIB_india ಹಾಗೂ twitter@PIBHindi
ಫೇಸ್ ಬುಕ್ ಖಾತೆ : facebook@pibindia
ಕೇಂದ್ರ ಆರೋಗ್ಯ ಸಚಿವರ ಟ್ವಿಟರ್ ಹ್ಯಾಂಡಲ್: twitter@drharshvardhan
ಫೇಸ್ಬುಕ್ ಖಾತೆ: facebook@drharshvardhanofficial
ವಿಶ್ವ ಆರೋಗ್ಯ ಸಂಸ್ಥೆಯ ಟ್ವಿಟರ್ ಹ್ಯಾಂಡಲ್: twitter@WHO
ವಿಶ್ವ ಆರೋಗ್ಯ ಸಂಸ್ಥೆಯ ಫೇಸ್ಬುಕ್ ಖಾತೆ: facebook@WHO
ಇವುಗಳಿಂದ ಮಾತ್ರ ಅಧಿಕೃತ ಮಾಹಿತಿ ಪಡೆಯಿರಿ ಎಂದು ಇಲಾಖೆ ತಿಳಿಸಿದೆ. (ಏಜೆನ್ಸೀಸ್)