More

    FACT CHECK| ಮತಯಾಚನೆ ವೇಳೆ ದೆಹಲಿ ಗಲ್ಲಿಯಲ್ಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಮೇಲೆ ಮಹಿಳೆ ತ್ಯಾಜ್ಯ ನೀರು ಸುರಿದಿದ್ದು ನಿಜವೇ?

    ನವದೆಹಲಿ: ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರ ಮೇಲೆ ಮಹಿಳೆಯೊಬ್ಬರು ತ್ಯಾಜ್ಯ ನೀರು ಸುರಿದಿದ್ದಾರೆ ಎನ್ನುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

    ಚುನಾವಣೆ ವೇಳೆ ಅವರು ಮತ ಯಾಚಿಸಲು ಗಲ್ಲಿಯೊಂದಕ್ಕೆ ತೆರಳಿದ ವೇಳೆ ಮಹಿಳೆ ಅವರ ಮೇಲೆ ತ್ಯಾಜ್ಯ ನೀರು ಸುರಿದಿದ್ದಾರೆ ಎಂದು ಮಾಹಿತಿ ಹೊಂದಿರುವ ಫೋಟೋ ಹರಿದಾಡುತ್ತಿತ್ತು. ಈ ಪೋಟವನ್ನು ಹಲವು ಫೇಸ್​ಬುಕ್​ ಬಳಕೆದಾರರು ಮರು ಹಂಚಿಕೆ ಮಾಡಿದ್ದರು. ಆದರೆ ಈ ಫೋಟೋ ನಕಲಿ ಎಂಬುದು ಫ್ಯಾಕ್ಟ್​ ಚೆಕ್​ನಿಂದ ಪತ್ತೆಯಾಗಿದೆ.

    ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಫ್ಯಾಕ್ಟ್​ ಚೆಕ್​ ನಡೆಸಿ ವೈರಲ್​ ಆಗಿರುವ ಚಿತ್ರ ನಕಲಿ ಎಂದು ಸಾಬೀತುಪಡಿಸಿದೆ.

    ಆಗಸ್ಟ್​ 2017ರಲ್ಲಿ ನಡೆದ ಉಪ ಚುನಾವಣೆ ವೇಳೆ ಕೇಜ್ರಿವಾಲ್​ ಪ್ರಚಾರ ನಡೆಸುತ್ತಿದ್ದ ವೇಳೆ ತೆಗೆದ ಚಿತ್ರ ಅದು. ಆ ವೇಳೆಯೂ ಅವರ ಮೇಲೆ ತ್ಯಾಜ್ಯ ನೀರು ಸುರಿದ ಉದಾಹರಣೆ ಇಲ್ಲ. ಆಗಸ್ಟ್​ನಲ್ಲಿ ದೆಹಲಿಯಲ್ಲಿ ಬಿಸಿಲು ಅಧಿಕವಾಗಿದ್ದು ಪ್ರಚಾರದ ವೇಳೆ ಬೆವರಿನಿಂದ ಒಟ್ಟೆ ಒದ್ದೆಯಾಗಿದೆ. ಆ ವೇಳೆ ತೆಗೆದ ಚಿತ್ರ ಎಂದು ತಿಳಿದು ಬಂದಿದೆ.

    ಫೇಸ್​ಬುಕ್​ ಬಳಕೆದಾರ ಹಾರ್ದಿಕ್​ ಗೋಯಲ್​ ಎಂಬುವವರು ಒದ್ದೆ ಬಟ್ಟೆ ಧರಿಸಿದ ಕೇಜ್ರಿವಾಲ್​ ಪೋಟೋ ಹಾಕಿ ಹಿಂದಿಯಲ್ಲಿ ಶೀರ್ಷಿಕೆ ಬರೆದು ಅಪ್​ಲೋಡ್​ ಮಾಡಿದ್ದರು. ಈ ಪೋಟೋವನ್ನು ಹಲವು ಮಂದಿ ಮರು ಹಂಚಿಕೆ ಮಾಡಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts