More

    ನಮಸ್ಕಾರ, ನನ್ನ ಹೆಸರು ಸುನೀತಾ ಕೇಜ್ರಿವಾಲ್… ಭಾವುಕರಾಗಿ ಕೇಜ್ರಿವಾಲ್ ಜೈಲಿನಿಂದ ಕಳುಹಿಸಿದ ಪತ್ರವನ್ನು ಓದಿದ ಪತ್ನಿ

    ನವದೆಹಲಿ: ಕೇಜ್ರಿವಾಲ್ ಬಂಧನದ ನಂತರ ಪತ್ನಿ ಸುನೀತಾ ಕೇಜ್ರಿವಾಲ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಪತಿ ಕೇಜ್ರಿವಾಲ್ ಅವರು ಜೈಲಿನಿಂದ ಕಳುಹಿಸಿದ್ದ ಸಂದೇಶವನ್ನು ಸುನಿತಾ ಸಾರ್ವಜನಿಕರ ಮುಂದೆ ಓದಿದರು. ಕೋಟ್ಯಂತರ ಜನರ ಪ್ರಾರ್ಥನೆ ಕೇಜ್ರಿವಾಲ್ ಜೊತೆಗಿದೆ ಎಂದು ಸುನೀತಾ ಹೇಳಿದ್ದಾರೆ. ದೆಹಲಿಯ ಜನರು ದೇವಸ್ಥಾನಕ್ಕೆ ಹೋಗಿ ಕೇಜ್ರಿವಾಲ್‌ಗಾಗಿ ಪ್ರಾರ್ಥಿಸಬೇಕು. ಕೇಜ್ರಿವಾಲ್ ಅವರು ನೀಡಿದ ಪ್ರತಿ ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಕೇಜ್ರಿವಾಲ್ ತುಂಬಾ ಪವರ್ ಫುಲ್. ಮೇಡ್ ಆಫ್ ಐರನ್ ಎಂದು ತಿಳಿಸಿದ್ದಾರೆ.   

    ಕೇಜ್ರಿವಾಲ್ ಸಾರ್ವಜನಿಕರಿಗೆ ಹೇಳಿದ್ದೇನು?  

    ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ‘ನಾನು ಜೈಲಿಗೆ ಹೋಗಿರುವುದರಿಂದ ಸಮಾಜ ಕಲ್ಯಾಣ ಮತ್ತು ಸಾರ್ವಜನಿಕ ಕಲ್ಯಾಣದ ಕೆಲಸಗಳು ನಿಲ್ಲಬಾರದು ಎಂದು ಆಮ್ ಆದ್ಮಿ ಪಕ್ಷದ ಎಲ್ಲಾ ಕಾರ್ಯಕರ್ತರಲ್ಲಿ ನಾನು ಮನವಿ ಮಾಡುತ್ತೇನೆ. ಬಿಜೆಪಿಯವರನ್ನು ದ್ವೇಷಿಸಬೇಡಿ. ಅವರು ನಮ್ಮ ಸಹೋದರ ಸಹೋದರಿಯರು. ನಾನು ಶೀಘ್ರದಲ್ಲಿ ಮರಳುತ್ತೇನೆ.

    ಭಾರತದ ಒಳಗೆ ಮತ್ತು ಹೊರಗೆ ಅನೇಕ ಶಕ್ತಿಗಳು ದೇಶವನ್ನು ದುರ್ಬಲಗೊಳಿಸುತ್ತಿವೆ. ನಾವು ಜಾಗರೂಕರಾಗಿರಬೇಕು, ಈ ಶಕ್ತಿಗಳನ್ನು ಗುರುತಿಸಬೇಕು ಮತ್ತು ಅವುಗಳನ್ನು ಸೋಲಿಸಬೇಕು. ಕೇಜ್ರಿವಾಲ್ ಕಂಬಿ ಹಿಂದೆ ಬಿದ್ದಿದ್ದಾರೆ. 1000 ಸಿಗುತ್ತದೋ ಇಲ್ಲವೋ ಯಾರಿಗೆ ಗೊತ್ತು ಎಂದು ದೆಹಲಿಯ ಮಹಿಳೆಯರು ಯೋಚಿಸುತ್ತಿರಬಹುದು. ಆದರೆ ಅವರ ಸಹೋದರ, ಮಗನನ್ನು ನಂಬುವಂತೆ ನಾನು ಅವರಿಗೆ ಮನವಿ ಮಾಡುತ್ತೇನೆ. ಬಹುಕಾಲ ಕಂಬಿಗಳ ಹಿಂದೆ ಇಡಲು ಯಾವುದೇ ಜೈಲು ಇಲ್ಲ. ನಾನು ಶೀಘ್ರದಲ್ಲೇ ಹೊರಗೆ ಬಂದು ನನ್ನ ಭರವಸೆಯನ್ನು ಈಡೇರಿಸುತ್ತೇನೆ” ಎಂದು ತಿಳಿಸಿದ್ದಾರೆ.

    ಅರವಿಂದ್ ಕೇಜ್ರಿವಾಲ್ ಬಂಧನದ ನಂತರ ಸುನೀತಾ ಕೇಜ್ರಿವಾಲ್ ತುಂಬಾ ಸಕ್ರಿಯರಾಗಿದ್ದಾರೆ ಎಂಬುದು ಗಮನಾರ್ಹ. ಶುಕ್ರವಾರವೂ ಟ್ವೀಟ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡಿದ್ದರು. ಅಧಿಕಾರದ ದುರಹಂಕಾರದಿಂದ ಮೋದಿಜಿ ಎಲ್ಲರನ್ನೂ ತುಳಿಯಲು ಯತ್ನಿಸುತ್ತಿದ್ದಾರೆ . ಇದು ದೆಹಲಿ ಜನತೆಗೆ ಮಾಡಿದ ದ್ರೋಹ.ನಿಮ್ಮ ಮುಖ್ಯಮಂತ್ರಿ ಸದಾ ನಿಮ್ಮೊಂದಿಗೆ ನಿಂತಿದ್ದಾರೆ.ಒಳಗಿರಲಿ ಹೊರಗಿರಲಿ ಅವರ ಜೀವನ ದೇಶಕ್ಕೆ ಮುಡಿಪಾಗಿದೆ.ಅವರು ಜನಾರ್ದನ ಎಂಬುದು ಸಾರ್ವಜನಿಕರಿಗೆ ಎಲ್ಲವೂ ಗೊತ್ತಿದೆ ಎಂದು ಹೇಳಿದ್ದರು.   

    ‘ಸತ್ಯ ಯಾವಾಗಲೂ ಗೆಲ್ಲುತ್ತದೆ, ವೆಲ್ ಕಮ್ ಟು ತಿಹಾರ್ ಜೈಲ್’: ಮತ್ತೆ ಕೇಜ್ರಿವಾಲ್ ಮೇಲೆ ಕಿಡಿಕಾರಿದ ಸುಕೇಶ್  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts