More

    ಸೌಲಭ್ಯ ಪಡೆದು ಶಿಕ್ಷಣವಂತರಾಗಿ

    ಅಳವಂಡಿ: ಮಕ್ಕಳು ದೇಶದ ಸಂಪತ್ತು, ಅವರಿಗೆ ಪ್ರಾಥಮಿಕ ಹಂತದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ಶಿಕ್ಷಕರು ರೂಪಿಸಬೇಕು ಎಂದು ಗ್ರಾಪಂ ಪಿಡಿಓ ಕೊಟ್ರಪ್ಪ ಅಂಗಡಿ ತಿಳಿಸಿದರು.

    ಇದನ್ನೂ ಓದಿ: ಹೊಸ ಶಿಕ್ಷಕಿಯರಿಗೆ 6 ತಿಂಗಳ ಶಿಶುಪಾಲನಾ ರಜೆ: ಗೊಂದಲ ಬಗೆಹರಿಸಿದ ಶಿಕ್ಷಣ ಇಲಾಖೆ

    ಗ್ರಾಮದ ಶ್ರೀಮುದಕನಗೌಡ ಗಾಳಿ ಬಾಲಕಿಯರ ಪ್ರೌಢಶಾಲೆಯಲ್ಲಿ ಜಿಪಂ, ತಾಪಂ ಕೊಪ್ಪಳ, ಗ್ರಾಪಂ ಅಳವಂಡಿ ಹಾಗೂ ಇತರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಮಕ್ಕಳ ಹಕ್ಕುಗಳ ಗ್ರಾಮಸಭೆಯಲ್ಲಿ ಬುಧವಾರ ಮಾತನಾಡಿದರು.

    ಮಕ್ಕಳಿಗೆ ಶಿಕ್ಷಣ ಮೂಲಭೂತ ಹಕ್ಕಾಗಿದೆ, ಇದಕ್ಕೆ ಬೇಕಾದ ಮೂಲಸೌಲಭ್ಯಗಳನ್ನು ಗ್ರಾಮ ಪಂಚಾಯತ ಒದಿಗಿಸಲು ಸಿದ್ಧವಿದೆ. ಮಕ್ಕಳು ಸರಕಾರ ನೀಡುವ ಶೈಕ್ಷಣಿಕ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾವಂತರಾಗಿ ಸಮಾಜದಲ್ಲಿ ಉತ್ತಮ ಸ್ಥಾನಗಳಿಸಿಕೊಳ್ಳಿ ಎಂದರು.

    ಗ್ರಾಪಂ ಸದಸ್ಯ ಗುರುಬಸವರಾಜ ಹಳ್ಳಿಕೇರಿ ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಲು ಶಿಕ್ಷಣ ಅಗತ್ಯ. ಮಕ್ಕಳು ಓದುವ ವಯಸ್ಸಿನಲ್ಲಿ ಬೇರೆ ಕಡೆ ಲಕ್ಷ ವಹಿಸದೆ ಓದಿನತ್ತ ಗಮನ ಕೋಡಿ, ಶಿಕ್ಷಣ ಮುಂದಿನ ಜೀವನದ ದಾರಿ ತೋರಲಿದೆ. ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು ಹಾಗೂ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿಗಳಿಂದ ಮಕ್ಕಳನ್ನು ರಕ್ಷಿಸಬೇಕು ಎಂದರು.

    ಮಕ್ಕಳೊಂದಿಗೆ ಶಾಲೆಗಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಉಪಾಧ್ಯಕ್ಷೆ ಶಾರವ್ವ ಇಳಿಗೇರ, ಕಾರ್ಯದರ್ಶಿ ಬಸವರಾಜ, ಗ್ರಾಪಂ ಸದಸ್ಯರಾದ ಹನುಮಂತ ಮೂಲಿಮನಿ, ಪ್ರಶಾಂತಗೌಡ ಪಾಟೀಲ, ವಿಶ್ವನಾಥ ದೋತರಗಾವಿ, ರೇಣುಕಾ ರಡ್ಡಿ, ಶಶಿಕಲಾ ನಾಗರಳ್ಳಿ,

    ಮುಖ್ಯಶಿಕ್ಷಕ ಸುರೇಂದ್ರಗೌಡ, ಸಿಆರ್‌ಪಿ ವಿಜಯಕುಮಾರ ಟಿಕಾರೆ, ಆರೋಗ್ಯ ಇಲಾಖೆಯ ರವೀಂದ್ರ ಕಮ್ಮಾರ, ಅಂಗನವಾಡಿ ಮೇಲ್ವಿಚಾರಕಿ ರೆಹಮತ್‌ಬೀ, ಸಿಬ್ಬಂದಿ ಶಿವಮೂರ್ತಿ, ದೇವೆಂದ್ರರಡ್ಡಿ, ಸುರೇಶ, ದೇವೆಂದ್ರ, ಮಾರುತಿ ಅಂಗನವಾಡಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts