More

    ಹೊಸ ಶಿಕ್ಷಕಿಯರಿಗೆ 6 ತಿಂಗಳ ಶಿಶುಪಾಲನಾ ರಜೆ: ಗೊಂದಲ ಬಗೆಹರಿಸಿದ ಶಿಕ್ಷಣ ಇಲಾಖೆ

    ಬೆಂಗಳೂರು ಹೊಸದಾಗಿ ಸೇವೆಗೆ ಸೇರಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿಯರಿಗೆ ಮಗುವಿನ ಆರೈಕೆ ಹಿತದೃಷ್ಟಿಯಿಂದ 6 ತಿಂಗಳ ಶಿಶುಪಾಲನಾ ರಜೆಯನ್ನು ಶಿಕ್ಷಣ ಇಲಾಖೆಯು ಮಂಜೂರು ಮಾಡಿದೆ.

    ಹೊಸದಾಗಿ ಸೇವೆಗೆ ಸೇರಿರುವ ಶಿಕ್ಷಕಿಯರಿಗೆ ಸೇವೆಗೆ ಸೇರುವ 15ರಿಂದ 20 ದಿನಗಳ ಅವಧಿಯಲ್ಲಿ ಹಲವು ಶಿಕ್ಷಕಿಯರು ಮಗುವಿಗೆ ಜನ್ಮ ನೀಡಿದ್ಸಾರೆ. ಈ ಹಿನ್ನೆಲೆಯಲ್ಲಿ ಸೇವೆ ದಾಖಲಾಗಿ ಹೆರಿಗೆ ರಜೆ ನೀಡುವಂತೆ ಸಂಬಂಧಪಟ್ಟ ಜಿಲ್ಲಾ ಉಪನಿರ್ದೇಶಕರಿಗೆ ಮನವಿ ಮಾಡಿದ್ದರು.

    ಈಗಷ್ಟೇ ಹೊಸದಾಗಿ ಸೇವೆಗೆ ಸೇರಿರುವ ಶಿಕ್ಷಕಿಯರಿಗೆ ರಜೆ ನೀಡಬೇಕೋ ಬೇಡವೋ ಎಂಬ ಗೊಂದಲ ಉಂಟಾಗಿ ಹಾವೇರಿ ಮತ್ತು ಮಂಡ್ಯ ಸೇರಿ ಇತರೆ ಜಿಲ್ಲೆಗಳ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದರು.

    ಇಂತಹ ಪತ್ರಗಳಿಗೆ ಪ್ರತಿಕ್ರಿಯಿಸಿರುವ ಇಲಾಖೆ ಆಯುಕ್ತೆ ಬಿ.ಬಿ. ಕಾವೇರಿ, ಕೆಸಿಎಸ್‌ಆರ್ ನಿಯಮ 135ರ ಅನ್ವಯ ಮಹಿಳಾ ಸರ್ಕಾರಿ ನೌಕರರಿಗೆ ಆರಂಭದ ದಿನಾಂಕದಿಂದ 180 ದಿನಗಳ ರಜೆ ಮಂಜೂರು ಮಾಡಲು ಅವಕಾಶವಿದೆ. ಆದರೆ, ಈ ಪ್ರಕರಣಗಳಲ್ಲಿ ಶಿಕ್ಷಕಿಯರಿಗೆ ಸರ್ಕಾರಿ ನೌಕರಿಗೆ ಸೇರುವ ಪೂರ್ವದಲ್ಲಿಯೇ ಹೆರಿಗೆಯಾಗಿದ್ದು, ಆ ನಂತರದಲ್ಲ ಸರ್ಕಾರಿ ಸೇವೆಯ ಕರ್ತವ್ಯಕ್ಕೆ ಹಾಜರಾಗಿರುವುದು ತಿಳಿದು ಬಂದಿದೆ.

    ನಿಯಮಗಳ ಪ್ರಕಾರ ಯಾವುದೇ ಮಹಿಳಾ ಸರ್ಕಾರಿ ನೌಕರರಿಗೆ ಕಿರಿಯ ಮಗುವು 18 ವರ್ಷ ತಲುಪುವವರೆಗೆ ಶಿಶುಪಾಲನಾ ರಜೆಗೆ ಅರ್ಹತೆ ಹೊಂದಿರುತ್ತಾರೆ. ಈ ಪ್ರಕರಣಗಳನ್ನು ವಿಶೇಷ ಸಂದರ್ಭವೆಂದು ಪರಿಗಣಿಸಿ ಸೇವೆಗೆ ಸೇರುವ ಮೊದಲೇ ಹೆರಿಗೆಯಾಗಿರುವುದರಿಂದ ಮತ್ತು ಈಗಾಗಲೇ ಸೇವೆಯಲ್ಲಿರುವ ನೌಕರರಿಗೆ 6 ತಿಂಗಳ ಹೆರಿಗೆ ರಜೆ ಸೌಲಭ್ಯವಿರುವುದನ್ನು ಗಮನಿಸಲಾಗಿದೆ. ತಾಯಿ ಮತ್ತು ಮಗುವಿನ ಆರೈಕೆ ಹಿತದೃಷ್ಟಿಯಿಂದ ಮಗುವಿಗೆ 6 ತಿಂಗಳು ತುಂಬುವ ತನಕ ಆದೇಶದ ಷರತ್ತುಗಳಿಗೆ ಒಳಪಟ್ಟು ಶಿಶುಪಾಲನಾ ರಜೆಯನ್ನು ಮಂಜೂರು ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts