More

    ಕರೊನಾ ಒಂದು ಸಣ್ಣ ಜ್ವರವಷ್ಟೇ: ಟ್ರಂಪ್​ ಪೋಸ್ಟ್​ ವಿರುದ್ಧ ಫೇಸ್​ಬುಕ್​, ಟ್ವಿಟರ್ ಗರಂ!

    ವಾಷಿಂಗ್ಟನ್​: ಜಗತ್ತಿನಾದ್ಯಂತ ಮೃತ್ಯಕೂಪವನ್ನು ನಿರ್ಮಿಸಿರುವ ಕರೊನಾ ವೈರಸ್​ ಲಕ್ಷಾಂತರ ಮಂದಿಯನ್ನು ತನ್ನ ಸಾವಿನ ಬಲೆಯಲ್ಲಿ ಹಾಕಿಕೊಂಡಿದೆ. ವೈರಸ್​ನ ಗಂಭೀರತೆ ತೀವ್ರ ಪ್ರಮಾಣದಲ್ಲಿರುವಾಗ ಅದೊಂದು ಸಣ್ಣ ಜ್ವರವಷ್ಟೇ ಎಂದು ಪೋಸ್ಟ್​ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ವಿರುದ್ಧ ಫೇಸ್​ಬುಕ್​ ಮತ್ತು ಟ್ವಿಟರ್​ ಕ್ರಮ ಜರುಗಿಸಿವೆ. ​

    ಟ್ರಂಪ್​ ಅವರ ಪೋಸ್ಟ್​ ತಪ್ಪು ಮಾಹಿತಿ ಎಂದಿರುವ ಫೇಸ್​ಬುಕ್​ ಅದನ್ನು ತೆಗೆದುಹಾಕಿದೆ. ವಿಪಾರ್ಯಾಸವೆಂದರೆ ಪೋಸ್ಟ್​ ಅದಾಗಲೇ 26 ಸಾವಿರಕ್ಕೂ ಹೆಚ್ಚು ಬಾರಿ ಶೇರ್​ ಆಗಿದೆ. ಕೋವಿಡ್​-19 ಗಂಭೀರತೆ ಕುರಿತ ತಪ್ಪಾದ ಮಾಹಿತಿಯನ್ನು ತೆಗೆದು ಹಾಕಿದ್ದೇವೆ ಎಂದು ಫೇಸ್​ಬುಕ್​ ವಕ್ತಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

    ಕರೊನಾ ಕುರಿತು ಟ್ರಂಪ್​ ಮಂಗಳವಾರ ಟ್ವೀಟ್ ಮಾಡಿದ್ದರು. ಇದೀಗ ಎಲ್ಲ ರೀಟ್ವೀಟ್​ಗಳನ್ನು ನಿಷ್ಕ್ರಿಯಗೊಳಿಸಿರುವ ಟ್ವಿಟರ್​, ಎಚ್ಚರಿಕೆಯ ಫಲಕವನ್ನು ಸೇರಿಸಿ, ಇದು ಕರೊನಾ ವಿಚಾರದಲ್ಲಿ ತಪ್ಪು ಮಾಹಿತಿ ಮತ್ತು ಸಂಭವನೀಯ ಹಾನಿಕಾರಕ ಮಾಹಿತಿಯಾಗಿದೆ. ಹೀಗಾಗಿ ನಿಷ್ಕ್ರಿಯಗೊಳಿಸಲಾಗಿದೆ ಎಂದಿದೆ.

    ಇದನ್ನೂ ಓದಿ: ಚೀನಾ ವಿರುದ್ಧ ತಂತ್ರ ಹೆಣೆಯಲು ಕರೆ: ಕ್ವಾಡ್ ದೇಶಗಳ ವಿದೇಶಾಂಗ ಸಚಿವರ ಜತೆ ಜಪಾನ್ ಪ್ರಧಾನಿ ಸಭೆ 

    ಇನ್ನು ಕರೊನಾ ವೈರಸ್​ ಅಮೆರಿಕದಲ್ಲಿ ಅಟ್ಟಹಾಸವನ್ನೇ ಮೆರೆದಿದೆ. ಇದುವರೆಗೂ ಅಮೆರಿಕಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ.

    ಇದೇ ಕರೊನಾಗೆ ಅಮೆರಿಕ ಅಧ್ಯಕ್ಷ ಟ್ರಂಪ್​ ಸಹ ಹೊರತಾಗಿಲ್ಲ. ಕೋವಿಡ್​ಗೆ ಚಿಕಿತ್ಸೆ ಪಡೆದು ನಿನ್ನೆಯಷ್ಟೇ ಟ್ರಂಪ್​ ಡಿಸ್ಚಾರ್ಜ್​ ಆಗಿದ್ದಾರೆ. ಇದರ ಬೆನ್ನಲ್ಲೇ ಟ್ರಂಪ್​ ಕರೊನಾ ಒಂದು ಸಣ್ಣ ಜ್ವರವಷ್ಟೇ ಎಂದು ಉಡಾಫೆಯಾಗಿ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದರು. ಹೀಗಾಗಿ ಫೇಸ್​ಬುಕ್​ ಮತ್ತು ಟ್ವಿಟರ್​ ಕ್ರಮ ತೆಗೆದುಕೊಂಡಿದೆ. ಟ್ರಂಪ್​ ಪತ್ನಿ ಮೆಲನಿಯಾರಿಗೂ ಕೋವಿಡ್​ ಪಾಸಿಟಿವ್​ ಆಗಿತ್ತು. (ಏಜೆನ್ಸೀಸ್​)

    ದಲಿತ ಶಾಸಕನ ಅಂತರ್ಜಾತಿ ವಿವಾಹ ಪ್ರಕರಣ: ಸ್ಫೋಟಕ ಹೇಳಿಕೆ ನೀಡಿದ ಯುವತಿ ಸೌಂದರ್ಯ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts