More

    ಸವಾಲು ಎದುರಿಸಿ ಭವಿಷ್ಯ ರೂಪಿಸಿಕೊಳ್ಳಿ

    ಶೃಂಗೇರಿ: ಆಧುನಿಕ ಯುಗದಲ್ಲಿ ಹಲವು ಸವಾಲುಗಳು ಎದುರಿಗಿವೆ. ಪ್ರಶಿಕ್ಷಣಾರ್ಥಿಗಳು ಆತ್ಮವಿಶ್ವಾಸದಿಂದ ಜೀವನದಲ್ಲಿ ಮುನ್ನಡೆಯುವ ಅಗತ್ಯವಿದೆ. ಈ ಹಿಂದೆ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಹೆಚ್ಚಿನ ಅವಕಾಶವಿರಲಿಲ್ಲ. ಪ್ರಸ್ತುತ ವಿದ್ಯಾರ್ಥಿಗಳ ಸೃಜನಶೀಲತೆಗೆ ಮುಕ್ತ ಅವಕಾಶಗಳಿವೆ. ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಬಿಜಿಎಸ್ ಕಾಲೇಜಿನ ಪ್ರಾಚಾರ್ಯ ಕೆ.ಸಿ.ನಾಗೇಶ್ ಹೇಳಿದರು.

    ಶೃಂಗೇರಿ ಆದಿಚುಂಚನಗಿರಿ ಬಿಜಿಎಸ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ನೂತನ ಮತ್ತು ಅಂತಿಮ ವರ್ಷದ ಪ್ರಶಿಕ್ಷಣಾರ್ಥಿಗಳ ಸಮಾಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಮಕ್ಕಳ ಪ್ರತಿಭೆಯನ್ನು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಯ ವ್ಯಕ್ತಿತ್ವ ರೂಪಿಸುವಲ್ಲಿ ಪಾಲಕರು ಮತ್ತು ಗುರುವಿನ ಪಾತ್ರ ಹೆಚ್ಚು. ಸಾಂಸ್ಕೃತಿಕ ಭಾವವಿದ್ದರೆ ಮನಸ್ಸು ಸ್ವಚ್ಛವಾಗುತ್ತದೆ. ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಯಿಂದ ಉತ್ತಮ ವ್ಯಕ್ತಿತ್ವ ರೂಪಿಸಲು ಸಾಧ್ಯ. ಆಧುನಿಕ ಬದುಕಿನಲ್ಲಿ ಒತ್ತಡ ಸಹಜ. ಹಾಗಾಗಿ ವಿದ್ಯಾರ್ಥಿಗಳು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಹೇಳಿದರು.
    ವಿಜ್ಞಾನ ವಿಭಾಗದ ಮುಖ್ಯಸ್ಥ ಸಂಜಯ್ ಮಿರ್ಜಿ ಮಾತನಾಡಿ, ವಿದ್ಯಾರ್ಥಿಗಳು ಪ್ರತಿ ಹಂತದಲ್ಲಿ ಗುರುಗಳ ಮಾರ್ಗದರ್ಶನ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು. ಬಾಲ್ಯದಿಂದಲೇ ಉತ್ತಮಗುಣ, ಧೈರ್ಯ, ಏಕಾಗ್ರತೆ, ಶ್ರದ್ಧೆ, ಪ್ರಯತ್ನ, ಹೊಣೆಗಾರಿಕೆ ಬೆಳೆಸಿಕೊಂಡಾಗ ಸಮರ್ಥ ನಾಯಕತ್ವ ಬೆಳೆಯಲು ಸಾಧ್ಯ ಎಂದರು.
    ನಿವೃತ್ತ ಮುಖ್ಯಶಿಕ್ಷಕ ಮಂಡಗಾರು ಜನಾರ್ದನ್ ಮಾತನಾಡಿ, ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ಮೈಮರೆತಿದ್ದಾರೆ. ದೇಶಪ್ರೇಮ ಮತ್ತು ವಿಶಾಲ ಮನೋಭಾವ ಕಡಿಮೆಯಾಗುತ್ತಿದೆ. ಶಿಕ್ಷಣ ಬದುಕು ಕಟ್ಟಿಕೊಳ್ಳುವುದಕ್ಕೆ ಸೀಮಿತವಾಗಿರಬಾರದು. ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣದ ಅಗತ್ಯ ಇದೆ. ಹುಡುಗಾಟಕ್ಕಿಂತ ಹುಡುಕಾಟದ ಬದುಕ ಸಾರ್ಥಕ ಎಂದು ತಿಳಿಸಿದರು.
    ಪ್ರಶಿಕ್ಷಣಾರ್ಥಿಗಳ ವಿದ್ಯಾರ್ಥಿ ಸಂಘಕ್ಕೆ ಚಾಲನೆ ನೀಡಲಾಯಿತು. ಗೌರವ ಅಧ್ಯಕ್ಷರಾಗಿ ಕೆ.ಸಿ.ನಾಗೇಶ್, ಅಧ್ಯಕ್ಷರಾಗಿ ಪೂರ್ಣೇಶ್, ಅನಿಲ್‌ಕುಮಾರ್, ಕೆ.ಸಿ.ಮೇಘಾ, ಜೀವನ್‌ಕುಮಾರ್, ಸಂದೀಪ್, ಶ್ರೀನಾಥ್, ಭೀಮೇಶ್ ಪ್ರಮಾಣವಚನ ಸ್ವೀಕರಿಸಿದರು. ಪ್ರಾಧ್ಯಾಪಕರಾದ ಎ.ಸಿ.ರಮೇಶ್, ಅಮೃತಾ, ಶಂಕರ್ ನಾಯ್ಕ, ಧನ್ಯಕುಮಾರ್, ಭಾಗ್ಯಲಕ್ಷ್ಮೀ, ನಿಶಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts