More

    ಶುಗರ್, ಬಿಪಿ ಇದ್ದರೆ ಕಣ್ಣಿನ ಸಮಸ್ಯೆ ಹೆಚ್ಚು

    ಎನ್.ಆರ್.ಪುರ: ಕಣ್ಣಿನ ಪೊರೆ ತೆಗೆದು ಮಸೂರ ಅಳವಡಿಸುವಷ್ಟು ತಂತ್ರಜ್ಞಾನ ಮುಂದುವರಿದಿದೆ ಎಂದು ಬೆಂಗಳೂರಿನ ಶ್ರೀ ಶಾರದಾ ಕಣ್ಣು ಮತ್ತು ದಂತ ಚಿಕಿತ್ಸಾಲಯದ ನೇತ್ರಾಧಿಕಾರಿ ಬಿ.ಕೆ.ಬಾಬು ತಿಳಿಸಿದರು.

    ಭಾನುವಾರ ಪುಷ್ಪಾ ಆಸ್ಪತ್ರೆಯಲ್ಲಿ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ಪರೀಕ್ಷೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ದಲ್ಲಿ ಮಾತನಾಡಿ, ಆಸ್ಪತ್ರೆಯಿಂದ ನೇತ್ರ ತಪಾಸಣೆ ಶಿಬಿರ ನಡೆಸುತ್ತಿದ್ದೇವೆ. ಕಣ್ಣಿನ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದವರಿಗೆ ಶೃಂಗೇರಿ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. 40 ವರ್ಷ ನಂತರ ಕಣ್ಣಿನ ಪೊರೆ ಬರುವುದು ಸಾಮಾನ್ಯ. ಮಧುಮೇಹ, ಬಿಪಿ ಇದ್ದವರಿಗೆ ಕಣ್ಣಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಅಂಥವರು 8 ತಿಂಗಳಿಗೊಮ್ಮೆ ನೇತ್ರ ಪರೀಕ್ಷೆ ಮಾಡಿಸಬೇಕು ಎಂದು ಸಲಹೆ ನೀಡಿದರು.
    ರೋಟರಿ ಮಾಜಿ ಅಧ್ಯಕ್ಷ ಎಸ್.ಎಸ್.ಶಾಂತಕುಮಾರ್ ಮಾತನಾಡಿ, ರೋಟರಿ ಸಂಸ್ಥೆ ಪುಷ್ಪಾ ಆಸ್ಪತ್ರೆ ಸಹಕಾರದೊಂದಿಗೆ ಹಲವು ಸೇವಾ ಕಾರ್ಯಕ್ರಮ ನಡೆಸಿದ್ದೇವೆ. ನೇತ್ರ ತಪಾಸಣಾ ಶಿಬಿರವನ್ನು ಪ್ರತಿಯೊಬ್ಬರೂ ಉಪಯೋಗಿಸಿಕೊಳ್ಳಬೇಕು ಎಂದರು.
    65 ಜನರು ನೇತ್ರ ಪರೀಕ್ಷೆ ಮಾಡಿಸಿಕೊಂಡಿದ್ದು 12 ಜನರಿಗೆ ಶಸ್ತ್ರಚಿಕಿತ್ಸೆ ಮಾಡಿಸಲು ಸೂಚಿಸಲಾಯಿತು. ತಾಲೂಕು ಹಿರಿಯ ನಾಗರಿಕ ಸಮಿತಿ ಅಧ್ಯಕ್ಷ ಎಚ್.ಆರ್.ದಿನೇಶ್, ಡಾ. ಮೇರಿಸೂಸನ್ನ, ಡಾ. ರಶ್ಮಿ, ಬಿ.ಕೆ.ಜಾನಕೀರಾಂ, ವಿದ್ಯಾ ನಂದಕುಮಾರ್, ಕೆ.ಎಸ್.ರಾಜಕುಮಾರ್, ಆಬೀದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts