More

    ಎರಡು ಸಾವಿರಕ್ಕೂ ಅಧಿಕ ಜನರಿಗೆ ಕಣ್ಣಿನ ತಪಾಸಣೆ

    ಮಳವಳ್ಳಿ: ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಕಣ್ಣಿನ ತಪಾಸಣಾ ಶಿಬಿರವನ್ನು ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶದ ಸಾವಿರಕ್ಕೂ ಅಧಿಕ ನಾಗರಿಕರು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ ಎಂದು ಮೈಸೂರಿನ ಉಷಾಕಿರಣ ಕಣ್ಣಿನ ಆಸ್ಪತ್ರೆ ಸಂಸ್ಥಾಪಕ ಡಾ.ರವಿಶಂಕರ್ ಸಂತಸ ವ್ಯಕ್ತಪಡಿಸಿದರು.

    ಪಟ್ಟಣದ ಪುರಸಭೆ ಪಕ್ಕದಲ್ಲಿರುವ ರೋಟರಿ ಭವನದಲ್ಲಿ ಡಿ.11 ರಿಂದ 13 ರವರೆಗೆ ರೋಟರಿ ಇ-ಕ್ಲಬ್ ಹಾಗೂ ಅಂಧತ್ವ ನಿವಾರಣಾ ಪೌಂಢೇಷನ್ ಬೆಂಗಳೂರು, ರೋಟರಿ ಸಂಸ್ಥೆ ಮಳವಳ್ಳಿ ಮತ್ತು ಮೈಸೂರಿನ ಉಷಾಕಿರಣ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನೇತ್ರ ತಪಾಸಣಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

    ಶಿಬಿರದಲ್ಲಿ ಇಂಗ್ಲೆಂಡಿನ ಕಣ್ಣಿನ ತಜ್ಞವೈದ್ಯ ಡಾ.ಕಾಂತಿಲಾಲ್ ಮಿಶ್ರ ನೇತೃತ್ವದಲ್ಲಿ 30ಕ್ಕೂ ಹೆಚ್ಚು ನೇತ್ರ ಪರೀಕ್ಷಕರು ಮತ್ತು ನೇತ್ರ ತಜ್ಞರಿಂದ ತಪಾಸಣೆ ನಡೆಸಿದ್ದು, ಕಣ್ಣಿನ ತೊಂದರೆ ಇರುವ ಎರಡು ಸಾವಿರಕ್ಕೂ ಅಧಿಕ ಜನರು ತಪಾಸಣೆ ಮಾಡಿಸಿಕೊಂಡಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಉಚಿತವಾಗಿ ಔಷಧಗಳು ಹಾಗೂ ಕನ್ನಡಕಗಳನ್ನು ವಿತರಿಸಲಾಗಿದೆ. ಶಸ್ತ್ರಚಿಕಿತ್ಸೆ ಅಗತ್ಯವಿರುವವರಿಗೆ ಮೈಸೂರಿನಲ್ಲಿರುವ ನಮ್ಮ ಉಷಾಕಿರಣ ಆಸ್ಪತ್ರೆಗೆ ಬಂದು ಮಾಡಿಸಿಕೊಳ್ಳಲು ಸಲಹೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

    ರೋಟರಿ ಸಂಸ್ಥೆಯ ಅಧ್ಯಕ್ಷ ಪುಷ್ಪೇಂದ್ರ ಅಗರವತ್, ಕಾರ್ಯದರ್ಶಿ ಉಪೇಂದ್ರ ಚೌಧರಿ, ಸಂಚಾಲಕ ಎಂ.ವಿ. ಸೋಮಶೇಖರ್, ರೋಟರಿಯನ್‌ಗಳಾದ ಘನಶ್ಯಾಂದಾಸ್, ಎಂ.ಜೆ.ಸುರೇಶ್, ಹತೀಕ್, ಹಬೀಬ್ ಹುಲ್ಲಾಖಾನ್, ಆರ್.ಜಿ.ಮಹದೇವಸ್ವಾಮಿ, ಪ್ರಕಾಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts