More

    ಕಿರಣ್ ಮಜುಂದಾರ್ ಶಾ ಮುಡಿಗೆ ಪ್ರತಿಷ್ಠಿತ ಇವೈ ವಿಶ್ವದ ವರ್ಷದ ಉದ್ಯಮಿ ಪ್ರಶಸ್ತಿ

    ದೆಹಲಿ: ಬಯೋಕಾನ್​ ಕಂಪನಿಯ ಕಾರ್ಯನಿರ್ವಾಹಕ ಮುಖ್ಯಸ್ಥರಾದ ಕಿರಣ್​ ಮಜುಂದಾರ್​ ಶಾ ಅವರು 2020ನೇ ಸಾಲಿನ ಪ್ರತಿಷ್ಠಿತ ಎರ್ನೆಸ್ಟ್ ಆ್ಯಂಡ್ ಎಂಗ್ ವಿಶ್ವದ ವರ್ಷದ ಉದ್ಯಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಇದನ್ನೂ ಓದಿ:  ಆನೆಗಳನ್ನು ಹೀಗೆ ದಾರುಣವಾಗಿ ಕೊಲ್ಲುವುದು ಕೇರಳದಲ್ಲಿ ಮಾಮೂಲಿಯಂತೆ!

    ಪ್ರಶಸ್ತಿಯ 20 ವರ್ಷಗಳ ಇತಿಹಾಸದಲ್ಲಿ, ಈ ಪ್ರಶಸ್ತಿಗೆ ಭಾಜನರಾದ ಮೂರನೇ ಭಾರತೀಯ ವ್ಯಕ್ತಿ ಇವರಾಗಿದ್ದಾರೆ. ಕೊಟಕ್ ಮಹೀಂದ್ರಾ ಬ್ಯಾಂಕ್​ ನ ಉದಯ್ ಕೊಟಕ್ (2014) ಮತ್ತು ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್ ನ ನಾರಾಯಣ ಮೂರ್ತಿ (2005) ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಇದನ್ನೂ ಓದಿ: ಮಾಲ್, ಹೋಟೆಲ್ ದೇಗುಲ ಎಂಟ್ರಿ ಟೈಟ್: ವೃದ್ಧರು, ಮಕ್ಕಳು, ಗರ್ಭಿಣಿಯರಿಗಿಲ್ಲ ಪ್ರವೇಶ

    2011ರಲ್ಲಿ ಸಿಂಗಪುರದ ಹೈಫ್ಲಕ್ಸ್ ಲಿಮಿಟೆಡ್‌ನ ಒಲಿವಿಯಾ ಲುಮ್ ಅವರ ನಂತರ ಈ ಪ್ರಶಸ್ತಿಯನ್ನು ಪಡೆದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೂ ಮಜುಂದಾರ್ ಶಾ ಪಾತ್ರರಾಗಿದ್ದಾರೆ. 67 ವರ್ಷದ ಮಜುಂದಾರ್-ಶಾ 1978 ರಲ್ಲಿ ಕೇವಲ ಇಬ್ಬರು ಉದ್ಯೋಗಿಗಳು ಮತ್ತು 500 ಡಾಲರ್​​​​ದೊಂದಿಗೆ ಬಯೋಕಾನ್ ಕಂಪನಿಯನ್ನು ಸ್ಥಾಪಿಸಿದರು.

    ಇದನ್ನೂ ಓದಿ: ಗ್ಲೋಬಲ್ ವ್ಯಾಕ್ಸಿನ್ ಅಲಯನ್ಸ್ “ಗವಿ” ಖಾತೆಗೆ 15 ದಶಲಕ್ಷ ಡಾಲರ್ : ಪ್ರಧಾನಿ ಮೋದಿ ವಾಗ್ದಾನ

    ವರ್ಚುವಲ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಯೋಕಾನ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಅವರನ್ನು ಗುರುವಾರ ಇವೈ ‘2020 ರ ವಿಶ್ವ ಉದ್ಯಮಿ’ ಎಂದು ಘೋಷಿಸಲಾಯಿತು. 41 ದೇಶಗಳು ಮತ್ತು ಪ್ರಾಂತ್ಯಗಳ 46 ಸ್ಫರ್ಧಿಗಳನ್ನು ಹಿಂದಿಕ್ಕಿ ಅವರು ಜಯ ಸಾಧಿಸಿದ್ದಾರೆ.

    ರಾಜ್ಯಸಭಾ ಚುನಾವಣೆ: ಪಕ್ಷದಿಂದ ಯಾವ ಆದೇಶ ಬರುತ್ತದೋ ಅದನ್ನು ಪಾಲಿಸುತ್ತೇನೆ- ಡಾ. ವಿಜಯ ಸಂಕೇಶ್ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts