More

    ಮಹಾವೀರರ ತತ್ವಗಳನ್ನು ಪಾಲಿಸಿ

    ರಬಕವಿ/ಬನಹಟ್ಟಿ: ಜೈನ್ ಧರ್ಮದ ಉಗಮ ಪ್ರಥಮ ತೀಥರ್ಂಕರ ಭಗವಾನ್ ಋಷಭದೇವರ ಆವಿರ್ಭಾವದೊಂದಿಗೆ ಉಂಟಾಯಿತು. ಆದರೂ 24ನೇ ತೀರ್ಥಂಕರ ಭಗವಾನ್ ಮಹಾವೀರರನ್ನೇ ಧರ್ಮದ ಪ್ರತಿಷ್ಠಾಪಕರೆಂದು ಗೌರವಿಸಲಾಗುವುದು. ಅವರ ತತ್ವ ಸಿದ್ಧಾಂತಗಳನ್ನು ಇಂದಿನ ಪೀಳಿಗೆ ಅನುಸರಿಸಬೇಕು ಎಂದು ಉದ್ಯಮಿ ಸತೀಶ ಹಜಾರೆ ತಿಳಿಸಿದರು.

    ರಬಕವಿಯಲ್ಲಿ ಭಗವಾನ್ ಮಹಾವೀರ ಜಯಂತಿ ನಿಮಿತ್ತ ಸೋಮವಾರ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
    ಹಿಂದು ಧರ್ಮದ ಅವತಾರಗಳೊಂದಿಗೆ ತೀಥರ್ಂಕರರನ್ನು ಹೋಲಿಸಬಹುದು. ತೀರ್ಥಂಕರರ ಜನ್ಮ- ಕರ್ಮಗಳು ದಿವ್ಯ ಹಾಗೂ ಅಭೂತಪೂರ್ವವಾಗಿವೆ. ಅವರ ಸಾಧನೆಗಳು ಸಾಧಾರಣ ಮಾನವನ ಕಲ್ಪನೆಯನ್ನೂ ಮೀರಿದವು ಎಂದರು.

    ಇತಿಹಾಸ ಅಧ್ಯಯನದಿಂದ ಜೈನ್ ಧರ್ಮದ ಪ್ರಾಚೀನತೆಯ ಅರಿವಾಗುತ್ತದೆ. ಮಹಾಭಾರತ ಯುದ್ಧ ನಡೆಯುತ್ತಿದ್ದ ಸಮಯದಲ್ಲಿ 22ನೇ ತೀಥರ್ಂಕರ ಭಗವಾನ್ ನೇಮಿನಾಥರು ಧರ್ಮಪ್ರಚಾರ ಮಾಡುತ್ತಿದ್ದರು. ಶ್ರೀಮದ್ಭಾಗವತದಲ್ಲಿ ಮೊದಲ ತೀರ್ಥಂಕರರ ಹೆಸರಿದೆ. ಪ್ರಥಮ ತೀರ್ಥಂಕರರು ಹಾಗೂ 22ನೇ ತೀರ್ಥಂಕರರ ನಡುವೆ 1000 ವರ್ಷಗಳ ವ್ಯತ್ಯಾಸವಿತ್ತು ಎಂದು ನಾವು ಭಾವಿಸಿದರೂ ಪ್ರಥಮ ತೀರ್ಥಂಕರರು ಬಹಳ ಪುರಾತನರು ಎಂದೇ ಪರಿಗಣಿಸಬೇಕಾಗುತ್ತದೆ ಎಂದರು.
    ಇದಕ್ಕೂ ಪೂರ್ವದಲ್ಲಿ ನಗರದ ಹೃದಯ ಭಾಗದಲ್ಲಿರುವ ಜೈನ್ ಬಸದಿಯಿಂದ ನಗರದ ಹೊರವಲಯದಲ್ಲಿರುವ ಜೈನ್ ಬಸದಿವರೆಗೆ ಮಹಾವೀರ ಭಗವಾನರ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು.

    ಪ್ರಸನ್ನ ಹಜಾರೆ, ಪ್ರದೀಪ ಹಜಾರೆ, ಡಾ. ಅಭಿನಂದನ ಡೋರ್ಲೆ, ಭುಜಬಲಿ ಜಕನೂರ, ಸತೀಶ ಸಿರಗಾರ, ಬಿ.ಡಿ. ನೇಮಗೌಡ, ಮಹಾವೀರ ವಿರೋಜ, ಸಂದೇಶ ಹೊನಗೌಡ, ದಿಲೀಪ ಜೈನ, ವಿಜಯ ಸುರಗೊಂಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts