More

    ವೀರಶೈವ ಮಹಾಸಭಾ ಸದಸ್ಯತ್ವ ಪಡೆಯುವ ಅವಧಿ ವಿಸ್ತರಣೆ

    ಶಿಕಾರಿಪುರ: ಅಖಿಲ ಭಾರತ ವೀರಶೈವ ಮಹಾಸಭಾದ ಸದಸತ್ವ ಪಡೆಯುವ ಅವಧಿಯನ್ನು ಜೂ.5ರವರೆಗೆ ವಿಸ್ತರಿಸಲಾಗಿದೆ. ರಾಷ್ಟ್ರ ಮತ್ತು ರಾಜ್ಯ ಮಹಾಸಭಾ ಚುನಾವಣೆಗೆ ಮತ ಚಲಾಯಿಸಲು ಸದಸ್ಯತ್ವ ಪಡೆದುಕೊಳ್ಳುವುದು ಕಡ್ಡಾಯ ಎಂದು ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಎನ್.ವಿ.ಈರೇಶ್ ಮನವಿ ಮಾಡಿದರು.

    ಸದಸ್ಯತ್ವ ಪಡೆಯುವುದರಿಂದ ಮತದಾರರ ಸಂಖ್ಯೆ ಹೆಚ್ಚಾಗಲಿದೆ. ಸ್ಥಳೀಯ ಸಂಸ್ಥೆಗಳಿಗೆ ಸದಸ್ಯತ್ವದ ಶೇ.90ರಷ್ಟು ಹಣ ಮರುಪಾವತಿ ಆಗುವುದರಿಂದ ಸ್ಥಳೀಯ ಸಂಘಗಳನ್ನು ಸಂಘಟಿಸಿ ಅಭಿವೃದ್ಧಿಪಡಿಸಲು ನೆರವಾಗುತ್ತದೆ. ರಾಜ್ಯದಲ್ಲಿ ವೀರಶೈವ ಲಿಂಗಾಯತರು ಹೆಚ್ಚಿನ ಜನಸಂಖ್ಯೆಯಿದೆ. ಆದರೆ ವೀರಶೈವ ಮಹಾಸಭಾ ಸದಸ್ಯತ್ವ ಪಡೆದವರ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಸಮಾಜದವರು ಸದಸ್ಯತ್ವ ಪಡೆದು ಸಂಘಟನೆಯನ್ನು ಗಟ್ಟಿಗೊಳಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ತಾಲೂಕು, ಮಹಾನಗರ ಪಾಲಿಕೆ, ಜಿಲ್ಲಾ ಘಟಕಗಳ ಅಧ್ಯಕ್ಷರ ಆಯ್ಕೆಗಾಗಿ ಮೊದಲ ಹಂತದ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಜೂ.27ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಜು.4 ನಾಮಪತ್ರ ಸ್ವೀಕಾರಕ್ಕೆ ಕೊನೆಯ ದಿನ. 5ರಂದು ನಾಮಪತ್ರ ಪರಿಶೀಲನೆ, 8ರಂದು ನಾಮಪತ್ರ ವಾಪಸ್ ಪಡೆಯಲು ಕೊನೇ ದಿನ. 21ರಂದು ಮತದಾನ ನಡೆಯಲಿದೆ. ಅದೇ ದಿನ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ ಎಂದರು.
    ಎರಡನೇ ಹಂತದಲ್ಲಿ ರಾಜ್ಯ ಘಟಕದ ಅಧ್ಯಕ್ಷರು, ಕಾರ್ಯನಿರ್ವಾಹಕ ಸಮಿತಿ ಸದಸ್ಯರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆ ನಡೆಯಲಿದೆ. ಆ.1ರಿಂದ ನಾಮಪತ್ರ ಸ್ವೀಕಾರ, 7ರಂದು ಉಮೇದುವಾರಿಕೆ ಸಲ್ಲಿಕೆಗೆ ಅಂತಿಮ ದಿನ. 8ರಂದು ನಾಮಪತ್ರ ಪರಿಶೀಲನೆ, 11ರಂದು ವಾಪಸ್ ಪಡೆಯಲು ಕೊನೆಯ ದಿನ. 15ರಂದು ಮತದಾನ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದರು.
    ಅಖಿಲ ಭಾರತ ವೀರಶೈವ ಮಹಾಸಭಾ ಮುಖಂಡರಾದ ಕುಮಾರಸ್ವಾಮಿ, ಹಿರೇಮಠ, ವೀರನಗೌಡ , ಗಿರೀಶ್ ಧಾರವಾಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts