More

    ಬಾಹ್ಯಾಕಾಶದಲ್ಲೂ ಸಿದ್ಧವಾಗುತ್ತೆ ಹೋಟೆಲ್​! 90 ನಿಮಿಷದಲ್ಲಿ ಪ್ರಪಂಚವನ್ನೇ ಸುತ್ತಬಹುದು!

    ವಾಷಿಂಗ್ಟನ್​: ಕರ್ನಾಟಕ, ಭಾರತ, ಪೂರ್ತಿ ವಿಶ್ವವೇ ನಿಮಗೆ ಬೇಸರ ತರಿಸಿಬಿಟ್ಟಿದೆಯೇ? ಹಾಗಾದರೆ ಸದ್ಯದಲ್ಲೇ ನಿಮಗೆ ವಿಶೇಷ ಅವಕಾಶವೊಂದು ಸಿಗಲಿದೆ. ಇನ್ನು ಕೆಲ ವರ್ಷಗಳಲ್ಲಿ ಬಾಹ್ಯಾಕಾಶದಲ್ಲೇ ಹೋಟೆಲ್​ ಸಿದ್ಧವಾಗಲಿದ್ದು, ನೀವು ಈ ಭೂಮಿಯನ್ನೇ ಬಿಟ್ಟು ಹೋಗಿರಬಹುದು.

    ಡೈಲಿ ಮೇಲ್​ ಪತ್ರಿಕೆಯ ವರದಿಯ ಪ್ರಕಾರ ಆರ್ಬಿಟಲ್​ ಅಸೆಂಬ್ಲಿ ಹೆಸರಿನ ಸಂಸ್ಥೆ ಇಂತದ್ದೊಂದು ಸಾಹಸಕ್ಕೆ ಕೈ ಹಾಕಲಿದೆ. ಲೋ ಅರ್ಥ್​ ಆರ್ಬಿಟ್​ನಲ್ಲಿ ಒಂದು ಸ್ಟೇಷನ್​ ತಯಾರಿಸಿ ಅದರಲ್ಲಿ ಹೋಟೆಲ್​ ನಿರ್ಮಿಸಲಾಗುವುದು. ಆ ಹೋಟೆಲ್​ ಸುಮಾರು 400 ಜನರಿಗೆ ವಸತಿ ನೀಡುವ ಸಾಮರ್ಥ್ಯವನ್ನು ಹೊಂದಿರಲಿದೆ. ಬಾರ್​, ಸ್ಪಾ ಸೇರಿ ಮಾಮೂಲಿ ಹೋಟೆಲ್​ಗಳಲ್ಲಿ ಸಿಗುವ ಪ್ರತಿಯೊಂದು ಸೌಲಭ್ಯವೂ ಅದರಲ್ಲಿರಲಿದೆ. 2025ರಿಂದ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, 2027ಕ್ಕೆ ಹೋಟೆಲ್​ ಸಿದ್ಧವಿರಲಿದೆ ಎಂದು ಸಂಸ್ಥೆ ತಿಳಿಸಿದೆ.

    ಈ ಹೋಟೆಲ್​ನ ಇನ್ನೊಂದು ವಿಶೇಷ ಏನೆಂದರೆ ಹೋಟೆಲ್​ 90 ನಿಮಿಷಗಳಲ್ಲಿ ಪೂರ್ತಿ ಭೂಮಿಯನ್ನೇ ಒಂದು ಸುತ್ತು ಸುತ್ತಿ ಬರಲಿದೆ. ಪ್ರಪಂಚ ಸುತ್ತಬೇಕು ಎನ್ನುವ ಕನಸಿರುವವರಿಗೆ ಈ ಹೊಟೆಲ್​ ಒಂದು ವರದಾನ ಆದರೂ ಆಗಬಹುದು. ಆದರೆ ಹೋಟೆಲ್​ಗೆ ಹೋಗುವುದು ಹೇಗೆ? ಎಷ್ಟು ಖರ್ಚಾಗಲಿದೆ ಎನ್ನುವ ಮಾಹಿತಿಗಳನ್ನು ಸಂಸ್ಥೆ ಬಿಟ್ಟುಕೊಟ್ಟಿಲ್ಲ. (ಏಜೆನ್ಸೀಸ್​)

    ಮೋದಿಯನ್ನು ಹೊಗಳಿದ ಗುಲಾಂ ನಬಿ ಆಜಾದ್​ ಪ್ರತಿಕೃತಿ ದಹನ ಮಾಡಿದ ಕಾಂಗ್ರೆಸ್​ ಕಾರ್ಯಕರ್ತರು!

    19ರ ಹರೆಯದ ಯುವತಿಗೆ 1800 ಕೋಟಿ ರೂಪಾಯಿಯ ಲಾಟರಿ! ಆದರೆ ಅದರಲ್ಲೂ ಇದೆ ಬಿಗ್​ ಟ್ವಿಸ್ಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts