ಹುಬ್ಬಳ್ಳಿ: ಬಿಜೆಪಿ ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲೆ ಯುವ ಮೋರ್ಚಾ ಆಯೋಜಿಸುತ್ತಿರುವ ‘ಸ್ವಚ್ಛ ಸಂಡೆ’ ಕಾರ್ಯಕ್ರಮವನ್ನು ರಾಜ್ಯ ಯುವ ಮೋರ್ಚಾ ಘಟಕವು ರಾಜ್ಯಾದ್ಯಂತ ಹಮ್ಮಿಕೊಳ್ಳಲು ನಿರ್ಧರಿಸಿದೆ.
ಉಣಕಲ್ಲ ಕೆರೆ ಮಧ್ಯದಲ್ಲಿರುವ ಸ್ವಾಮಿ ವಿವೇಕಾನಂದರ ಪುತ್ಥಳಿ ಹಾಗೂ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲು ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಯುವ ಮೋರ್ಚಾ ಅಧ್ಯಕ್ಷ ಡಾ. ಸಂದೀಪ ಕುಮಾರ ಮಾತನಾಡಿ, ಮಹಾನಗರದಲ್ಲಿ ಹಮ್ಮಿಕೊಂಡಿರುವ ‘ಸ್ವಚ್ಛ ಭಾನುವಾರ’ ರಾಜ್ಯಕ್ಕೆ ಒಂದು ಪ್ರೇರಣೆ. ಈ ಕಾರ್ಯಕ್ರಮವನ್ನು ರಾಜ್ಯದ ಎಲ್ಲ್ಲ ಜಿಲ್ಲೆಗಳಲ್ಲೂ ಯುವ ಮೋರ್ಚಾ ತಂಡದಿಂದ ನಡೆಸಲಾಗುವುದು ಎಂದರು.
ಜಿಲ್ಲಾ ಅಧ್ಯಕ್ಷ ಕಿರಣ ಉಪ್ಪಾರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಕನಸಾದ ಸ್ವಚ್ಛ ಭಾರತಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.
ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಮಜ್ಜಗಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮ ಹಂಜಿ, ಶಿವಯ್ಯ ಹಿರೇಮಠ, ಯುವಮೋರ್ಚಾ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಅವಿನಾಶ ಹರಿವಾಣ, ನವೀನ ಹತ್ತಿಬೆಳಗಲ್, ನವೀನ ಡಂಬಳ, ನಾಗರಾಜ ಕಟಾವಿ, ಕಲ್ಮೇಶ ಮುಳುಗುಂದ, ರೇಖಾ ಹೊಸೂರ, ಪವನ ಹಳಿಯಾಳ, ಕಿಶನ್ ಬಿಲಾನಾ, ಅಖಿಲ ತಂಬಳ, ಮಂಜುನಾಥ ಸಿದ್ದಾಪುರ, ಇತರರಿದ್ದರು.