More

ಎಪಿಎಂಸಿ ತರಕಾರಿ ವ್ಯಾಪಾರ ಅವಧಿ ವಿಸ್ತರಿಸಿ

ಹುಬ್ಬಳ್ಳಿ: ಇಲ್ಲಿಯ ಎಪಿಎಂಸಿಯಲ್ಲಿ ಬೆಳಗ್ಗೆ 10 ಗಂಟೆಯವರೆಗೆ ಮಾತ್ರ ತರಕಾರಿ ಸಗಟು ವ್ಯಾಪಾರ ನಡೆಯುತ್ತಿರುವುದರಿಂದ ರೈತರು, ಗ್ರಾಹಕರಿಗೆ ತೊಂದರೆಯಾಗುತ್ತಿದ್ದು, ಇದನ್ನು ಸಂಜೆಯವರೆಗೂ ವಿಸ್ತರಿಸಬೇಕೆಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಮನವಿ ಮಾಡಿದೆ.

ಈ ಕುರಿತು ರಾಜ್ಯ ಸರ್ಕಾರಕ್ಕೆ ವಾಣಿಜ್ಯೋದ್ಯಮ ಸಂಸ್ಥೆ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈ ಬಗ್ಗೆ ಅಗತ್ಯ ಕ್ರಮಕ್ಕೆ ಕೃಷಿ ಮಾರಾಟ ಇಲಾಖೆಗೆ ಸೂಚನೆ ನೀಡಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಾಣಿಜ್ಯೋದ್ಯಮ ಸಂಸ್ಥೆಯ ಕೃಷಿ ಸಮಿತಿ ಅಧ್ಯಕ್ಷ ಜಯದೇವ ಅಗಡಿ ಮಾತನಾಡಿ, ಸದ್ಯ ಬೆಳಗ್ಗೆ ಒಮ್ಮೆ ಮಾತ್ರ ತರಕಾರಿ ಮಾರಾಟ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕಾಗಿ ಹಿಂದಿನ ದಿನವೇ ರೈತರು ತರಕಾರಿಯನ್ನು ಹೊಲದಿಂದ ತಂದು ಮನೆಯಲ್ಲಿ ಇಟ್ಟುಕೊಳ್ಳಬೇಕು. ಸಂರಕ್ಷಣೆ ಮಾಡಬೇಕು. ಕಾರ್ವಿುಕರ ಕೊರತೆಯಿಂದ ಇದು ದುಸ್ತರವಾಗುತ್ತಿದೆ. ರೈತರು ಬೆಳಗ್ಗೆ ತರಕಾರಿ ಕಟಾವ್ ಮಾಡಿಕೊಂಡು ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ತೆಗೆದುಕೊಂಡು ಬರುವ ವ್ಯವಸ್ಥೆಯಾಗಬೇಕು. ಇದರಿಂದ ರೈತರಿಗೂ ಅನುಕೂಲ, ಗ್ರಾಹಕರಿಗೂ ತಾಜಾ ತರಕಾರಿ ಸಿಗುತ್ತದೆ ಎಂದು ಹೇಳಿದರು.

ಎಪಿಎಂಸಿಯಲ್ಲಿ ಬೆಳಗ್ಗೆ ತರಕಾರಿ ಮಾರಾಟ ಮಾಡುತ್ತಿರುವುದರಿಂದ ಶೇ. 30ರಷ್ಟು ಕೆಟ್ಟು ಹೋಗುತ್ತಿದೆ. ಬೇರೆಬೇರೆ ಜಿಲ್ಲೆಗಳಿಂದ ತರಕಾರಿ ತರುವವರಿಗೆ ಸಮಸ್ಯೆಯಾಗುತ್ತಿದೆ. ಇಡೀ ದಿನ ತರಕಾರಿ ವ್ಯಾಪಾರಕ್ಕೆ ಅವಕಾಶ ನೀಡುವುದರಿಂದ ರೈತರು, ಗ್ರಾಹಕರು, ವ್ಯಾಪಾರಸ್ಥರು ಎಲ್ಲರಿಗೂ ಅನುಕೂಲವಾಗಲಿದೆ ಎಂದರು.

ಕೇಟರಿಂಗ್ ಅಸೋಸಿಯೇಶನ್​ನ ರತ್ನಾಕರ ಶೆಟ್ಟಿ ಮಾತನಾಡಿ, ಹೋಟೆಲ್, ಖಾನಾವಳಿ ಮುಂತಾದ ಉದ್ಯೋಗ ಮಾಡುವವರಿಗೆ ಸಂಜೆ ವೇಳೆಗೆ ತರಕಾರಿ ಸಿಗುವಂತಿದ್ದರೆ ಅನುಕೂಲ. ಗ್ರಾಹಕರಿಗೆ ತಾಜಾ ತರಕಾರಿಯಿಂದ ಮಾಡಿದ ಆಹಾರ ನೀಡಬಹುದು ಎಂದು ಹೇಳಿದರು.

ಕೃಷಿ ಕಾರ್ವಿುಕರ ಕೊರತೆ ಇರುವುದರಿಂದ ಬೆಳಗ್ಗೆ ತರಕಾರಿ ಕಟಾವ್ ಮಾಡಿಕೊಂಡು ತಂದರೆ ಒಂದಿಷ್ಟು ಶ್ರಮ ಕಡಿಮೆಯಾಗಲಿದೆ ಎಂದು ರೈತ ಪ್ರಮುಖರಾದ ಗಾಮನಗಟ್ಟಿಯ ಈಶ್ವರಪ್ಪ ಮಾಳಣ್ಣವರ, ಮಹದೇವಪ್ಪ ಮಾಳಣ್ಣವರ, ಶ್ರೀಕಂಠಗೌಡ ಹಿರೇಗೌಡರ ಮನವಿ ಮಾಡಿದರು.

ರೈತ ಉತ್ಪಾದಕ ಸಂಘಟನೆಯ ರಾಜು ಹನಮಕ್ಕನವರ, ವಾಣಿಜ್ಯೋದ್ಯಮ ಸಂಸ್ಥೆಯ ಪ್ರವೀಣ ಅಗಡಿ, ಸಿ.ಎನ್. ಕರಿಕಟ್ಟಿ, ವಿಕಾಸ ಸೊಪ್ಪಿನ, ಇತರರು ಗೋಷ್ಠಿಯಲ್ಲಿದ್ದರು.

ಸಿನಿಮಾ

ಲೈಫ್‌ಸ್ಟೈಲ್

ಟೆಕ್ನಾಲಜಿ

Latest Posts