More

    ಸಿಬ್ಬಂದಿ ತರಬೇತಿಗೆ ಅಬಕಾರಿ ಅಕಾಡೆಮಿ ಸ್ಥಾಪಿಸಲು ಸಜ್ಜಾಯಿತು ಇಲಾಖೆ

    ಬೆಂಗಳೂರು: ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಆದಾಯ ತಂದು ಕೊಡುವ ಅಬಕಾರಿ ಇಲಾಖೆಯ ಸಿಬ್ಬಂದಿಗೆ ತರಬೇತಿ ನೀಡಲು ರಾಜ್ಯದಲ್ಲಿ ಸ್ವಂತ ತರಬೇತಿ ಕೇಂದ್ರವೇ ಇಲ್ಲ. ಈ ಹಿನ್ನೆಲೆಯಲ್ಲಿ ‘ಅಬಕಾರಿ ಅಕಾಡೆಮಿ’ ಸ್ಥಾಪಿಸಲು ಇಲಾಖೆ ಚಿಂತನೆ ನಡೆಸುತ್ತಿದೆ. ಅಕಾಡೆಮಿ ಸ್ಥಾಪನೆಗಾಗಿ ಮುಂಬರುವ ಬಜೆಟ್‌ನಲ್ಲಿ ಅನುದಾನ ಮೀಸಲಿಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಇಲಾಖೆ ಸಿದ್ಧತೆ ನಡೆಸಿದೆ.

    ಅಬಕಾರಿ ಇಲಾಖೆ ಸಚಿವರಾಗಿದ್ದ ವೇಳೆ ಎಂ.ಪಿ. ರೇಣುಕಾಚಾರ್ಯ, ಅಕಾಡೆಮಿ ಸ್ಥಾಪಿಸಲು ಶಿರಾದಲ್ಲಿ ಜಾಗ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಕಾರಣಾಂತರದಿಂದ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆ ನನೆಗುದಿಗೆ ಬಿತ್ತು. 2013-16ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಬಕಾರಿ ಸಚಿವರಾಗಿದ್ದ ಸತೀಶ್ ಎಲ್. ಜಾರಕಿಹೊಳಿ ಸಹ ಬೆಳಗಾವಿಯಲ್ಲಿ ಅಬಕಾರಿ ಅಕಾಡೆಮಿ ಸ್ಥಾಪಿಸಲು ಮುಂದಾಗಿದ್ದರು. ಆದು ಕೂಡ ನಾನಾ ಕಾರಣಾಂತರದಿಂದ ಆಗಲಿಲ್ಲ. ಈಗ, ಅಬಕಾರಿ ಸಚಿವರಾಗಿವ ನಾಗೇಶ್ ಅಬಕಾರಿ ಅಕಾಡೆಮಿ ಸ್ಥಾಪಿಸಲು ಮುಂದಾಗಿದ್ದಾರೆ.

    ಇದನ್ನೂ ಓದಿ: ಕನ್ನಡ ಚಿತ್ರರಂಗದ ಪೋಷಕ ನಟ ಶನಿಮಹಾದೇವಪ್ಪ ವಿಧಿವಶ

    ಇಲಾಖೆಯಲ್ಲಿ ನೇಮಕಾತಿ ನಡೆದ ಬಳಿಕ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆ ಸಂಬಂಧ ಮೌಲ್ಯಾಧಾರಿತ ಮಾಹಿತಿ, ಎನ್‌ಡಿಪಿಎಸ್ ಕಾಯ್ದೆ ಹಾಗೂ ಕಳ್ಳಭಟ್ಟಿ ತಡೆಯುವ ಕ್ರಮ ಸೇರಿ ಇನ್ನಿತರ ಕೌಶಲಗಳನ್ನು ಹೇಳಿಕೊಡಲಾಗುತ್ತದೆ. ಆದರೆ, ಇಲಾಖೆಯಲ್ಲಿ ತರಬೇತಿ ಪಡೆಯಲು ತರಬೇತಿ ಕೇಂದ್ರ ಇಲ್ಲ. ಪೊಲೀಸ್ ಇಲಾಖೆ ತರಬೇತಿ ಕೇಂದ್ರದಲ್ಲಿ ಅಬಕಾರಿ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ. ಪ್ರತಿ ಹಂತದಲ್ಲೂ ಪೊಲೀಸ್ ತರಬೇತಿ ಕೇಂದ್ರವನ್ನು ಆವಲಂಬಿಸಬೇಕಾಗುತ್ತದೆ. ಅಬಕಾರಿ ಕಾಯ್ದೆಗಳನ್ನು ಮತ್ತಷ್ಟು ಪರಿಣಾಮಕಾರಿ ಜಾರಿಗೆ ತರಲು ಅಬಕಾರಿ ಅಕಾಡೆಮಿ ಅಗತ್ಯವಿದೆ. ಕೋಲಾರದಲ್ಲಿ ಜಾಗ ಗುರುತಿಸಲು ಉದ್ದೇಶಿಸಲಾಗಿದೆ ಎಂದು ಸಚಿವ ನಾಗೇಶ್ ಮಾಹಿತಿ ನೀಡಿದರು.

    ಮೋದಿಜೀ ನಿಮ್ಮ ಬಗ್ಗೆ ಗೌರವವಿದೆ, ಆದರೆ ಕೆಳಮಟ್ಟದ ಅಧಿಕಾರಿಗಳಿಂದಾಗಿ ನಾನು ಸಾಯುತ್ತಿದ್ದೇನೆ ಎಂದು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಯುವಕ!

    ಕರೊನಾ ಎಂಬುದೇ ಸುಳ್ಳು, ವಂಚನೆ!; ಆಸ್ಪತ್ರೆ ಮುಂದೆಯೇ ಪ್ರತಿಭಟನೆ…

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts