More

    ಎಚ್ಚರ..ಅಧಿಕ ತೂಕ ಗರ್ಭಾಶಯದ ಕ್ಯಾನ್ಸರ್​ಗೆ ಕಾರಣವಾಗುತ್ತಂತೆ: ಅಧ್ಯಯನ

    ಲಂಡನ್​: ಇತ್ತೀಚಿನ ದಿನಗಳಲ್ಲಿ ಅಧಿಕ ತೂಕ ಹಾಗೂ ಬೊಜ್ಜಿನ ಸಮಸ್ಯೆ ಹೆಚ್ಚು ಕಾಡುತ್ತಿದ್ದು, ವಿಶೇಷವಾಗಿ ಒಂದು ಹಂತದಲ್ಲಿ ಮಹಿಳೆಯರಲ್ಲಿ ಅತಿ ಹೆಚ್ಚು ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಅಧಿಕ ತೂಕ ಹೊಂದುವ ಮಹಿಳೆಯರು ಸ್ವಲ್ಪ ಎಚ್ಚರ ವಹಿಸಬೇಕೆಂದು ಸಂಶೋಧಕರು ಎಚ್ಚರಿಸಿದ್ದಾರೆ.

    ಅತಿ ಹೆಚ್ಚು ತೂಕವಿರುವ ಮಹಿಳೆಯರಲ್ಲಿ ಗರ್ಭಾಶಯದ ಕ್ಯಾನ್ಸರ್​​ಗೆ ಕಾರಣವಾಗಲಿದ್ದು, ಅದನ್ನು ದ್ವಿಗುಣಗೊಳಿಸುತ್ತದೆ ಎಂದು ಹೊಸ ಸಂಶೋಧನೆಯಿಂದ ತಿಳಿದುಬಂದಿದೆ.

    ಈ ಬಗ್ಗೆ ಪ್ರತಿಷ್ಟಿತ ಬಯೊಮೆಡ್​ (ಬಿಎಂಸಿ) ಸಂಸ್ಥೆ ಎಚ್ಚರಿಸಿದೆ. ಈ ಬಗ್ಗೆ ಬ್ರಿಸ್ಟಲ್​​ ವಿಶ್ವವಿದ್ಯಾಲಯ ಸಂಶೋಧನೆ ನಡೆಸಿದ್ದು, ಅಧಿಕ ತೂಕದಿಂದ ಶೇ.88 ರಷ್ಟು ಗರ್ಭಾಶಯದ ಕ್ಯಾನ್ಸರ್​ಗೆ ಕಾರಣವಾಗಲಿದೆ ಎಂದಿದೆ.

    ಈ ಹಿಂದಿನ ಅಧ್ಯಯನಕ್ಕಿಂತ ಇದು ಹೆಚ್ಚು ಪ್ರಾಮುಖ್ಯತೆ ಪಡೆದಿದ್ದು, ಅಧಿಕ ತೂಕ ಮಹಿಳೆಯರಲ್ಲಿ ಅನೇಕ ರೋಗಗಳಿಗೆ ತುತ್ತಾಗುವಂತೆ ಮಾಡಲಿದ್ದು, ವಿಶೇಷವಾಗಿ ಗರ್ಭಾಶಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

    ಆಸ್ಟ್ರೇಲಿಯಾ, ಬೆಲ್ಜಿಯಂ, ಜರ್ಮನಿ,ಪೋಲಾಂಡ್​,ಸ್ವೀಡನ್​ ಮತ್ತು ಇಂಗ್ಲೆಂಡ್​​ ಹಾಗೂ ಅಮೆರಿಕದ ಒಟ್ಟು 1,20,000 ಮಹಿಳೆಯರನ್ನು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲಾಗಿತ್ತು. ಇದರಲ್ಲಿ ಅತಿ ಹೆಚ್ಚು ತೂಕವಿರುವ 13,000 ಮಹಿಳೆಯರಲ್ಲಿ ಗರ್ಭಾಶಯದ ಕ್ಯಾನ್ಸರ್​ ಕಂಡುಬಂದಿದೆ. ಇದು ಮೊದಲ ಅಧ್ಯಯನದಿಂದಲೇ ಪತ್ತೆಯಾಗಿದೆ .

    ಬೊಜ್ಜು ಮತ್ತು ಗರ್ಭಾಶಯದ ಕ್ಯಾನ್ಸರ್​ಗೆ ಸಂಬಂಧಿಸಬಹುದಾದ 14 ಲಕ್ಷಣಗಳನ್ನು ಪತ್ತೆ ಹಚ್ಚಲಾಗಿದ್ದು, ಫಾಸ್ಟಿಂಗ್​ ಇನ್ಸುಲಿನ್​ ಮತ್ತು ಟೆಸ್ಟೊಸ್ಟೆರಾನ್​ ಎಂಬ ಎರಡು ಹಾರ್ಮೊನ್​ಗಳಲ್ಲಾಗುವ ಭಾರೀ ಬದಲಾವಣೆಯಿಂದ ಕ್ಯಾನ್ಸರ್​ ಸಂಭವಿಸಲಿದೆ ಎಂದಿದ್ದಾರೆ.

    ಬೊಜ್ಜು ಮತ್ತು ಗರ್ಭಾಶಯದ ಕ್ಯಾನ್ಸರ್‌ಗೆ ಸಂಬಂಧಿಸಬಹುದಾದ 14 ಲಕ್ಷಣಗಳ ಗುರುತುಗಳನ್ನು ಸಂಶೋಧಕರು ನೋಡಿದ್ದಾರೆ. ಅವರು ಎರಡು ಹಾರ್ಮೋನುಗಳನ್ನು ಕಂಡುಹಿಡಿದರು – ಉಪವಾಸ ಇನ್ಸುಲಿನ್ ಮತ್ತು ಟೆಸ್ಟೋಸ್ಟೆರಾನ್ – ಇದು ಗರ್ಭಾಶಯದ ಕ್ಯಾನ್ಸರ್ ರೋಗನಿರ್ಣಯದ ಅಪಾಯವನ್ನು ಹೆಚ್ಚಿಸಿತು.

    ಕ್ಯಾನ್ಸರ್​ ಅಪಾಯದಲ್ಲಿರುವ ಇಂತಹ ಮಹಿಳೆಯರು ಈ ಎರಡು ಹಾರ್ಮೊನ್​ಗಳ ಮಟ್ಟವನ್ನು ಕಡಿಮೆಗೊಳಿಸಲು ಅಥವಾ ಹೆಚ್ಚಿಸಲು ಔಷಧಗಳ ಬಳಕೆ ಮಾಡಬಹುದು ಎಂದು ಹೇಳಿದ್ದಾರೆ.

    ಉದಾಹರಣೆಯಾಗಿ, ಮಧುಮೇಹ ಚಿಕಿತ್ಸೆಯಲ್ಲಿ ಬಳಸಲಾಗುವ ಮೆಟ್​ಫಾರ್ನಿನ್​ನಂತಹ ಔಷಧಿಗಳು ಹಾರ್ಮೋನುಗಳ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದರೆ ಈ ಔಷಧವು ಕೂಡ ಕ್ಯಾನ್ಸರ್​ ಅಪಾಯದ ಮೇಲೆ ಪರಿಣಾಮ ಬೀರಲಿದೆ ಎಂದು ಹೊಸ ಅಧ್ಯಯನ ತಿಳಿಸಿದೆ.

    ಗರ್ಭಾಶಯದ ಕ್ಯಾನ್ಸರ್ ಬರಲು ಮುಖ್ಯ ಕಾರಣ ಸ್ಥೂಲಕಾಯ. ಇಂಗ್ಲೆಂಡ್​ನಲ್ಲಿ ಇತ್ತೀಚಿನ ದಿನಗಳಲ್ಲಿ ಇದು ಸಾಮಾನ್ಯವಾಗುತ್ತಿದ್ದು, 36 ಮಹಿಳೆಯರ ಪೈಕಿ ಓರ್ವ ಮಹಿಳೆ ಗರ್ಭಾಶಯದ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

    ಪಬ್​ನಲ್ಲಿ ಬಿಲ್​ ವಿಚಾರಕ್ಕೆ ಆದ ಜಗಳ ಸಾವಿನಲ್ಲಿ ಅಂತ್ಯ!

    ಮುಂದೆಯೂ ನೀವೇ ಸಿಎಂ ಆಗಿಬಿಡಿ ಹೀಗೆಂದು ಶಾಸಕ ಯತ್ನಾಳ್ ಅಂದಿದ್ದು ಯಾರಿಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts