More

    ಫೇಸ್​ ಎಡಿಟಿಂಗ್​ ಆ್ಯಪ್​ ಬಳಸಿ ಮೋಸ ಮಾಡುತ್ತಿದ್ದ ಖದೀಮರು; 100ಕ್ಕೂ ಹೆಚ್ಚು ಜನರಿಗೆ ಸರ್ಕಾರಿ ಕೆಲಸ ಕೊಡಿಸಿದ ಗ್ಯಾಂಗ್​

    ನೋಯ್ಡಾ: ಫೇಸ್​ ಬ್ಲೆಂಡರ್ ಆ್ಯಪ್​ಗಳನ್ನು ಬಳಸಿಕೊಂಡು ಬೇರೆಯವರ ಹೆಸರಿನಲ್ಲಿ ಪರೀಕ್ಷೆ ಬರೆದು, ಸರ್ಕಾರಿ ಕೆಲಸ ಕೊಡಿಸುತ್ತಿದ್ದ ಕದೀಮರ ಗ್ಯಾಂಗ್​ ಒಂದು ಇದೀಗ ಪೊಲೀಸ್​ ಬಲೆಗೆ ಸಿಕ್ಕಿಬಿದ್ದಿದೆ. ಈ ಗ್ಯಾಂಗ್​ನಲ್ಲಿ ಸರ್ಕಾರಿ ಅಧಿಕಾರಿಗಳೂ ಸೇರಿದ್ದು, ಇವರು ಸುಮಾರು 100ಕ್ಕೂ ಹೆಚ್ಚು ಜನರಿಗೆ ಸರ್ಕಾರಿ ಕೆಲಸ ಸಿಗಲು ಕಾರಣೀಕರ್ತರಾಗಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: VIDEO | ಮೈ ನಡುಕ ಹುಟ್ಟಿಸುವಂಥ ಅಪಘಾತದ ದೃಶ್ಯ ಸೆರೆಯಾಯಿತು ಸಿಸಿಟಿವಿ ಕ್ಯಾಮೆರಾದಲ್ಲಿ..

    ಫೇಸ್​ ಬ್ಲಂಡರ್​ ಆ್ಯಪ್​​ಗಳನ್ನು ಬಳಸಿಕೊಂಡು ನಿಜವಾದ ಅಭ್ಯರ್ಥಿ ಮತ್ತು ಪರೀಕ್ಷೆ ಬರೆಯಲಿರುವ ಗ್ಯಾಂಗಿನ ಅಭ್ಯರ್ಥಿಯ ಫೋಟೋವನ್ನು ಬ್ಲಂಡ್​ ಮಾಡಲಾಗುತ್ತಿತ್ತು. ಆ ಫೋಟೋ ನೋಡಿದವರಿಗೆ ಯಾವುದೇ ಅನುಮಾನ ಬಾರದ ರೀತಿಯಲ್ಲಿ ಎಡಿಟಿಂಗ್​ ಮಾಡಲಾಗುತ್ತಿತ್ತು. ನಂತರ ನಿಜವಾದ ಅಭ್ಯರ್ಥಿಯ ಬದಲು ಗ್ಯಾಂಗ್​ನ ಸದಸ್ಯ ಪರೀಕ್ಷೆ ಬರೆಯುತ್ತಿದ್ದ. ಹಲವಾರು ಪರೀಕ್ಷೆಗಳನ್ನು ಬರೆದಿದ್ದ ಮತ್ತು ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವವರು ಅವರಾದ್ದರಿಂದ ಪರೀಕ್ಷೆಯನ್ನು ಪಾಸ್​ ಮಾಡುತ್ತಿದ್ದರು. ಪರೀಕ್ಷೆಯ ಆಧಾರದ ಮೇರೆಗೆ ಒಬ್ಬ ಅಭ್ಯರ್ಥಿಗೆ 10 ಲಕ್ಷ ರೂಪಾಯಿಯಿಂದ 35 ಲಕ್ಷ ರೂಪಾಯಿವರೆಗೆ ಚಾರ್ಜ್​ ಮಾಡಲಾಗುತ್ತಿತ್ತು. ಕಳೆದ ಮೂರು ವರ್ಷಗಳಲ್ಲಿ ದೆಹಲಿ ಮತ್ತು ಹರಿಯಾಣದಲ್ಲಿ ಅನೇಕರಿಗೆ ಪೊಲೀಸ್​ ಕೆಲಸ ಸಿಗಲು ಇವರು ನೆರವಾಗಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಮನೆ ಎದುರು ರಸ್ತೆ ಬದಿಗೆ ಪಾರ್ಕಿಂಗ್ ಮಾಡೋ ಹಾಗಿಲ್ವಾ.. : ಬಿಡಿಎ ಸಭೆಯಲ್ಲಿ ಏನಾಯ್ತು ತೀರ್ಮಾನ?

    ಈ ವಿಚಾರವಾಗಿ ಅನುಮಾನ ಬಂದ ಹಿನ್ನೆಲೆಯಲ್ಲಿ ಮೊದಲಿಗೆ ಅರ್ಪಿತ್​, ದಿನೇಶ್​ ಮತ್ತು ಅಮನ್​ ಹೆಸರಿನ ಮೂವರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ಅವರ ಹೇಳಿಕೆಯ ಆಧಾರದ ಮೇಲೆ ದಿನೇಶ್​ ಪ್ರಜಾಪತಿ, ರವೀಂದ್ರ ಕುಮಾರ್​, ಮನ್ಜೀತ್​ ಸಿಂಗ್​ ಮತ್ತು ಇತರೆ ನಾಲ್ವರನ್ನು ಬಂಧಿಸಲಾಗಿದೆ. ಇದರಲ್ಲಿ ಇಬ್ಬರು ದೆಹಲಿ ಪೊಲೀಸ್​ ಪೇದೆಯಾಗಿ ಕೆಲಸ ಮಾಡುತ್ತಿದ್ದು ಇನ್ನೋರ್ವ ರಕ್ಷಣಾ ಸಚಿವಾಲಯದ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದು, ಕೆಲ ದಿನಗಳಲ್ಲಿ ಸಚಿವಾಲಯದ ಕೆಲಸಕ್ಕೆ ಸೇರುವವನಿದ್ದ. ಇನ್ನೋರ್ವ ಆರೋಪಿಯು ನೋಯ್ಡಾದ ಪರೀಕ್ಷಾ ಕೇಂದ್ರವೊಂದರ ಮಾಲೀಕನಾಗಿದ್ದ ಎನ್ನುವ ವಿಚಾರ ತನಿಖೆಯಿಂದ ತಿಳಿದುಬಂದಿದೆ. (ಏಜೆನ್ಸೀಸ್​)

    ಮಗನಿಗೆ ನೋವಾಗಬಾರದೆಂದು ಕೊಂದೇ ಬಿಟ್ಟ! ಮಗನ ಶವದ ಜತೆಯೇ ರಾತ್ರಿ ಮಲಗಿದ

    ಈ ವಿಷಯದಲ್ಲಿ ನಾನು ಕೊಹ್ಲಿ ಪರ ನಿಲ್ಲುವೆ ಎಂದ ಗಂಭೀರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts