More

    ಪಂಡಿತರೊಬ್ಬರ ಐದು ಕೋಟಿ ಗುಳುಂ ಮಾಡಿ ಬಲೆಗೆ ಬಿದ್ದ ದೂರದರ್ಶನ ಮಾಜಿ ಉದ್ಯೋಗಿ

    ನವದೆಹಲಿ: ಟಿ.ವಿ ಚಾನೆಲ್‌ ಒಂದನ್ನು ಆರಂಭಿಸಲು ವೈದ್ಯಚಾರ್ಯರೊಬ್ಬರಿಗೆ (ಆಯುರ್ವೇದ ವೈದ್ಯ) ಐದು ಕೋಟಿ ರೂಪಾಯಿಗಳ ವಂಚನೆ ಮಾಡಿರುವ ಆರೋಪ ಹೊತ್ತ ದೂರದರ್ಶನದ ಮಾಜಿ ಉದ್ಯೋಗಿಯೊಬ್ಬರು ದೆಹಲಿಯ ಆರ್ಥಿಕ ಅಪರಾಧ ವಿಭಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

    ಆರೋಪಿ ಸುನೀಲ್‌ ಕುಮಾರ್‌ ಝಾ ಅವರು ಈ ಹಿಂದೆ ಜೋಧ್‌ಪುರದ ದೂರದರ್ಶನದಲ್ಲಿ ಉಪನಿರ್ದೇಶಕರಾಗಿ ಕೆಲಸ ಮಾಡಿದ್ದರು. ಆ ಸಮಯದಲ್ಲಿ ಕೂಡ ವಂಚನೆ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿತ್ತು. ಇದೀಗ ಅದೇ ಅಪರಾಧ ಬುದ್ಧಿಯನ್ನು ಮುಂದುವರೆಸಿರುವ ಅವರು ವೈದ್ಯಚಾರ್ಯ ಪಂಡಿತ್ ಲಕ್ಷ್ಮಣ್ ದಾಸ್ ಭರದ್ವಾಜ್ ಅವರಿಗೆ ಮೋಸ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.

    ಇದನ್ನೂ ಓದಿ: ಲಡಾಖ್‌ ಬಿಕ್ಕಟ್ಟು: ಕುತೂಹಲ ಮೂಡಿಸಿರುವ ಪ್ರಧಾನಿ-ರಾಷ್ಡ್ರಪತಿ ಭೇಟಿ

    ಪಂಡಿತ್‌ ಲಕ್ಷ್ಮಣ್‌ ದಾಸ್‌ ಅವರು ತಮ್ಮ ಆಯುರ್ವೇದ ವಸ್ತುಗಳ ಪ್ರಚಾರಕ್ಕಾಗಿ ಮತ್ತು ಆಧ್ಯಾತ್ಮಿಕ ಉದ್ದೇಶಗಳಿಗಾಗಿ ಟಿ.ವಿ ಚಾನೆಲ್‌ ಸಂಪರ್ಕದಲ್ಲಿ ಇರುವವರಿಗೆ ಹುಡುಕಾಟ ನಡೆಸಿದ್ದರು. ಅದೇ ಸಮಯದಲ್ಲಿ ಅವರಿಗೆ ಭಕ್ತಿ ಚಾನೆಲ್‌ನ ಮುಖ್ಯಸ್ಥರಾಗಿದ್ದ ಝಾ ಪರಿಚಯವಾಯಿತು. ಈ ಚಾನೆಲ್‌ ಮೂಲಕ ತಮ್ಮ ಕಾರ್ಯಕ್ರಮ ಪ್ರಸಾರ ಮಾಡತೊಡಗಿದರು.

    ಇದೆ ವೇಳೆ, ಝಾ, ತಮ್ಮ ಪತ್ನಿ ಬಿಂದು ವೈಸ್‌ರಾಯ್‌ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದು, ಕಂಪನಿಯಲ್ಲಿ ಪ್ರಮುಖ ಷೇರುಗಳನ್ನು ಖರೀದಿಸಿದರೆ ನೀವು ನಿಮ್ಮದೇ ಆದ ಟಿವಿ ಚಾನೆಲ್ ಸ್ಥಾಪಿಸಬಹುದು ಎಂದು ಪಂಡಿತರ ತಲೆಯಲ್ಲಿ ಹುಳ ಬಿಟ್ಟರು.

    ಇದನ್ನು ನಂಬಿದ ಅವರು, ಐದು ಕೋಟಿ ರೂಪಾಯಿ ನೀಡಿದರು. ಅದೇ ದುಡ್ಡಿನಲ್ಲಿ ಸಂಸ್ಕೃತ ಟಿವಿ ಚಾನೆಲ್ ಖರೀದಿಸಿ ತಮಗೆ ಮೋಸ ಮಾಡಿರುವ ವಿಷಯ ತಿಳಿಯುತ್ತಲೇ ಪಂಡಿತ್‌ ಲಕ್ಷ್ಮಣದಾಸ್‌ ಅವರು ದೂರು ದಾಖಲು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಬಂಧಿಸಲಾಗಿದೆ ಎಂದು ಆರ್ಥಿಕ ಅಪರಾಧಗಳ ವಿಭಾಗದ ಜಂಟಿ ಸಿಪಿ ಒಪಿ ಮಿಶ್ರಾ ಹೇಳಿದ್ದಾರೆ.

    ಕರೊನಾ ಸೋಂಕಿತ ಜೆಡಿಎಸ್‌ ಮುಖಂಡನ ಪುಂಡಾಟಕ್ಕೆ ಆಸ್ಪತ್ರೆ ಸಿಬ್ಬಂದಿ ಸುಸ್ತೋ ಸುಸ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts