More

    ವಿಧಾನಸಭೆಯಲ್ಲಿ ರಾಜೀನಾಮೆ ಮಾತೆತ್ತಿದ ಮಾಜಿ ಸಿಎಂ ಸಿದ್ದು!

    ಬೆಂಗಳೂರು: ಇಂದಿನ ವಿಧಾನಸಭೆ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ರಾಜೀನಾಮೆ ಬಗ್ಗೆ ಮಾತನಾಡಿದ್ದಾರೆ.

    ಕಲಾಪದಲ್ಲಿ ಮಾತನಾಡಿದ ಸಿದ್ದು, ‘ಒಬಿಸಿಗೆ ದೊಡ್ಡ ಅನ್ಯಾಯ ಆಗಿದೆ. ಒಬಿಸಿ ಅಂದ್ರೆ ಕುರುಬರು, ಈಡಿಗರು, ಬೆಸ್ತರು, ಗೊಲ್ಲರು, ಮಡಿವಾಳರು ಅಷ್ಟೇ ಅಲ್ಲ. ಒಬಿಸಿಗೆ ಒಕ್ಕಲಿಗರೂ, ಲಿಂಗಾಯತರೂ, ಇತರೆ ವರ್ಗದವರೂ ಸೇರ್ತಾರೆ. ಬ್ರಾಹ್ಮಣರು, ವೈಶ್ಯರು, ನಗರ್ತರು, ಮೊದಲಿಯಾರ್ ಇವರು ಒಬಿಸಿಗೆ ಸೇರುವುದಿಲ್ಲ.

    ಮೀಸಲಾತಿ, ಬಿಸಿಎಂ ಪ್ರವರ್ಗ ಎ, ಪ್ರವರ್ಗ 2ಎ, ಪ್ರವರ್ಗ 2ಬಿ, ಪ್ರವರ್ಗ 3ಎ, ಪ್ರವರ್ಗ 3ಬಿ ಇವರಿಗೆಲ್ಲ ಸಿಗುತ್ತೆ. ಆದ್ರೆ ಮಂಡಲ್ ಕಮೀಷನ್ ವರದಿಯಲ್ಲಿ ಈ ವರ್ಗಗಳ ಜತೆಗೆ ಗ್ರಾಮೀಣ ಒಕ್ಕಲಿಗರೂ ಸಹ ಒಬಿಸಿ ಪಟ್ಟಿಗೆ ಸೇರುತ್ತಾರೆ.

    ಬ್ರಾಹ್ಮಣರಿಗೆ, ನಗರ್ತರಿಗೆ, ಮೊದಲಿಯಾರ್ ರಿಗೂ ಈಗ 10% ಮೀಸಲಾತಿ ಕೊಟ್ಟಿದ್ದಾರೆ. ಉಳಿದವರು ಯಾರು..? ಸುಮ್ಮನೆ ಹಿಂದುಳಿದವರಿಗೆ ಮೀಸಲಾತಿ ಕೊಟ್ಡಿದೀವಿ ಅಂತಿದೀರ. ಹಿಂದುಳಿದ ಜಾತಿಯವರಿಗೆ ಮೀಸಲಾತಿ ಕೊಟ್ಟಿದ್ದೀವಿ ಅಂದರೆ ಒಬಿಸಿ ಪಟ್ಟಿಯಲ್ಲಿ ಇರುವ ಎಲ್ಲರಿಗೂ ಅನ್ಯಾಯ ಮಾಡಿದ ಹಾಗೆ’ ಎಂದರು.

    ತಕ್ಷಣ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಅಶೋಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾತು ಮುಂದುವರೆಸಿದ ಸಿದ್ದರಾಮಯ್ಯ, ‘ಕರ್ನಾಟಕ ಒಬಿಸಿ ಪಟ್ಟಿಯಡಿ 3ಎ ಪ್ರವರ್ಗದ ಒಕ್ಕಲಿಗರಿಗೆ ಮೀಸಲಾತಿಗೆ ನಗರದ ಒಕ್ಕಲಿಗರು ಬರ್ತಾರೆ, ಹಳ್ಳಿಯವರೂ ಬರುತ್ತಾರೆ. 3ಬಿ ನಲ್ಲಿ ಲಿಂಗಾಯತರಿಗೆ ನಗರದವರಿಗೂ ಮೀಸಲಾತಿ ಬರುತ್ತದೆ. ಹಳ್ಳಿಯವರಿಗೂ ಬರುತ್ತೆ. ಆದರೆ ಮಂಡಲ್ ಕಮೀಷನ್ ನಲ್ಲಿ ಮಾತ್ರ ಗ್ರಾಮೀಣ ಒಕ್ಕಲಿಗರಿಗೆ ಮೀಸಲಾತಿ ಕೊಡಿ ಅಂತ ಇದೆ, ನಗರದ ಒಕ್ಕಲಿಗರಿಗೆ ಇಲ್ಲ. ಇಲ್ಲ ಅಂದ್ರೆ ನಾನು ರಾಜೀನಾಮೆ ಕೊಟ್ಟು ಬಿಡ್ತೀನಿ‌ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

    ಈ ಸಂದರ್ಭ ತಮ್ಮ ಮಾಹಿತಿ ತಪ್ಪಿದ್ದಲ್ಲಿ ರಾಜೀನಾಮೆ ನೀಡುವುದಾಗಿ ಸಿದ್ದರಾಮಯ್ಯ ಹೇಳಿ ಸಚಿವ ಆರ್​ ಅಶೋಕ್​ಗೆ ಸವಾಲು ಹಾಕಿದರು.

    ಆಗ ಸಚಿವ ಅಶೋಕ್ ‘ಒಕ್ಕಲಿಗ ಸಮುದಾಯದ ವಕೀಲರು ಒಂದು ಮನವಿ ಕೊಟ್ಟರು. ಅದರಲ್ಲಿ 10% ಮೀಸಲಾತಿ ನಗರದ ಒಕ್ಕಲಿಗರಿಗೆ ಸಿಕ್ತಿಲ್ಲ, ನಮ್ಮನ್ನೂ ಸೇರಿಸಿ ಅಂತ ಹೇಳಿದಾರೆ, ಹಾಗಾಗಿ ನಾನು ಹೇಳಿದೆ‌’ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts