More

    ಬಿಜೆಪಿಗೇ ಗಡುವು ಕೊಟ್ಟ ಶೆಟ್ಟರ್​; ಶನಿವಾರ 11 ಗಂಟೆ ಒಳಗೆ ಪಟ್ಟಿ ಬಿಡುಗಡೆ ಮಾಡದಿದ್ದರೆ ಅಭಿಮಾನಿಗಳ ಸಭೆ ನಡೆಸಿ ತೀರ್ಮಾನ

    ಹುಬ್ಬಳ್ಳಿ: ಟಿಕೆಟ್​ ಹಂಚಿಕೆ ವಿಚಾರದಲ್ಲಿ ಇಂದು ಈಗಾಗಲೇ ಲಕ್ಷ್ಮಣ ಸವದಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಬೆನ್ನಿಗೇ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕೂಡ ಪಕ್ಷದ ವಿರುದ್ಧ ಗುಡುಗಿ ಗಡುವು ನೀಡಿದ್ದಾರೆ. ನಾಳೆ 11 ಗಂಟೆಯೊಳಗೆ ನೀವು ತೀರ್ಮಾನ ಪ್ರಕಟಿಸದಿದ್ದರೆ ನಾನೇ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂಬುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.

    ವಿಧಾನಸಭೆ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿರುವ ಅವರು ಇನ್ನೂ ತಮಗೆ ಟಿಕೆಟ್ ನಿಗದಿ ಆಗದಿರುವ ಕುರಿತು ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಧನಾತ್ಮಕವಾಗಿ ಯೋಚನೆ ಮಾಡುತ್ತೇನೆ, ಇವತ್ತಿಗೆ ಎರಡು ದಿನವಾಯಿತು, ಆದರೆ ಈಗಲೂ ಆಶಾಭಾವ ಹೊಂದಿದ್ದೇನೆ. ಒಂದು ವೇಳೆ ನಾಳೆ ಘೋಷಣೆ ಆಗದೆ ಹೋದರೆ ನಾನು ಅಭಿಮಾನಿಗಳ ಸಭೆ ನಡೆಸಿ ತೀರ್ಮಾನ ಮಾಡುತ್ತೇನೆ ಎಂದಿದ್ದಾರೆ.

    ಇದನ್ನೂ ಓದಿ: ನಾಗಠಾಣ ಕ್ಷೇತ್ರದಲ್ಲಿ ಭುಗಿಲೆದ್ದ ಆಕ್ರೋಶ; ಬಿಜೆಪಿ ಕಾರ್ಯಕರ್ತರಿಂದ ಕಚೇರಿಗೆ ಮುತ್ತಿಗೆ

    ಎಲ್ಲರೂ ಜಗದೀಶ ಶೆಟ್ಟರ್​​ಗೆ ಅಪಮಾನ ಆಗಿದೆ ಎನ್ನುತ್ತಿದ್ದಾರೆ. ಮೂರನೇ ಲಿಸ್ಟ್​ಗೆ ಎಲ್ಲಿಯವರೆಗೆ ಕಾಯುತ್ತೀರಿ, ಇರೋದೇ 12 ಕ್ಷೇತ್ರ. ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ನಾಳೆವರೆಗೂ ಆಶಾಭಾವನೆ ಇದೆ. ಅದಾಗ್ಯೂ ಆಗದಿದ್ದರೆ ನಾನೇ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದಾರೆ.

    ಇದನ್ನೂ ಓದಿ: 2023ರ ಅಂತಿಮ ಮತದಾರರ ಪಟ್ಟಿ: ಇಲ್ಲಿದೆ ಜಿಲ್ಲಾವಾರು, ಕ್ಷೇತ್ರವಾರು ವಿವರ

    ಇದು ನನಗೆ ಮಾತ್ರವಲ್ಲ, ಮತದಾರರಿಗೂ ಮಾಡಿದ ಅಪಮಾನ. ಇದು ಹುಬ್ಬಳ್ಳಿ ಧಾರವಾಡಕ್ಕೆ ಸೀಮಿತ ಅಲ್ಲ. ರಾಜ್ಯದ ಎಲ್ಲ ಕಡೆಯಿಂದ ಕರೆ ಮಾಡುತ್ತಿದ್ದಾರೆ. ನಾನು ಕಾಡಿ ಬೇಡಿ ಟಿಕೆಟ್ ಕೇಳಲ್ಲ, ವರಿಷ್ಠರು ಫೋನ್ ಮಾಡಿದ್ದಕ್ಕೆ ಹೋಗಿದ್ದೆ. ರಾಷ್ಟ್ರೀಯ ಅಧ್ಯಕ್ಷರು ಕರೆ ಮಾಡಿದ್ದಕ್ಕೆ ಹೋಗಿದ್ದು, ನಾಳೆವರೆಗೂ ಕಾಯುತ್ತೇನೆ ಎಂದಿರುವ ಅದಾದ ಬಳಿಕ ಮುಂದಿನ ನಡೆ ಏನು ಎಂಬ ಬಗ್ಗೆ ತೀರ್ಮಾನಿಸುವುದಾಗಿ ಹೇಳಿದ್ದಾರೆ.

    ಭೀಕರ ಅಪಘಾತ: ಸತ್ತವರ ಸಂಖ್ಯೆ ಐದಕ್ಕೇರಿಕೆ; ಇಬ್ಬರು ಗಂಡ-ಹೆಂಡಿರ ಜತೆಗೆ ಒಂದು ಮಗು ಕೂಡ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts