More

    ಇಂಜಿನಿಯರ್ ಮನೆಯಲ್ಲಿ ಇವಿಎಂ ಕಂಟ್ರೋಲ್ ಯುನಿಟ್​ಗಳು ಪತ್ತೆ!

    ಬೆಂಗಳೂರು: ಇಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (ಇವಿಎಂ) ಕಂಟ್ರೋಲ್ ಯುನಿಟ್​ಗಳು ಇಂಜಿನಿಯರ್​ ಒಬ್ಬರ ಮನೆಯಲ್ಲಿ ಪತ್ತೆಯಾಗಿದೆ. ಅವರ ಮನೆಯ ಡೆಮಾಲಿಷನ್ ಸಂದರ್ಭ ಈ ಕಂಟ್ರೋಲ್ ಯುನಿಟ್​ಗಳು ಕಂಡುಬಂದಿವೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದುಡಪನಹಳ್ಳಿ ಗ್ರಾಮದ ಮನೆಯಲ್ಲಿ ಈ ಇವಿಎಂ ಕಂಟ್ರೋಲ್ ಯುನಿಟ್​ಗಳು ಪತ್ತೆಯಾಗಿವೆ. ಈ ಮನೆ ದೊಡ್ಡಬಳ್ಳಾಪುರ ನಿರ್ಮಿತಿ ಕೇಂದ್ರದ ಇಂಜಿನಿಯರ್ ಶಿವಕುಮಾರ್ ಅವರದ್ದಾಗಿದೆ.

    ಇದನ್ನೂ ಓದಿ: ‘ಮೆದುಳು ತಿನ್ನುವ ಅಮೀಬಾ’ ಹತ್ತನೇ ತರಗತಿ ವಿದ್ಯಾರ್ಥಿಯ ಜೀವ ತೆಗೆಯಿತು!

    ಇವು 2018ರ ಚುನಾವಣೆಯಲ್ಲಿ ಬಳಸಿ ತಿರಸ್ಕೃತಗೊಂಡಿದ್ದ ಇವಿಎಂ ಕಂಟ್ರೋಲ್ ಯುನಿಟ್​ಗಳಾಗಿವೆ. ಇವುಗಳ ಪತ್ತೆ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮೋಹನಕುಮಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಇದನ್ನೂ ಓದಿ: ಅಮರನಾಥ ಯಾತ್ರೆಗೆ ತೆರಳಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರು; 80 ಜನರ ರಕ್ಷಣೆಗಾಗಿ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

    ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಈ ಮನೆಯನ್ನು ನೆಲಸಮಗೊಳಿಸಲಾಗಿದೆ. ಈ ಮನೆಯಿಂದ 7 ಇವಿಎಂಗಳನ್ನು ವಶಕ್ಕೆ ಪಡೆದ ತಹಶೀಲ್ದಾರ್​ ಅವುಗಳನ್ನು ಜಿಲ್ಲಾಧಿಕಾರಿ ಶಿವಶಂಕರ್ ಅವರಿಗೆ ಹಸ್ತಾಂತರಿಸಿ ಮುಂದಿನ ಕ್ರಮಕ್ಕಾಗಿ ವರದಿ ನೀಡಿದ್ದಾರೆ. ಈ ಇವಿಎಂ ಕಂಟ್ರೋಲ್ ಯುನಿಟ್​ಗಳು ಈ ಮನೆಯಲ್ಲಿ ಏಕೆ-ಹೇಗೆ ಬಂದವು ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ.

    ಕಾಮಕುಮಾರ ಸ್ವಾಮೀಜಿಯ ಭೀಕರ ಕೊಲೆ; ತಲೆ ಇಬ್ಭಾಗ, ಕೈ-ಕಾಲುಗಳೂ ಕಟ್, ಶವ 9 ತುಂಡು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts