ಶಿಕ್ಷಣದಿಂದ ಎಲ್ಲವನ್ನೂ ಸಾಧಿಸಲು ಸಾಧ್ಯ

blank

ಬಳ್ಳಾರಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕ್‌ರ್ ಅವರು ಅಸ್ಪಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದವರು. ಶಿಕ್ಷಣದಿಂದ ಎಲ್ಲವನ್ನು ಸಾಧಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಮೊಹಮ್ಮದಿಯ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ಎಡ್ರಿಸ್ ಉಮ್ರಿ ಹೇಳಿದರು.

ನಗರದ ಮೊಹಮ್ಮದಿಯ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರಳಾದೇವಿ ಕಾಲೇಜಿನ ನಿವೃತ್ತ ಉಪನ್ಯಾಸಕ ಬಿ.ಶ್ರೀನಿವಾಸ್‌ಮೂರ್ತಿ ಮಾತನಾಡಿ, ಪ್ರಪಂಚದಲ್ಲೇ ಶ್ರೇಷ್ಠ ಸಂವಿಧಾನ ಗ್ರಂಥವನ್ನು ರಚಿಸಿದ ಮಹಾನ್ ವ್ಯಕ್ತಿ ಅಂಬೇಡ್ಕರ್ ಅವರು. ಬಡತನದಿಂದ ಅಸ್ಪಶ್ಯತೆ, ಅಸಮಾನತೆ ಹಾಗೂ ಹಲವು ಸಮಸ್ಯೆಗೆ ಗುರಿಯಾಗಿದ್ದರಿಂದ ಮುಂದೊಂದು ದಿನ ಬೇರೆ ಯಾರು ಸಹ ಇಂತಹ ಸಮಸ್ಯೆಗೆ ತುತ್ತಾಗಬಾರದೆಂದು ಸಂವಿಧಾನದ ರಚಿಸಿ ಸಮಾನತೆ ರೂಪಿಸಿಕೊಟ್ಟರು ಎಂದು ವಿವರಿಸಿದರು.

ಅಪ್ರತಿಮ ಚಿಂತಕ, ಪ್ರಜಾಪ್ರಭುತ್ವವಾದಿ, ಸಾಮಾಜಿಕ ಚಿಂತಕರಾಗಿದ್ದರು. ವಿದ್ಯಾರ್ಥಿಗಳು ಅಂಬೇಡ್ಕರ್ ರೀತಿ ಜ್ಞಾನ ಗ್ರಹಿಸಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ತಲುಪಲು ಶಿಕ್ಷಣ ಮಹತ್ತರವಾಗಿದೆ ಎಂದು ಹೇಳಿದರು.

ಅಂಬೇಡ್ಕರ್ ಬಗ್ಗೆ ತಿಳಿದುಕೊಳ್ಳಲು ಅವರ ಬದುಕು ಮತ್ತು ಬರಹ ಪುಸ್ತಕ ಓದಬೇಕು. ಗೌತಮ ಬುದ್ಧನ ತತ್ವಗಳಿಂದ ಪ್ರಭಾವಿತರಾದ ನಂತರ ಅವರು ದೃಷ್ಠಿಕೋನವೇ ಬದಲಾಯಿತು. ವಿದ್ಯಾರ್ಥಿ ಜೀವನದಲ್ಲಿ ದಿನದ 18 ಗಂಟೆಗಳ ಸಮಯವನ್ನು ವಿದ್ಯಾಭ್ಯಾಸಕ್ಕೆ ಮೀಸಲಿಟ್ಟಿದ್ದರು. ಈಗಿನ ವಿದ್ಯಾರ್ಥಿಗಳು ಸಹ ಸಮಯ ಮೀಸಲಿಟ್ಟು ಅಭ್ಯಾಸ ನಡೆಸಬೇಕು ಎಂದರು.

ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್, ಮೊಹಮ್ಮದಿಯ ಕಾಲೇಜಿನ ಪ್ರಾಚಾರ್ಯ ಡಾ.ಮೈಮೂದ್ ಎಸ್ ಸೇರಿದಂತೆ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

TAGGED:
Share This Article

ವೆಜ್​ ಪ್ರಿಯರಿಗಾಗಿ ಸ್ಟ್ರೀಟ್ ಸ್ಟೈಲ್ ಮೊಮೊಸ್; ಮನೆಯಲ್ಲೆ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ Recipe

ಸ್ಟ್ರೀಟ್​ ಫುಡ್​ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ, ಸಂಜೆಯಾದರೆ ಸಾಕು ಸ್ಟ್ರೀಟ್ ಫುಡ್ ತಿನ್ನಬೇಕು ಎನ್ನಿಸುತ್ತದೆ.…

ಹೀಲ್ಸ್ ಧರಿಸುವುದು ಎಷ್ಟು ಅಪಾಯಕಾರಿ ಗೊತ್ತೆ?; ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ | Health Tips

ಹೈಹೀಲ್ಸ್​​ ಬೂಟುಗಳನ್ನು ಧರಿಸುವುದು ಪರಿಪೂರ್ಣ ಭಂಗಿಯನ್ನು ನೀಡುತ್ತದೆ, ಎತ್ತರವಾಗಿ ಕಾಣುತ್ತದೆ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ.…

ಶೀತದಲ್ಲಿಯೂ ಉತ್ತಮ ನಿದ್ರೆಗೆ ಈ ಟ್ರಿಕ್ಸ್​ ಫಾಲೋ ಮಾಡಿ; ನಿಮಗಾಗಿ ಹೆಲ್ತಿ ಟಿಪ್ಸ್​​ | Health Tips

ಕೆಲವರಿಗೆ ಚಳಿಗಾಲದಲ್ಲಿ ಹೆಚ್ಚು ನಿದ್ದೆ ಬಂದರೆ ಇನ್ನು ಕೆಲವರು ಕಣ್ಣುಗಳಿಂದ ನಿದ್ದೆ ಕಳೆದುಕೊಳ್ಳುತ್ತಾರೆ. ನಿದ್ರೆಯ ಮಾದರಿಯಲ್ಲಿ…