More

    ಪ್ರತಿಯೊಬ್ಬರೂ ಸಂವಿಧಾನ ತಿಳಿದುಕೊಳ್ಳಬೇಕು

    ಮೂಡಲಗಿ: ಪ್ರತಿಯೊಬ್ಬರೂ ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಮೂಡಲಗಿ ದಿವಾಣಿ ಹಾಗೂ ಜೆಎಂಎ್ ನ್ಯಾಯಾಧೀಶೆ ಜ್ಯೋತಿ ಪಾಟೀಲ ಹೇಳಿದರು.

    ತಾಲೂಕಿನ ಕಮಲದಿನ್ನಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ಶ್ರೀ ಶಿವಬೋಧರಂಗ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಸಂವಿಧಾನ ದಿನಾಚರಣೆ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ವಕೀಲ ಕೆ.ಎಲ್. ಹುಣಶ್ಯಾಳ ಮಾತನಾಡಿ, ಸಂವಿಧಾನ ಅರಿತುಕೊಂಡಲ್ಲಿ ಸುಖಮಯ ಜೀವನ ನಡೆಸಬಹುದು ಎಂದರು.
    ವಕೀಲ ಎ.ಬಿ.ಬಾಗೋಜಿ ಮಾತನಾಡಿದರು. ವಕೀಲ ಲಕ್ಷ್ಮಣ ಅಡಿಹುಡಿ ಮಾತನಾಡಿ, ಸಂಚಾರಿ ನಿಯಮಗಳನ್ನು ಅರಿತು ವಾಹನ ಚಲಾಯಿಸಬೇಕು ಎಂದರು.

    ನ್ಯಾಯಾಧೀಶೆ ಜ್ಯೋತಿ ಪಾಟೀಲ ಅವರನ್ನು ಸತ್ಕರಿಸಲಾಯಿತು. ವಕೀಲ ಯು. ಶುಭ, ಮೂಡಲಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಆರ್.ಪಿ.ಸೋನವಾಲಕರ, ಬಿ.ಎಚ್.ರಡ್ಡಿ, ಬಸಪ್ಪ ಸಂಕನ್ನವರ, ಲಕ್ಷ್ಮಣ ಹುಚರಡ್ಡಿ, ವಕೀಲರಾದ ಆರ್.ಆರ್.ಬಾಗೋಜಿ, ಎಲ್.ಬಿ.ವಡೇರ, ಯಲ್ಲಪ್ಪ ಖಾನಟ್ಟಿ, ಅಕ್ಕಮಹಾದೇವಿ ಗೋಡ್ಯಾಗೋಳ, ಗ್ರಾಪಂ ಉಪಾಧ್ಯಕ್ಷ ಉದಯ ಸನದಿ, ಮುಖ್ಯ ಶಿಕ್ಷಕ ಶಿವನಪ್ಪ ಹೊಸುಪ್ಪಾರ, ಎಂ.ಎಸ್. ಬಡಿಗೇರ, ಉಪನ್ಯಾಸಕರಾದ ಬಿ.ಜಿ.ಗಡಾದ, ಎಸ್.ಕೆ.ಹಿರೇಮಠ, ಹನುಮಂತ ಹತ್ತರಕಿ, ರಾಜು ಹಾದಮನಿ, ಯಾಕೂಬ್ ಹಾದಿಮನಿ, ಎಲ್.ಆರ್. ಧರ್ಮಟ್ಟಿ, ಶ್ರಾವಣ ಹತ್ತರಕಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts