More

    ಸಂವಿಧಾನ ನಮಗೆಲ್ಲ ದಾರಿದೀಪ

    ಸವದತ್ತಿ: ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರ್ಣವಾದ ಹಿನ್ನೆಲೆಯಲ್ಲಿ ಜ.26 ರಿಂದ ಅರಂಭವಾಗಿರುವ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರ ಮೆರವಣಿಗೆ ವಾಹನ ಬುಧವಾರ ಪಟ್ಟಣಕ್ಕೆ ಆಗಮಿಸಿತು.

    ಪಟ್ಟಣದ ಶಿವಾಜಿ ವತ್ತದಲ್ಲಿ ಜಾಗೃತಿ ಜಾಥಾಕ್ಕೆ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಚಾಲನೆ ನೀಡಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಬರೆದಿರುವ ಸಂವಿಧಾನ ನಮಗೆಲ್ಲ ದಾರಿದೀಪವಾಗಿದೆ. ಸಂವಿಧಾನದ ಮಹತ್ವ ಹಾಗೂ ಮೌಲ್ಯಗಳ ಕುರಿತು ಜಾಗೃತಿ ಮೂಡಿಸಲು ಜಾಥಾ ವಾಹನ ಸಂಚರಿಸಲಿದೆ ಎಂದರು.

    ಮುಖಂಡ ಅಶ್ವತ್ಥ ವೈದ್ಯ ಮಾತನಾಡಿ, ಸಂವಿಧಾನ ಜನತೆಗೆ ನೀಡಿರುವ ಹಕ್ಕುಗಳ ಅರಿವು ಮೂಡಿಸಲು ಜಾಗೃತಿ ಜಾಥಾ ಸಹಾಯಕ. ಸಂವಿಧಾನದ ಕಾರಣದಿಂದ ನಾವೆಲ್ಲರೂ ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವೆ ಎಂದರು.

    ಶಿಕ್ಷಕ ಉಮೇಶ ನರಗುಂದ ಸಂವಿಧಾನ ಪೀಠಿಕೆ ಓದಿದರು. ತಾಪಂ ಇಒ ಯಶವಂತಕುಮಾರ, ಬಿಇಒ ಮೋಹನ ದಂಡಿನ, ಪಿಎಸ್‌ಐ ಆನಂದ ಕ್ಯಾರಕಟ್ಟಿ, ವಿಜಯ ಸಂಗಪ್ಪಗೋಳ, ಶಶಿರಾಜ ವನಕಿ, ಸುನೀತಾ ಪಾಟೀಲ, ಆರ್.ಆರ್. ಕುಲಕರ್ಣಿ, ಶಿವಪ್ರಕಾಶ ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಎಂ.ಎನ್. ಮುತ್ತಿನ, ಯಲ್ಲಪ್ಪ ಗೊರವನಕೊಳ್ಳ, ಬಸವರಾಜ ತಳವಾರ, ಬಸವರಾಜ ಆಯಟ್ಟಿ, ಎಲ್.ಎಸ್. ನಾಯಕ, ಬಸವರಾಜ ತಳವಾರ, ಮಂಜು ಪಾಚಂಗಿ, ಎ್.ವೈ. ಗಾಜಿ, ಪ್ರವೀಣ ರಾಮಪ್ಪನವರ, ಸಂತೋಷ ನೊರೆಯವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts