More

    ಪ್ರತಿಯೊಬ್ಬರು ಮತದಾನ ಮಾಡಿ

    ಕನಕಗಿರಿ: ಮತದಾನ ಪವಿತ್ರವಾದದ್ದು, ಪ್ರಜಾಪ್ರಭುತ್ವ ನಮಗೆ ನೀಡಿರುವ ಹಕ್ಕಾಗಿದ್ದು ಅದನ್ನು ನಿಭಾಯಿಸುವುದು ಕರ್ತವ್ಯವಾಗಿದೆ ಎಂದು ತಾಪಂ ಐಇಸಿ ಸಂಯೋಜಕ ಕೆ.ಶಿವಕುಮಾರ್ ಹೇಳಿದರು.

    ಇದನ್ನೂ ಓದಿ: ಪಾಕಿಸ್ತಾನದಲ್ಲಿ ಮತದಾನ ಮುಗಿದು 24 ಗಂಟೆಯಾದ್ರೂ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ ಏಕೆ?

    ಪಟ್ಟಣದ ಶ್ರೀ ಕನಕಾಚಲ ದೇವಸ್ಥಾನಕ್ಕೆ ಅವರಾತ್ರಿ ಅಮಾವಾಸ್ಯೆ ನಿಮಿತ್ತ ಆಗಮಿಸಿದ್ದ ಭಕ್ತರಿಗೆ, ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿ ಹಾಗೂ ಪಪಂನಿಂದ ದೇಗುಲದ ಆವರಣದಲ್ಲಿ ಮತದಾನ ಜಾಗೃತಿ ಶುಕ್ರವಾರ ನಡೆಸಲಾಯಿತು.

    18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಮತದಾನ ಮಾಡಬೇಕು. ಯಾರು ಗುರುತಿನ ಚೀಟಿ ಹೊಂದಿಲ್ಲವೋ ಅವರು ಕೂಡಲೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು.

    ಮೊದಲ ಮತದಾನ ಅರ್ಹತೆ ಪಡೆದ ಯುವ ಮತದಾರರಿಗೆ ಇವಿಎಂ ಹಾಗೂ ವಿವಿ ಪ್ಯಾಟ್ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ಶಿರಸ್ತೇದಾರ್ ಪರಸಪ್ಪ ಘಾಟಿ, ಚುನಾವಣಾ ವಿಭಾಗದ ವಿಷಯ ನಿರ್ವಾಹಕ ವಿಜಯಕುಮಾರ್, ಪಪಂ ಸಿಬ್ಬಂದಿ ಪ್ರಕಾಶ, ಪುರುಷೋತ್ತಮ ಪತ್ತಾರ, ಹುಲಗಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts