More

    ಎಲ್ಲರಿಗೂ ಆರ್​ಸಿಬಿ ಮೇಲೆಯೇ ಕಣ್ಣು! ಟೀಕೆ ಮಾಡುವವರಿಗೆಲ್ಲ ಈ ತಂಡ ಕಾಣುವುದಿಲ್ಲವೇ?

    ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡವನ್ನು ಐಪಿಎಲ್‌ನಲ್ಲಿ ಅತ್ಯಂತ ದುರಾದೃಷ್ಟಕರ ತಂಡ ಎಂದು ಕರೆಯಲಾಗುತ್ತದೆ. ದಾಖಲೆಗಳು ಸಹ ಅದನ್ನೇ ಹೇಳುತ್ತವೆ. ಕ್ಯಾಶ್‌ ರಿಚ್‌ ಲೀಗ್‌ ಆರಂಭವಾಗಿ 16 ವರ್ಷಗಳೇ ಕಳೆದರೂ ಬೆಂಗಳೂರು ಒಮ್ಮೆಯೂ ಕಪ್‌ ಗೆದ್ದಿಲ್ಲ. ಸೂಪರ್‌ಸ್ಟಾರ್‌ಗಳಿಂದ ತುಂಬಿರುವ ಆರ್​ಸಿಬಿ ತಂಡ ಪ್ರತಿ ಬಾರಿಯೂ ಸಾಕಷ್ಟು ನಿರೀಕ್ಷೆಗಳೊಂದಿಗೆ ಬರುತ್ತದೆ. ಆದರೆ, ಆ ನಿರೀಕ್ಷೆಯನ್ನು ಮುಟ್ಟುವಲ್ಲಿ ವಿಫಲವಾಗುತ್ತಿದೆ.

    ನಿರ್ಣಾಯಕ ಪಂದ್ಯಗಳನ್ನು ಕೈ ಚೆಲ್ಲುವುದು, ಗೆಲ್ಲಬೇಕಿದ್ದ ಕಡೆ ಅಲ್ಪ ಅಂತರದಲ್ಲಿ ಸೋಲುವುದು, ಅದೃಷ್ಟ ಕೂಡ ಈ ತಂಡಕ್ಕೆ ಕೈ ಕೊಡುವುದು ಸಾಮಾನ್ಯವಾಗಿಬಿಟ್ಟಿದೆ. ಈ ಬಾರಿಯೂ ಆರ್‌ಸಿಬಿ ಕತೆ ಇದೆ ಆಗಿದೆ. ಇಲ್ಲಿಯವರೆಗೆ ಆಡಿದ 8 ಪಂದ್ಯಗಳಲ್ಲಿ ಏಳು ಬಾರಿ ಸೋತ ನಂತರ ಡುಪ್ಲೆಸಿಸ್ ತಂಡವು ಅಧಿಕೃತವಾಗಿ ಪ್ಲೇ ಆಫ್‌ ರೇಸ್‌ನಿಂದ ನಿರ್ಗಮಿಸಿದೆ.

    ಇನ್ನೂ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್​ ಕಳಪೆ ಸಾಧನೆ ವಿಚಾರದಲ್ಲಿ ಆರ್‌ಸಿಬಿಯನ್ನೂ ಮೀರಿಸಿದೆ. ಐಪಿಎಲ್ ಕಪ್ ಗೆಲ್ಲದ ತಂಡಗಳಲ್ಲಿ ಪಂಜಾಬ್ ಕೂಡ ಒಂದು. ಪಂಜಾಬ್​ ತಂಡವು 2014ರಲ್ಲಿ ನಡೆದ ಐಪಿಎಲ್ ಸೀಸನ್​ನಲ್ಲಿ ಫೈನಲ್​ ತಲುಪಿತ್ತು. ಆದರೆ, ಕೋಲ್ಕತ್ತ ನೈಟ್​ ರೈಡರ್ಸ್​ ವಿರುದ್ಧ ಸೋಲುಂಡಿತು. 2014ರಲ್ಲಿ ರನ್ನರ್ ಅಪ್ ಆಗಿದ್ದ ಪಂಜಾಬ್ ಆ ಬಳಿಕ ಅತ್ಯಂತ ಕಳಪೆ ಆಟವಾಡುತ್ತಿದೆ. ಕಳೆದ 9 ಸೀಸನ್‌ಗಳಲ್ಲಿ ತಂಡವು ಒಮ್ಮೆಯೂ ಪ್ಲೇ ಆಫ್‌ಗೆ ಅರ್ಹತೆ ಪಡೆದಿಲ್ಲ ಎಂಬುದು ಗಮನಾರ್ಹ. ಆ ಲೆಕ್ಕಾಚಾರದಲ್ಲಿ ನೋಡಿದರೆ ಆರ್​ಸಿಬಿ ಫ್ಲಾಪ್ ಟೀಮ್ ಅಲ್ಲವೇ ಅಲ್ಲ, ಆ ಹೆಸರು ಪಂಜಾಬ್ ಸೇರಬೇಕು. ಸೀಸನ್​ಗಳು ಕಳೆದರೂ ಪಂಜಾಬ್‌ನ ಆಟದ ಶೈಲಿಯಲ್ಲಿ ಹೆಚ್ಚು ಬದಲಾಗಿಲ್ಲ. ಇದರಿಂದಾಗಿ ತಂಡದ ಅಭಿಮಾನಿ ಬಳಗವೂ ಕುಸಿಯುತ್ತಿದೆ.

    ಕಳಪೆ ಆಟದಲ್ಲಿ ಪಂಜಾಬ್, ಆರ್​ಸಿಬಿ ತಂಡವನ್ನು ಹೇಗೆ ಮೀರಿಸಿದೆ ಎಂಬುದಕ್ಕೆ ಈ ಸೀಸನ್ ಉತ್ತಮ ಉದಾಹರಣೆಯಾಗಿದೆ. ಈ ಸೀಸನ್​ನಲ್ಲಿ ತಂಡವು ಸೋತ ಬಹುತೇಕ ಎಲ್ಲ ಪಂದ್ಯಗಳು ರೋಚಕ ಘಟ್ಟದಲ್ಲಿ ಕೊನೆಗೊಂಡಿವೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕೇವಲ 2 ರನ್​ಗಳಿಂದ ಸೋತಿರು. ರಾಜಸ್ಥಾನ ರಾಯಲ್ಸ್ ವಿರುದ್ಧ ಎರಡು ಎಸೆತಗಳು ಬಾಕಿ ಇರುವಾಗಲೇ ಪಂದ್ಯವನ್ನು ಕಳೆದುಕೊಂಡಿತು. ಮುಂಬೈ ಇಂಡಿಯನ್ಸ್ ವಿರುದ್ಧವೂ ಗೆಲುವಿನ ಸಮೀಪದಲ್ಲೇ ಎಡವಿತು. ನಿನ್ನೆ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯವನ್ನು ಕೊನೆಯ ಓವರ್​ವರೆಗೂ ಕೊಂಡೊಯ್ಯುವಲ್ಲಿ ಪಂಜಾಬ್​ ಯಶಸ್ವಿಯಾಯಿತು. ಆದರೂ, ಗುಜರಾತ್​ ಟೈಟಾನ್ಸ್​ ಗೆಲ್ಲುವುದನ್ನು ತಡೆಯಲಾಗಲಿಲ್ಲ.

    ನಿರ್ಣಾಯಕ ಸಮಯದಲ್ಲಿ ಪ್ರಮುಖ ಆಟಗಾರರ ವೈಫಲ್ಯ, ಅದೃಷ್ಟದ ಕೊರತೆ ಇತ್ಯಾದಿಗಳು ತಂಡದ ಗೆಲುವಿಗೆ ಅಡ್ಡಿಯಾಗುತ್ತಿವೆ. ಇನ್ನೊಂದು ಕುತೂಹಲಕಾರಿ ಅಂಶವೆಂದರೆ ಪಾಯಿಂಟ್ ಪಟ್ಟಿಯಲ್ಲಿ ಆರ್‌ಸಿಬಿ ಜೊತೆಗೆ ಪಂಜಾಬ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ಎರಡು ತಂಡಗಳ ಕಪ್ ಕನಸು ನನಸಾಗುವುದು ಯಾವಾಗ? ಎಂಬುದೇ ಯಕ್ಷ ಪ್ರಶ್ನೆಯಾಗಿದೆ. (ಏಜೆನ್ಸೀಸ್​)

    ನಾನು ಮೂರು ಮದ್ವೆಯಾಗಿದ್ರೂ ಈತನೊಂದಿಗೆ ಮಾತ್ರ ತುಂಬಾ ಖುಷಿಯಾಗಿದ್ದೀನಿ! ನಟಿ ಲಕ್ಷ್ಮೀ ಓಪನ್ ಟಾಕ್

    ರಾಜ್ಯಕ್ಕೆ ಟಾಪರ್​ ಆದ್ರೂ ಈ ಹುಡುಗಿಯ ಸಂಭ್ರಮ ಕಿತ್ತುಕೊಂಡ ಟ್ರೋಲ್ಸ್​! ಕೊನೆಗೆ ಗೆದ್ದಿದ್ದು ಮಾತ್ರ ಒಳ್ಳೆಯತನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts