More

    ಪ್ರತಿಯೊಬ್ಬರೂ ಕರ್ತವ್ಯ ಪಾಲಿಸುವುದು ಅಗತ್ಯ

    ತೆಲಸಂಗ: ಗ್ರಾಮದ ವಿವಿಧೆಡೆ ಮಂಗಳವಾರ ಗಣರಾಜ್ಯೋತ್ಸವ ಆಚರಿಸಲಾಯಿತು. ನಾಡಕಚೇರಿಯಲ್ಲಿ ಉಪತಹಸೀಲ್ದಾರ್ ಮಹ್ಮದರಫೀಕ್ ಯತ್ನಟ್ಟಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಎಲ್ಲರೂ ಹಕ್ಕು, ಕರ್ತವ್ಯ ಅರಿತು ನಡೆಯಬೇಕು ಎಂದು ಹೇಳಿದರು. ಗಣತಂತ್ರ ಕಂದಾಯ ನಿರೀಕ್ಷಕ ಮುಬಾರಕ ಮುಜಾವರ, ಬಿ.ಜಿ.ಇರಕಾರ, ರಾಜು ವಾಗಮೋರೆ ಇದ್ದರು. ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಅಕ್ಕೂಬಾಯಿ ಕಾರಂಡೆ ಧ್ವಜಾರೋಹಣ ನೆರವೇರಿಸಿದರು.

    ಶಾಸಕರ ಮಾದರಿ ಶಾಲೆಯಲ್ಲಿ ಅಶ್ವಿನಿ ಮಣ್ಣಪ್ಪಗೋಳ, ಬಿವಿವಿ ಶಿಕ್ಷಣ ಸಂಸ್ಥೆಯಲ್ಲಿ ಮಲ್ಲಿಕಾರ್ಜುನ ಸಜ್ಜನ,
    ಹೆಸ್ಕಾಂ ಕಚೇರಿಯಲ್ಲಿ ಪಿ.ಕೆ.ಹಿರೇಮಠ, ಸರ್ಕಾರಿ ಕಾಲೇಜಿನಲ್ಲಿ ಡಾ.ಉದಯಕುರ ದೊಡ್ಡಮನಿ, ಹಾಜಿಮಸ್ತಾನ್ ಸೊಸೈಟಿಯಲ್ಲಿ ಹಾಫಿಸಾಬ್ ರಿಜ್ವಾನ್, ಪಶು ಆಸ್ಪತ್ರೆ:ಯಲ್ಲಿ ಡಾ.ವಿರೂಪಾಕ್ಷ ಸಿಂಧೂರ, ಮಾಧವಾನಂದ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧನವಂತ ಹಳಿಂಗಳಿ, ವಸತಿ ಶಾಲೆಯಲ್ಲಿ ರೇಣುಕಾ ಹೊಸಮನಿ, ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ ಯಂಕಪ್ಪ ಉಪ್ಪಾರ ಧ್ವಜಾರೋಹಣ ನೆರವೇರಿಸಿದರು.

    ಅರಟಾಳ ವರದಿ: ಗ್ರಾಮದ ವಿವಿಧೆಡೆ ಮಂಗಳವಾರ ಗಣರಾಜ್ಯೋತ್ಸವ ಆಚರಿಸಲಾಯಿತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕ ಡಿ.ಆರ್.ಶಿಂಧೆ ಧ್ವಜಾರೋಹಣ ನೆರವೇರಿಸಿದರು. ಕೆವಿಜಿ ಬ್ಯಾಂಕ್‌ನಲ್ಲಿ ಬ್ಯಾಂಕ್ ಪ್ರಬಂಧಕ ಪ್ರಸಾದ ನಖಾ, ಗ್ರಾಪಂ ಕಾರ್ಯಾಲಯದಲ್ಲಿ ಪಿಡಿಒ ಎ.ಜಿ.ಎಡಕೆ, ಪಿಕೆಪಿಎಸ್‌ನಲ್ಲಿ ನಿರ್ದೇಶಕ ಶ್ರೀಶೈಲ ಶಿಂಧೂರ, ಘಾಟಗೆ ತೋಟದ ಶಾಲೆಯಲ್ಲಿ ವಸಂತ ಘಾಟಗೆ, ಹಟ್ಟಿ ತೋಟದ ಶಾಲೆಯಲ್ಲಿ ವಿಠ್ಠಲ ಪೂಜಾರಿ, ಚನ್ನಮ್ಮ ಸರ್ಕಲ್‌ದಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ನೆರವೇರಿಸಿದರು. ರಾಯಣ್ಣ ಸರ್ಕಲ್‌ನಲ್ಲಿ ಪಿಡಿಒ ಎ.ಜಿ. ಎಡಕೆ ಮತ್ತು ಕೆವಿಜಿಬಿ ಮ್ಯಾನೇಜರ್ ಪ್ರಸಾದ ನಖಾ ನೆರವೇರಿಸಿದರು. ಆನಂದ ಗಿರಿಜಾಗೋಳ, ತಾಪಂ ಸದಸ್ಯ ಶಿವಪ್ಪ ಹಟ್ಟಿ, ಎಸ್ ಎಸ್. ಜನಾಯಿ, ಮಲ್ಲಪ್ಪ ಪೂಜಾರಿ ಇತರರು ಇದ್ದರು.

    ಕಬ್ಬೂರ ವರದಿ: ಪಟ್ಟಣದ ವಿವಿಧಡೆ 72ನೆ ಗಣರಾಜ್ಯೋತ್ಸವ ಆಚರಿಸಲಾಯಿತು. ಪಪಂ ಕಾರ್ಯಾಲಯದಲ್ಲಿ ಹಿರಾ ಶುಗರ್ ನಿರ್ದೇಶಕ ಸುರೇಶ ಬೆಲ್ಲದ ಹಾಗೂ ಸಿದ್ರಾಮ ಹಿರೇಕುಬರ ಗಾಂಧೀಜಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮುಖ್ಯಾಧಿಕಾರಿ ವಿ.ಬಿ.ಸೊಗಲದ ಧ್ವಜಾರೋಹಣ ನೆರವೇರಿಸಿದರು. ಗ್ರಾಮ ಲೆಕ್ಕಾಧಿಕಾರಿ ವಿ.ಎಸ್.ಢವಳೇಶ್ವರ, ಮಹಾದೇವ ಜಿವಣಿ, ಬಸಲಿಂಗ ಕಾಡೇಶಗೋಳ, ಜೆ.ಆರ್.ಪಾಟೀಲ ಇದ್ದರು. ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಮೇಲ್ವಿಚಾರಕ ನಾಗೇಶ ಕಾಪಶಿ ಧ್ವಜಾರೋಹಣ ನೆರವೇರಿಸಿದರು. ಮುಬಾರಕ ನದಾಫ್ ಇದ್ದರು. ಕೆ.ಎಂ.ಬೆಲ್ಲದ ಪ್ರೌಢಶಾಲೆಯಲ್ಲಿ ಸುರೇಶ ಬೆಲ್ಲದ ಧ್ವಜಾರೋಹಣ ನೆರವೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts