More

    ಪ್ರತಿವರ್ಷ ಶರಣ ಸಂಸ್ಕೃತಿ ಶಿಬಿರ

    ಬಸವಕಲ್ಯಾಣ: ಮಕ್ಕಳಿಗಾಗಿ ಆಯೋಜಿಸಿದ್ದ ಶರಣ ಸಂಸ್ಕೃತಿ ಶಿಬಿರದ ಪರೀಕ್ಷೆಯಲ್ಲಿ ಮಕ್ಕಳು ಚೆನ್ನಾಗಿ ಬರೆದಿದ್ದಾರೆ. ಹೀಗೆ ಪ್ರತಿ ವರ್ಷ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು ಎಂದು ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

    ಅನುಭವ ಮಂಟಪದಲ್ಲಿ ಬುಧವಾರ ವಿಶ್ವಬಸವ ಧರ್ಮ ಟ್ರಸ್ಟ್ ಅನುಭವ ಮಂಟಪ ಹಾಗೂ ಬಸವಕಲ್ಯಾಣ ಕ್ಷೇತ್ರ ಸಮಿತಿ ಸಹಯೋಗದಡಿ ಐದು ದಿನ ನಡೆದ ಶರಣ ಸಂಸ್ಕೃತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ಪ್ರವಚನದಿಂದ ಆಗುವ ಬದಲಾವಣೆಗಿಂತ ಇಂತಹ ಶಿಬಿರಗಳಿಂದಾಗುವ ಬದಲಾವಣೆಗಳು ಹೆಚ್ಚು ಎಂದು ಅಭಿಪ್ರಾಯಪಟ್ಟರು.

    ಹುಲಸೂರಿನ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಮಾತನಾಡಿ, ಶಿಬಿರಗಳು ಮಕ್ಕಳ ಮನಸ್ಸಿನಲ್ಲಿ ಸಂಸ್ಕಾರವನ್ನು ಬಿತ್ತುವ ಉತ್ತಮ ಮಾರ್ಗವಾಗಿದೆ. ಎಲ್ಲ ಕಡೆ ಶಿಬಿರಗಳು ನಡೆಯುತ್ತವೆ. ಆದರೆ ಅವು ತಾತ್ವಿಕ ಚಿಂತನೆಗಳನ್ನು ಪಾಠ ಮಾಡುವ ಶಿಬಿರವಾಗಿದೆ. ಮಕ್ಕಳಲ್ಲಿ ಬಸವತತ್ವದ ಸಂಸ್ಕಾರವನ್ನು ಬಿತ್ತುವ ಈ ಕಾರ್ಯ ಶ್ರೀ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮಾಡುತ್ತಿರುವುದು ಶ್ಲಾಘನಿಯ ಎಂದರು.

    ಪೂಜ್ಯ ಡಾ.ಗಂಗಾAಬಿಕಾ ಅಕ್ಕ ಮಾತನಾಡಿ, ಮಕ್ಕಳು ಮುಂದಿನ ಉಜ್ಜಲ ಭವಿಷ್ಯಕ್ಕಾಗಿ ಈಗಿನಿಂದಲೇ ಕನಸುಗಳು ಹೊತ್ತು ಹೆಜ್ಜೆ ಹಾಕಬೇಕು. ಶಿಬಿರದಲ್ಲಿ ಕಲಿತ ಸಂಸ್ಕಾರ ಶಿಕ್ಷಣ ಪಾಠಗಳನ್ನು ಮನೆಯಲ್ಲಿ ನಿತ್ಯ ತಪ್ಪದೇ ಆಚರಣೆಯಲ್ಲಿ ತರಬೇಕು. ಪಾಲಕರು ಈ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

    ಶಿಬಿರಾರ್ಥಿಗಳಿಗೆ ಶರಣ ಸಂಸ್ಕೃತಿ ಶಿಬಿರ ಪರೀಕ್ಷೆ ತೆಗದುಕೊಳ್ಳಲಾಯಿತು. ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಶಿಬಿರಾರ್ಥಿಗಳಿಗೆ ಬಹುಮಾನ ಹಾಗೂ ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts