More

    ಪ್ರತಿ ತಿಂಗಳೂ ಸಪ್ತಪದಿ ವಿವಾಹ: ಸಚಿವ ಕೋಟ ಭರವಸೆ

    ಕೋಟ: ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಮತ್ತೆ ಚಾಲನೆ ನೀಡಲಾಗಿದೆ. ಮುಂದೆ ಪ್ರತಿ ತಿಂಗಳ 4,5,6ರಂದು ಎಲ್ಲ ದೇವಸ್ಥಾನಗಳಲ್ಲಿ ಸಪ್ತಪದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಜುಲೈ ತನಕ ಇದು ನಡೆಯಲಿದೆ. ಕೋಟ ಅಮೃತೇಶ್ವರಿ ದೇವಸ್ಥಾನದಲ್ಲಿ ಮಾರ್ಚ್ 26ರಂದು ಎರಡನೇ ಬಾರಿ ಸಪ್ತಪದಿ ನಡೆಯಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
    ಕೋಟ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದಲ್ಲಿ ಬುಧವಾರ ರಾಜ್ಯ ಸರ್ಕಾರದ ಹಿಂದು ಧಾರ್ಮಿಕ ದತ್ತಿ ಸಚಿವಾಲಯದ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಯೋಧ್ಯೆ ರಾಮ ಮಂದಿರ ನಿರ್ಮಾಣ ಜನರ ಮೂಲಕ ಆಗುತ್ತಿರುವ ಕಾರ್ಯ. ಭಾರತೀಯರಾದ ನಾವು ಈ ಬಗ್ಗೆ ಹೆಮ್ಮೆಪಡಬೇಕೇ ಹೊರತು ಟೀಕೆ ಸರಿಯಲ್ಲ ಎಂದರು.
    ದೇವಳದ ಆಡಳಿದ ಮಂಡಳಿ ಸದಸ್ಯ ಅರ್ಚಕರು, ಗಣ್ಯರು ಉಪಸ್ಥಿತರಿದ್ದರು.

    ಹಸೆಮಣೆ ಏರಿದ 10 ಜೋಡಿಗಳು: ವಿವಾಹಕ್ಕೆ ಸಾವಿರಾರು ಜನರು ಮಧುಸೂದನ್ ಬಾಯಿರಿ, ರಾಜೇಂದ್ರ ಅಡಿಗ ನೇತೃತ್ವದ ತಂಡದ ಮೂಲಕ ಧಾರ್ಮಿಕ ಕಾರ್ಯಕ್ಕೆ ಸಾಕ್ಷಿಯಾದರು. ದೇವಳದ ಅಧ್ಯಕ್ಷರಾಗಿ ಆನಂದ್ ಸಿ.ಕುಂದರ್ ಎರಡನೇ ಸಾಮೂಹಿಕ ಮದುವೆಗೆ ವೇದಿಕೆ ಕಲ್ಪಿಸಿದರು. ಒಟ್ಟು 10 ಜೋಡಿ ಹಸಮಣೆ ಏರಿದರು.

    ಸೋಬಾನೆ ಹಾಡು: ವಿಪ್ರ ಮಹಿಳೆಯರು ಸೋಬಾನೆ ಹಾಡುವುದರ ಮೂಲಕ ವಿವಾಹ ಮಹೋತ್ಸವದ ಉದ್ದಕ್ಕೂ ಗಮನ ಸೆಳೆದರು. ಬ್ರಹ್ಮಾವರ ತಾಪಂ ಅಧ್ಯಕ್ಷೆ ಜ್ಯೋತಿ ಉದಯ್ ಪೂಜಾರಿ, ತಾಪಂ ಸದಸ್ಯೆ ಲಲಿತಾ, ದೇವಳ ಟ್ರಸ್ಟಿ ಸುಶೀಲಾ ಸೋಮಶೇಖರ್, ಜ್ಯೋತಿ ಬಿ. ಶೆಟ್ಟಿ, ಸಚಿವರ ಪತ್ನಿ ಶಾರದ ಆರತಿ ಬೆಳಗಿ ಶುಭ ಹಾರೈಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts