More

    ಉತ್ತರಾಖಂಡದ ನಂತರ ಗೋವಾದ ಜನರಿಗೆ ಉಚಿತ ವಿದ್ಯುತ್ ಭರವಸೆ ನೀಡಿದ ಕೇಜ್ರಿವಾಲ್

    ಪಣಜಿ: ಮುಂದಿನ ವರ್ಷದ ಆರಂಭದಲ್ಲಿ ಕೆಲ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಆಮ್​ ಆದ್ಮಿ ಪಕ್ಷ ಅದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾರಂಭಿಸಿದೆ. ರಾಜ್ಯಗಳಲ್ಲಿ ಚುನಾವಣಾ ಪ್ರಚಾರವನ್ನು ಈಗಾಗಲೇ ಆರಂಭಿಸಲಾಗಿದ್ದು, ಉಚಿತ ವಿದ್ಯುತ್ ಭರವಸೆ ನೀಡಲಾಗುತ್ತಿದೆ.

    ಇತ್ತೀಚೆಗೆ ಉತ್ತರಾಖಂಡದಲ್ಲಿ ಪ್ರತಿ ಮನೆಗೆ ತಿಂಗಳಿಗೆ 300 ಯುನಿಟ್ ಉಚಿತ ವಿದ್ಯುತ್ ಭರವಸೆ ನೀಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೀಗ ಗೋವಾದತ್ತ ಮುಖ ಮಾಡಿದ್ದಾರೆ. ಗೋವಾದ ರಾಜಧಾನಿ ಪಣಜಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದು ವೇಳೆ ಕರಾವಳಿ ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ಮನೆಗೆ ಉಚಿತವಾಗಿ 300 ಯುನಿಟ್ ವಿದ್ಯುತ್ ನೀಡುವುದಾಗಿ ಹೇಳಿದ್ದಾರೆ. ಇದರಿಂದಾಗಿ ರಾಜ್ಯದ ಶೇ. 87 ಮನೆಗಳಿಗೆ ವಿದ್ಯುತ್ ಶುಲ್ಕ ಶೂನ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

    ಈ ಹಿಂದೆ ನಮ್ಮ ದೆಹಲಿಯಲ್ಲಿ ಬೇಸಿಗೆಯಲ್ಲಿ ಪ್ರತಿ ದಿನ 7-8 ಗಂಟೆ ಪವರ್ ಕಟ್ ಮಾಡಲಾಗುತ್ತಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲ ಕೇಬಲ್​ಗಳು ಮತ್ತು ಟ್ರಾನ್ಸ್ಫಫಾರ್ಮರ್​ಗಳನ್ನು ಬದಲಿಸಿದ್ದೇವೆ. ಇದಕ್ಕೆ ಬರೋಬ್ಬರಿ ಎರಡೂವರೆ ವರ್ಷ ತೆಗೆದುಕೊಂಡಿದ್ದೇವೆ. ಈಗ ದೆಹಲಿಯಲ್ಲಿ ಪವರ್ ಕಟ್ ಇಲ್ಲವೇ ಇಲ್ಲ. ಜನರು 24 ಗಂಟೆಯೂ ವಿದ್ಯುತ್ ಬಳಸುವಂತಾಗಿದೆ. ಅದೇ ರೀತಿ ಗೋವಾದಲ್ಲೂ ಮಾಡಲಾಗುವುದು. ಈ ಹಿಂದಿನ ಬಾಕಿ ಕರೆಂಟ್ ಬಿಲ್​ ಅನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು. ಕೃಷಿಗಾಗಿ ವಿದ್ಯುತ್ ಬಳಸುವ ರೈತರಿಗೆ ಸಂಪೂರ್ಣವಾಗಿ ಉಚಿತ ವಿದ್ಯುತ್ ಸರಬರಾಜು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

    ಗೋವಾದ ವಾತಾವರಣ ತುಂಬ ಸುಂದರವಾಗಿದೆ. ಆದರೆ ಇಲ್ಲಿನ ರಾಜಕೀಯ ಹೊಲಸಾಗಿದೆ. ಗೋವಾ ರಾಜಕೀಯಕ್ಕೆ ಬದಲಾವಣೆಯ ಅವಶ್ಯಕತೆ ಇದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. (ಏಜೆನ್ಸೀಸ್)

    ದೀದಿ ನಾಡಿನ ಬೀಡಿ ಪ್ರಿಯರ ಬಾಯಲ್ಲಿ ಮೆಸ್ಸಿ ಮಾತು! ವೈರಲ್ ಆಯ್ತು ಮೆಸ್ಸಿ ಬೀಡಿ ಫೋಟೋ!

    ಜೈಲಲ್ಲಿ ಸಿಗಲಿದೆ ಬಿಸಿ ಬಿಸಿ ಚಿಕನ್ ಖಾದ್ಯ; ಹೇಗಾಗಲಿವೆ ಗೊತ್ತಾ ಮಹಾರಾಷ್ಟ್ರದ ಜೈಲುಗಳು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts