

ಪಕ್ಷಿಗಳು ಮಲ - ಮೂತ್ರವನ್ನು ಬೇರೆ ಬೇರೆ ವಿಸರ್ಜನೆ ಮಾಡುವುದಿಲ್ಲ. ಮಲ ಮತ್ತು ಮೂತ್ರ ಮಿಶ್ರಣವಾಗಿ, ತಿಳಿಯಾದ ಮಲವಿಸರ್ಜನೆ ಸಸ್ಯಗಳ ಎಲೆಗಳಲ್ಲಿ, ಕಟ್ಟಡಗಳ ಗೋಡೆಗಳಲ್ಲಿ ಅಂಟಿಕೊಂಡು ನಂತರ ಅದು ಒಣಗಿ ಪುಡಿಯಾಗಿ ಗಾಳಿಯಲ್ಲಿ ಸೇರುತ್ತದೆ. ಪಾರಿವಾಳಗಳ ಮಲದಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಪರವಾಲಂಬಿ ರೋಗಕಾರಕ (ಪ್ಯಾಥೋಜನಿಕ್) ಬ್ಯಾಕ್ಟೀರಿಯ, ವೈರಸ್, ಫಂಗಸ್ ಮತ್ತು ಯೀಸ್ಟ್ನಂತಹ ಸೂಕ್ಷ್ಮಜೀವಿಗಳಿರುತ್ತವೆ, ಅವುಗಳು ಕಣ್ಣಿಗೆ ಕಾಣಿಸುವುದಿಲ್ಲ, ಆದ್ದರಿಂದ ಅದು ಯಾರಿಗೂ ಗೊತ್ತಾಗುವುದಿಲ್ಲ.