More

    ಇದೊಂದು ಕಾರಣದಿಂದಾಗಿ ಮುಂಬೈ ಇಂಡಿಯನ್ಸ್​ ತಂಡ ಈ ಸಲ ಕಪ್ ಗೆಲ್ಲುವುದು ಕಷ್ಟ!

    ಬೆಂಗಳೂರು: ಐಪಿಎಲ್ 13ನೇ ಆವೃತ್ತಿಯಲ್ಲಿ ಅತ್ಯಂತ ಬಲಿಷ್ಠ ನಿರ್ವಹಣೆ ತೋರುತ್ತ ಬಂದಿರುವ ತಂಡ ಮುಂಬೈ ಇಂಡಿಯನ್ಸ್. ಹಾಲಿ ಚಾಂಪಿಯನ್ ತಂಡ ಮೊದಲ ತಂಡವಾಗಿ ಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿತ್ತು. ಇದೇ ಮೊದಲ ಬಾರಿಗೆ ಫೈನಲ್‌ಗೇರಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮಂಗಳವಾರ ನಡೆಯಲಿರುವ ಪ್ರಶಸ್ತಿ ಹೋರಾಟದಲ್ಲಿ ಮುಂಬೈ ಇಂಡಿಯನ್ಸ್ ಫೇವರಿಟ್ ತಂಡವಾಗಿಯೇ ಕಣಕ್ಕಿಳಿಯಲಿದೆ. ಆದರೆ ಐಪಿಎಲ್ ಇತಿಹಾಸ ಗಮನಿಸಿದಾಗ, ಒಂದು ಕಾರಣದಿಂದಾಗಿ ಮುಂಬೈ ಇಂಡಿಯನ್ಸ್ ತಂಡ ಈ ಸಲ ಕಪ್ ಗೆಲ್ಲುವುದು ಕಷ್ಟ ಎನ್ನಲಾಗುತ್ತಿದೆ.

    ಮುಂಬೈ ಇಂಡಿಯನ್ಸ್ ಬಲಿಷ್ಠ ಬ್ಯಾಟಿಂಗ್-ಬೌಲಿಂಗ್ ವಿಭಾಗ ಹೊಂದಿದೆ. ಫೀಲ್ಡಿಂಗ್‌ನಲ್ಲೂ ಸಮರ್ಥ ನಿರ್ವಹಣೆ ತೋರುತ್ತ ಬಂದಿದೆ. ಹೀಗಾಗಿ ಬಲಾಬಲದ ಲೆಕ್ಕಾಚಾರದಲ್ಲಿ ರೋಹಿತ್ ಶರ್ಮ ಬಳಗ ಬಲಿಷ್ಠವಾಗಿ ಕಂಗೊಳಿಸುತ್ತಿದೆ. ಆದರೆ ಸಂಖ್ಯಾಶಾಸದ ಲೆಕ್ಕಾಚಾರದಲ್ಲಿ ಮಾತ್ರ ಮುಂಬೈ ಇಂಡಿಯನ್ಸ್ ತಂಡ ಹಿನ್ನಡೆ ಕಾಣುತ್ತಿದೆ.

    ಮುಂಬೈ ಇಂಡಿಯನ್ಸ್ ತಂಡಕ್ಕೂ ಬೆಸ ಸಂಖ್ಯೆಗೂ ಉತ್ತಮ ನಂಟು ಇದೆ. ಆದರೆ ಇದುವರೆಗೆ ಸಮ ಸಂಖ್ಯೆಯ ವರ್ಷ ಮುಂಬೈಗೆ ಶುಭ ತಂದಿಲ್ಲ. ಮುಂಬೈ ತಂಡ ಇದುವರೆಗೆ 4 ಐಪಿಎಲ್ ಟ್ರೋಫಿಗಳನ್ನೂ ಬೆಸ ಸಂಖ್ಯೆ ವರ್ಷಗಳಲ್ಲೇ (2013, 2015, 2017, 2019) ಗೆದ್ದಿದೆ.

    ಸಮ ಸಂಖ್ಯೆ ವರ್ಷ ಮುಂಬೈಗೆ ಯಾವತ್ತೂ ಅದೃಷ್ಟ ತಂದಿಲ್ಲ. ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಸಮ ಸಂಖ್ಯೆಯ ವರ್ಷದಲ್ಲಿ (2010) ಮುಂಬೈ ಇಂಡಿಯನ್ಸ್ ರನ್ನರ್‌ಅಪ್‌ಗೆ ತೃಪ್ತಿಪಟ್ಟಿತ್ತು. ಅನಂತರ ಬೆಸ ಸಂಖ್ಯೆ ವರ್ಷಗಳಲ್ಲಿ ಮಾತ್ರ ಮುಂಬೈ ಪ್ರಶಸ್ತಿ ಗೆಲ್ಲುತ್ತ ಬಂದಿದೆ. ಹೀಗಾಗಿ ಈ ಬಾರಿ ಸಮ ಸಂಖ್ಯೆಯ (2020) ವರ್ಷ ಮುಂಬೈಗೆ ಪ್ರಶಸ್ತಿ ಗೆಲುವು ತಂದುಕೊಡುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಮುಂಬೈ ಇಂಡಿಯನ್ಸ್ ತಂಡ 2 ಬಾರಿ ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳನ್ನು ಗೆದ್ದಿರುವುದು ಕೂಡ ಬೆಸ ಸಂಖ್ಯೆಯ (2011, 2013) ವರ್ಷಗಳಲ್ಲೇ ಆಗಿದೆ.

    ಇನ್ನು ರೋಹಿತ್ ಶರ್ಮ ಅವರಿಗೂ ಬೆಸ ಸಂಖ್ಯೆಯ ವರ್ಷಗಳಷ್ಟೇ ಅದೃಷ್ಟ ತಂದಿವೆ. ಅವರು ಡೆಕ್ಕನ್ ಚಾರ್ಜರ್ಸ್‌ ತಂಡದ ಪರ ಐಪಿಎಲ್‌ನಲ್ಲಿ ಮೊದಲ ಪ್ರಶಸ್ತಿ ಜಯಿಸಿದ್ದು ಕೂಡ ಬೆಸ ಸಂಖ್ಯೆಯ ವರ್ಷದಲ್ಲೇ (2009) ಆಗಿತ್ತು. ನಂತರ ಮುಂಬೈ ನಾಯಕರಾಗಿಯೂ ಬೆಸ ಸಂಖ್ಯೆಯ ವರ್ಷದಲ್ಲಷ್ಟೇ ಪ್ರಶಸ್ತಿ ಜಯಿಸಿದ್ದಾರೆ.

    VIDEO | ವಿರಾಟ್ ಕೊಹ್ಲಿ ಸ್ಲೆಡ್ಜಿಂಗ್‌ಗೆ ಮನೀಷ್ ಪಾಂಡೆ ದಿಟ್ಟ ಉತ್ತರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts