More

    ಮಂಗಳ ಗ್ರಹದ ಮೇಲೆ ನೀರು ಇದೆ ಎಂದ ಯುರೋಪ್​ ಬಾಹ್ಯಾಕಾಶ ಸಂಸ್ಥೆ

    ನವದೆಹಲಿ: ಮಂಗಳಗ್ರಹದ ಅಧ್ಯಯನಕ್ಕಾಗಿ ಅಮೆರಿಕ, ಯುರೋಪ್​ ಒಕ್ಕೂಟ ಮತ್ತು ಭಾರತ ಸೇರಿ ಅನೇಕ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಕೆಂಪುಗ್ರಹದ ಮೇಲೆ ನೀರು ಮತ್ತು ಜೀವಿಗಳು ವಾಸವಾಗಿದ್ದ ಲಕ್ಷಣವನ್ನು ಪತ್ತೆ ಮಾಡಲು ಹರಸಾಹಸಪಡುತ್ತಿವೆ. ಇದೇ ವೇಳೆ ಮಂಗಳಗ್ರಹದ ಮೇಲೆ ನೀರು ಇದೆ ಎಂಬುದು ಪತ್ತೆಯಾಗಿರುವುದಾಗಿ ಯುರೋಪಿಯನ್​ ಬಾಹ್ಯಾಕಾಶ ಸಂಸ್ಥೆ (ಇಎಸ್​ಎ) ಹೇಳಿದೆ.

    ಮಂಗಳಗ್ರಹದ ಮೇಲೆ ಬೃಹತ್​ ಮಂಜುಗಡ್ಡೆಯ ಕುಳಿ ಪತ್ತೆಯಾಗಿದೆ. ಅಂದಾಜು 82 ಕಿ.ಮೀ. ಅಗಲವಾಗಿರುವ ಈ ಕುಳಿಯಲ್ಲಿ 1.8 ಕಿ.ಮೀ. ಆಳವಾದ ಮಂಜುಗಡ್ಡೆ ಇದೆ. ಕೊರೊಲೇವ್​ ಕುಳಿ ಎಂದು ಗುರುತಿಸಲಾಗುವ ಈ ಕುಳಿಯ ದೃಶ್ಯಗಳನ್ನು ತನ್ನ ಮಾರ್ಸ್​ ಎಕ್ಸ್​ಪ್ರೆಸ್​ ರವಾನಿಸಿರುವುದಾಗಿ ಇಎಸ್​ಎ ತಿಳಿಸಿದೆ.

    ಕೆಂಪು ಗ್ರಹದ ದಕ್ಷಿಣ ಭಾಗದಲ್ಲಿ ಒಲಿಂಪಿಯಾ ಆ್ಯಂಡೆ ಎಂಬ ಮರಳಿನ ದಿಬ್ಬಿವಿದೆ. ಇದು ಮಂಗಳಗ್ರಹದ ಉತ್ತರ ಧ್ರುವದ ಒಂದು ಭಾಗವನ್ನು ಆವರಿಸಿದೆ. ಈ ಕುಳಿಯಲ್ಲಿನ ಮಂಜುಗಡ್ಡೆ ವರ್ಷಪೂರ್ತಿ ಸ್ಥಿರವಾಗಿರುತ್ತದೆ. ಏಕೆಂದರೆ ಈ ಭಾಗದಲ್ಲಿನ ವಾಯುಭಾರ ಕುಸಿತ ನೈಸರ್ಗಿಕವಾಗಿ ತಂಪು ವಾತಾವರಣಕ್ಕೆ ಕಾರಣವಾಗಿದೆ. ಮಂಜುಗಡ್ಡೆ ಮೇಲಿನ ಗಾಳಿ ತಣ್ಣಗಿದ್ದು, ಸುತ್ತಲಿನ ಗಾಳಿಗಿಂತಲೂ ಭಾರವಾಗಿದೆ. ಗಾಳಿಯು ಶಾಖನಿರೋಧಕ ಗುಣವನ್ನು ಹೊಂದಿರುವ ಕಾರಣ ಕುಳಿಯಲ್ಲಿರುವ ಮಂಜುಗಡ್ಡೆ ಕರಗದೆ ಹಾಗೆಯೇ ಗಟ್ಟಿಯಾಗಿ ಉಳಿದಿದೆ ಎಂದು ಇಎಸ್​ಎ ವಿವರಿಸಿದೆ.

    ಭಯಾನಕ ವಿಡಿಯೋ| ಫುಟ್​ಬಾಲ್ ತರಬೇತಿ ವೇಳೆ ಸಿಡಿಲು ಬಡಿತ: ಕೋಮಾಗೆ ಜಾರಿದ ಬಾಲಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts