More

    ಮಂಗಳ ಯಾನ ಮಾಡಬೇಕು ಎಂದು ಹಣೆ ಮೇಲೆ ಎಲಾನ್​ ಮಸ್ಕ್​ ಹೆಸರನ್ನು ಹಚ್ಚೆ ಹಾಕಿಸಿದ..!

    ನವದೆಹಲಿ: ಇಲ್ಲೊಬ್ಬ ಭೂಪ ಎಲಾನ್ ಮಸ್ಕ್ ಗಮನವನ್ನು ಸೆಳೆಯುವ ಪ್ರಯತ್ನದಲ್ಲಿ ವಿಚಿತ್ರವಾದ ಸಾಹಸವನ್ನು ಮಾಡಿದ್ದಾನೆ. ಬ್ರೆಜಿಲಿಯನ್ ಇನ್​ಫ್ಯುಲೆನ್ಸರ್​ ರೋಡ್ರಿಗೋ ಅಮೇರಿಕಾ ಮಸ್ಕ್​ ಹೆಸರನ್ನು ತನ್ನ ಹಣೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಹಚ್ಚೆ ಪಕ್ಕದಲ್ಲಿ ರಾಕೆಟ್‌ನ ಚಿತ್ರವನ್ನೂ ಹಾಕಿಸಿದ್ದಾನೆ.

    ಬ್ರೆಜಿಲ್​ನ ರೊಡ್ರಿಗೋ ಎಲಾನ್​ ಮಸ್ಕ್​ನ ಪಕ್ಕಾ ಅಭಿಮಾನಿಯಾಗಿದ್ದಾನೆ. 2024ರಲ್ಲಿ ಎಲಾನ್​ ಮಸ್ಕ್​ ಸ್ಪೇಸ್‌ಎಕ್ಸ್ ಕಂಪೆನಿ ಮೂಲಕ ಮಂಗಳಯಾನವನ್ನು ಆಯೋಜಿಸಿದೆ. ಆ ಮಂಗಳಯಾನದಲ್ಲಿ ತಾನೂ ಇರಬೇಕು ಎನ್ನುವುದು ರೋಡ್ರಿಗೋ ಆಸೆಯಾಗಿದೆ. ‘ಎಲೋನ್ ಮಸ್ಕ್’ ಹೆಸರನ್ನು ಅವನ ಹಣೆಯ ಮೇಲೆ ದೊಡ್ಡ ಅಕ್ಷರಗಳಲ್ಲಿ ಬರೆಸಿಕೊಳ್ಳುವುದು ಆತನ ಪಾಲಿಗೆ ಮಂಗಳಕ್ಕೆ ಪ್ರಯಾಣಿಸಲು ಬೇಕಾದ ಟಿಕೆಟ್​. ರೋಡ್ರಿಗೋ ಕಣ್ಣಿಗೆ ಎಲಾನ್​ ಮಸ್ಕ್​ನ ಗಮನವನ್ನು ತನ್ನ ಕಡೆಗೆ ಸೆಳೆದುಕೊಳ್ಳುವುದಕ್ಕೆ ಬೇರೆ ದಾರಿ ತೋಚಿಲ್ಲ ಎಂದು ಕಾಣುತ್ತದೆ.

    ರೋಡ್ರಿಗೋ, ಹಣೆಯ ಮೇಲೆ ಹಚ್ಚೆ ಹಾಕಿಸಿಕೊಂಡ ನಂತರ ಸ್ಥಳೀಯ ಸುದ್ದಿ ವಾಹಿನಿಗಳೊಂದಿಗೆ ಮಾತನಾಡುವಾಗ ಮಸ್ಕ್​ ತಮ್ಮ ಸ್ಫೂರ್ತಿ ಎಂದು ಹೊಗಳಿದ್ದಾರೆ. ‘ಎಲಾನ್​ ಮಸ್ಕ್​ ಮನುಷ್ಯರನ್ನು ಮಂಗಳ ಗ್ರಹಕ್ಕೆ ಕರೆದೊಯ್ಯುತ್ತಿದ್ದು ಅವರ ಹೆಸರು ಇತಿಹಾಸದಲ್ಲಿ ಉಳಿಯಲಿದೆ. ಅವರು ನನಗೆ ಸ್ಫೂರ್ತಿಯಾಗಿದ್ದಾರೆ’ ಎಂದು ರೊಡ್ರಿಗೋ ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts