More

    ಅಣ್ಣೋ ಸಿದ್ರಾಮಣ್ಣ ಹಾಸನದಿಂದ ಪ್ರಜ್ವಲ್ ರೇವಣ್ಣ ಏರ್ ಪೋರ್ಟ್ ಗೆ ಹೋಗಲು ಬಿಟ್ಟಿದ್ದು ಯಾರಣ್ಣೋ ? ಆರ್ .ಅಶೋಕ್ ಪ್ರಶ್ನೆ

    ಬೆಂಗಳೂರು: ಪ್ರಜ್ವಲ್ ಪರಾರಿಗೆ ಕೇಂದ್ರ ಕಾರಣ ಎನ್ನುವ ಕಾಂಗ್ರೆಸ್ ನಾಯಕರ ಆರೋಪಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಅಶೋಕ್ ಟಕ್ಕರ್ ಕೊಟ್ಟರು. ‘ಅಣ್ಣೋ ಸಿದ್ದರಾಮಣ್ಣ, ಹಾಸನದಿಂದ ಏರ್‌ಪೋರ್ಟ್‌‌ಗೆ ಪ್ರಜ್ವಲ್ ಗೆ ಹೋಗಲು ಬಿಟ್ಟಿದ್ದು ಯಾರು?,  ಹಾಸನ ಪೊಲೀಸರು, ಡಿಸಿ ಏನ್ ಮಾಡ್ತಿದ್ರು? ಯಾರು ? ಕಾಂಗ್ರೆಸ್ ಸರ್ಕಾರ ಕಡಲೆ ಕಾಯಿ ತಿನ್ನುತ್ತಿತ್ತಾ ? ಎಂದು ಪ್ರಶ್ನೆಗಳ ಸುರಿಮಳೆಗರೆದರು.

    ಬಿಜೆಪಿ ರಾಜ್ಯ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಜ್ವಲ್ ಪೆನ್ ಡ್ರೈವ್ ಕೆಲವು ದಿನಗಳ ಹಿಂದೆಯೆ ಹೊರ ಬಂದಿದೆ. ವಿದೇಶಕ್ಕೆ ಹಾರಲು ಪ್ರಧಾನಿ ಮೋದಿಯವರು ಹೇಗೆ ಬಿಟ್ಟರು ? ಎಂದು ಕಾಂಗ್ರೆಸ್ ನವರು ಕೇಳುತ್ತಿದ್ದಾರೆ.

    ಪ್ರಜ್ವಲ್ ರೇವಣ್ಣ ಸದ್ಯಕ್ಕೆ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಸಂಸದ. ಈ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿದ್ದಾರೆ. ಮೋದಿಯವರನ್ನು ಕಾಂಗ್ರೆಸ್ ನವರು ಪ್ರಶ್ನಿಸುವ ಮುಂಚೆ ತಮ್ಮ ವೈಫಲ್ಯವನ್ನೊಮ್ಮೆ ನೋಡಿಕೊಳ್ಳಬೇಕು. ಮೂರು ದಿನಗಳಿಂದ ಈಚೆ ಪೆನ್ ಡ್ರೈವ್ ಹೊರಬಂದಿದೆ ಎನ್ನುವುದಾದರೆ ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳುವುದು, ಪ್ರಜ್ವಲ್ ಚಲನವಲನಗಳ ಮೇಲೆ ನಿಗಾವಹಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ತಿರುಗೇಟು ನೀಡಿದರು.

    ಹಾಸನದಲ್ಲಿ ಪ್ರಜ್ವಲ್ ಮತದಾನ ಮಾಡಿದ್ದಾರೆ. ಹಾಸನದ ಮನೆಯಿಂದ ಬೆಂಗಳೂರು ಏರ್‌ಪೋರ್ಟ್ ಗೆ‌ ಬರುವ ಮುನ್ನ ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಇಷ್ಟು ಗಡಿ ದಾಟಿದ್ದಾರೆ. ನಂತರ ಏರ್‌ಪೋರ್ಟ್‌‌ಗೆ ತಲುಪಿ ಜರ್ಮನಿಗೆ ಹೋಗಿದ್ದಾರೆ. ಗೃಹ ಇಲಾಖೆ, ಗುಪ್ತಚರ ವಿಭಾಗ ವಿಫಲವಾಗಿದೆ‌. ಪ್ರಜ್ವಲ್ ನನ್ನು ಹೋಗಲು ಬಿಟ್ಟಿದ್ದು ಮನೆಹಾಳ ಕಾಂಗ್ರೆಸ್ ನವರು, ಆದರೆ ಮೋದಿಗೆ ಪ್ರಶ್ನಿಸುತ್ತಿದ್ದಾರೆ. ಪ್ರಜ್ವಲ್ ವಿದೇಶಕ್ಕೆ ಹಾರಲು ಕಾಂಗ್ರೆಸ್ ನವರೇ ಬೆಂಬಲಿಸಿದ್ದಾರೆ ಎಂದು ಆರ್.ಅಶೋಕ್ ಪ್ರತ್ಯಾರೋಪಿಸಿದರು.

    ಸಂಕಷ್ಟ ಮರೆತ ಸರ್ಕಾರ

    ರಾಜ್ಯದಲ್ಲಿ ಬರಗಾಲದಿಂದ‌ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ತುರ್ತಾಗಿ ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ಕುಡಿಯುವ ನೀರು, ಮೇವಿನ ಅಭಾವ ಉಲ್ಬಣಿಸಿದ್ದರೆ ಅಧಿಕಾರಕ್ಕಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಕಚ್ಚಾಡುತ್ತಿದ್ದಾರೆ. ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂದು ಲೇವಡಿ ಮಾಡಿದರು.

    ಖಜಾನೆ ಖಾಲಿಯಾಗಿರುವುದನ್ನು ಮುಚ್ಚಿಕೊಳ್ಳಲು ಪದೇ ಪದೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ದೂರುತ್ತಿದೆ. ಕಾಂಗ್ರೆಸ್ ಆಡಳಿತದ 50 ವರ್ಷಗಳಲ್ಲಿ  ರಾಜ್ಯದಿಂದ ಸಂದಾಯವಾದ ತೆರಿಗೆ ಎಷ್ಟು ? ಹಂಚಿಕೆಯಾಗಿದ್ದೆಷ್ಟು ? ಎಂಬ ಅಧಿಕೃತ ಅಂಕಿ-ಅಂಶಗಳನ್ನು ಜನರು ಮುಂದಿಡಬೇಕು ಎಂದು ಆರ್.ಅಶೋಕ್ ಸವಾಲೆಸೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts