More

    ನೀರುಗಂಟಿಗಳಿಂದ ಗ್ರಾಪಂಗೆ ಒಳ್ಳೆಯ ಹೆಸರು; ಮುಂಜಾಗ್ರತೆ ವಹಿಸಿ; ಜಿಪಂ ಉಪ ಕಾರ್ಯದರ್ಶಿ ಎಸ್.ಬಿ.ಮುಳ್ಳಳ್ಳಿ ಸೂಚನೆ

    ಹಾವೇರಿ: ಪ್ರತಿ ಮನೆಗೂ ನೀರನ್ನು ತಲುಪಿಸುವ ಮಹತ್ತರವಾದ ಜವಾಬ್ದಾರಿ ಪ್ರತಿ ಗ್ರಾಮದ ನೀರುಗಂಟಿ(ವಾಟರ್‌ಮನ್)ಗಳದ್ದಾಗಿದೆ. ಹಾಗಾಗಿ, ಜನರಿಗೆ ಸಮಸ್ಯೆ ಆಗದಂತೆ ಮುಂದಾಲೋಚನೆಯಿಂದ 24/7 ಕಾರ್ಯನಿರ್ವಹಿಸಬೇಕು. ನೀವು ಚೆನ್ನಾಗಿ ಕಾರ್ಯನಿರ್ವಹಿಸಿದರೆ ಗ್ರಾಮ ಪಂಚಾಯಿತಿಗೆ ಒಳ್ಳೆಯ ಹೆಸರು ಬರುತ್ತದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್.ಬಿ.ಮುಳ್ಳಳ್ಳಿ ಹೇಳಿದರು.
    ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಮತ್ತು ಆಲ್ ಇಂಡಿಯಾ ಇನ್ಸ್‌ಟಿಟ್ಯೂಟ್ ಆಪ್ ಲೋಕಲ್ ಸೆಲ್ಪ್ ಗೌವರ್ನಮೆಂಟ್ ವತಿಯಿಂದ ನಗರದ ತಾಪಂ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಹಾವೇರಿ ತಾಲೂಕಿನ ನೀರುಗಂಟಿ/ ಪ್ಲಂಬರ್‌ಗಳಿಗೆ ಎರಡು ದಿನದ ಸಾಮರ್ಥ್ಯಾಭಿವೃದ್ಧಿ ಎಲ್-3 ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಇರುವ ನೀರುಗಂಟಿ ಮತ್ತು ಪ್ಲಂಬರ್‌ಗಳಿಗೆ ಜಲ ಜೀವನ ಮಿಷನ್ ಯೋಜನೆ ನಿರ್ವಹಣೆ ಹಾಗೂ ಮೇಲ್ವಿಚಾರಣೆಯನ್ನು ಕೌಶಲಭರಿತವಾಗಿ ಮಾಡಲು ಪ್ರತಿ ತಾಲೂಕು ಕೇಂದ್ರಗಳಲ್ಲಿ ತರಬೇತಿ ಆಯೋಜಿಸಲಾಗಿದೆ. ಪ್ರತಿಯೊಬ್ಬ ನೀರುಗಂಟಿ ಉತ್ಸಾಹದಿಂದ ಕಾರ್ಯನಿರ್ವಹಿಸಿ ಗ್ರಾಮಕ್ಕೂ ಹಾಗೂ ಜಿಲ್ಲೆಗೆ ಉತ್ತಮ ಹೆಸರು ತರಬೇಕು ಎಂದು ಸೂಚಿಸಿದರು.
    ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಭರತ ಹೆಗಡೆ ಮಾತನಾಡಿದರು. ತರಬೇತಿಯಲ್ಲಿ ಭಾಗವಹಿಸಿದ್ದ ಎಲ್ಲ ನೀರುಗಂಟಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಮಂಜುನಾಥ ಎನ್.ಎಸ್., ಎಂ. ಟಿ.ಓಲೇಕಾರ, ಡಾ.ನಾಗಪ್ಪ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts