More

    ಇಪಿಎಫ್ ಕುರಿತ ದೂರುಗಳಿಗೆ ಪೋರ್ಟಲ್: ಪಿಂಚಣಿದಾರರು, ಉದ್ಯೋಗದಾತರಿಗೆ ಅನುಕೂಲ

    ನವದೆಹಲಿ: ಕಾರ್ವಿುಕರ ಭವಿಷ್ಯ ನಿಧಿ (ಇಪಿಎಫ್) ಚಂದಾದಾರರು ಕುಂದುಕೊರತೆ ಬಗ್ಗೆ ಆನ್​ಲೈನ್ ಮೂಲಕವೇ ದೂರು ಸಲ್ಲಿಸಬಹುದಾಗಿದೆ. ಇದಕ್ಕಾಗಿ ಕುಂದುಕೊರತೆ ನಿರ್ವಹಣಾ ವ್ಯವಸ್ಥೆಯನ್ನು (ಇಪಿಎಫ್​ಐಜಿಎಂಎಸ್) ಕಾರ್ವಿುಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್​ಒ) ಚಾಲನೆಗೆ ತಂದಿದೆ.

    ಚಂದಾದಾರರು ದೂರನ್ನು ಯಾವುದೇ ಸ್ಥಳದಿಂದ ಬೇಕಾದರೂ ಸಲ್ಲಿಸಬಹುದಾಗಿದ್ದು, ಅದು ಇಪಿಎಫ್​ಒ ಕುಂದುಕೊರತೆ ವಿಭಾಗಕ್ಕೆ ಬಂದು ತಲುಪಲಿದೆ. ಅಷ್ಟು ಮಾತ್ರವಲ್ಲದೆ ದೂರಿನ ಸ್ಥಿತಿಗತಿಯನ್ನು ಚಂದಾದಾರರು ಆನ್​ಲೈನ್ ಮೂಲಕವೇ ಪರಿಶೀಲಿಸಬಹುದಾಗಿದೆ.ಈ ಪೋರ್ಟಲ್ ಮೂಲಕ ಇಪಿಎಫ್ ಚಂದಾದಾರರು ಮಾತ್ರವಲ್ಲದೆ ಇಪಿಎಸ್ ಪಿಂಚಣಿದಾರರು, ಉದ್ಯೋಗದಾತರು ಸಹ ದೂರು ನೀಡಬಹುದು.

    ದೂರು ಸಲ್ಲಿಸುವ ವಿಧಾನ

    * https://epfigms.gov.in ವೆಬ್​ಸೈಟ್​ಗೆ ಭೇಟಿ ನೀಡಿ, ‘ರಿಜಿಸ್ಟರ್ ಗ್ರೀವನ್ಸ್’ ಕ್ಲಿಕ್ ಮಾಡಿ.

    * ಆಯ್ಕೆಪಟ್ಟಿಯಲ್ಲಿ ‘ಸ್ಟೇಟಸ್’ ಆಯ್ಕೆ ಮಾಡಿ.

    * ಯುಎಎನ್ ಸಂಖ್ಯೆ ಮತ್ತು ಪಿನ್ ಸಂಖ್ಯೆ ನಮೂದಿಸಿ ‘ಗೇಟ್ ಡೀಟೇಲ್ಸ್’ ಕ್ಲಿಕ್ ಮಾಡಿ.

    * ಯುಎಎನ್ ಸಂಖ್ಯೆ ನಮೂದಿಸಿದ ಸ್ಥಳದಲ್ಲಿ ‘ಗೆಟ್ ಒಟಿಪಿ’ ಬಟನ್ ಒತ್ತಿ.

    * ರಿಜಿಸ್ಟ್ರಡ್ ಮೊಬೈಲ್ ಸಂಖ್ಯೆ ಬಂದ ಒಟಿಪಿಯನ್ನು ನಮೂದಿಸಿ ‘ಸಬ್​ವಿುಟ್’ ಒತ್ತಿ. ಒಟಿಪಿ ಸಂಖ್ಯೆ ಪರಿಶೀಲನೆಯ ಇಮೇಜ್ ತೋರ್ಪಡುತ್ತದೆ ಅದಕ್ಕೆ ‘ಒಕೆ’ ಕ್ಲಿಕ್ ಮಾಡಿ

    * ವೈಯಕ್ತಿಕ ಮಾಹಿತಿಗಳನ್ನು ಭರ್ತಿ ಮಾಡಿ. ಹೆಸರು, ಲಿಂಗ, ಸಂವಹನ ವಿಳಾಸ, ಪಿನ್​ಕೋಡ್, ರಾಜ್ಯ, ದೇಶವನ್ನು ನಮೂದಿಸಿ.

    * ‘ಗ್ರೀವನ್ಸ್ ಡೀಟೇಲ್’ ಜಾಗದಲ್ಲಿ ಪಿಎಫ್ ಖಾತೆ ಸಂಖ್ಯೆಯನ್ನು ನಮೂದಿಸಿ.

    * ದೂರಿನ ವಿಧಾನವನ್ನು ಆಯ್ಕೆ ಮಾಡಿ ದೂರಿನ ವಿವರವನ್ನು ನಮೂದಿಸಿ. ಇದಕ್ಕೆ ‘ಚೂಸ್ ಫೈಲ್’ ಮತ್ತು ‘ಆಟ್ಯಾಚ್’ಗಳನ್ನು ಆಯ್ಕೆ ಮಾಡಿ ಹೊರಗಿನಿಂದಲೂ ಪೂರಕ ಮಾಹಿತಿಯನ್ನು ಸೇರಿಸಬಹುದು.

    * ದೂರಿಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯು ‘ಗ್ರೀವನ್ಸ್ ಡೀಟೇಲ್’ನಲ್ಲಿ ಸಂಗ್ರಹ ವಾಗುತ್ತದೆ. ನಂತರ ‘ಸಬ್​ವಿುಟ್’ ಕ್ಲಿಕ್ ಮಾಡಿ.

    * ದೂರು ದಾಖಲಾದ ನಂತರ ಇಮೇಲ್ ಮತ್ತು ಎಸ್​ಎಂಎಸ್ ಮೂಲಕ ನೋಂದಣಿ ಸಂಖ್ಯೆಯನ್ನು ಇಪಿಎಫ್​ಒ ರವಾನಿಸುತ್ತದೆ.

    * ನೋಂದಣಿ ಸಂಖ್ಯೆಯ ಮೂಲಕ ದೂರಿನ ಸ್ಥಿತಿಗತಿ ಯನ್ನು ಇದೇ ವೆಬ್​ಸೈಟ್​ನಲ್ಲಿ ಪರಿಶೀಲಿಸಬಹುದು.

    * ಚಂದಾದಾರರು ಯುಎಎನ್ ಸಂಖ್ಯೆ, ಪಿಂಚಣಿದಾರರು ಪಿಪಿಒ ಸಂಖ್ಯೆ, ಉದ್ಯೋಗದಾತರು ಸಂಸ್ಥೆಯ ಸಂಖ್ಯೆಯನ್ನು ನಿಖರವಾಗಿ ನಮೂದಿಸಬೇಕು.

    ಗಣತಂತ್ರ ಪರೇಡ್ ನೌಕಾತಂಡಕ್ಕೆ ಕನ್ನಡತಿ ಸಾರಥ್ಯ; 144 ಸದಸ್ಯರ ತಂಡಕ್ಕೆ ದಿಶಾ ನೇತೃತ್ವ, ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ

    ತನ್ನ ಬೆಕ್ಕು ಕಾಣೆಯಾದ ಸಿಟ್ಟಿನಲ್ಲಿ ನೆರೆಮನೆಯಲ್ಲಿದ್ದ 30 ಪಾರಿವಾಳಗಳಿಗೆ ವಿಷ ಹಾಕಿದ ಖದೀಮ!

    ಎನ್​ಎಸ್​ಜಿ ಕಮಾಂಡೋ ಸೋಗಿನಲ್ಲಿ ಪ್ರಧಾನಿ ಕಾರ್ಯಕ್ರಮದ ವಿವಿಐಪಿ ವಿಭಾಗಕ್ಕೆ ಒಳನುಸುಳಲು ಬಂದವ ಅಂದರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts