More

    ಶಾಸ್ತ್ರೀಯ ನೃತ್ಯ ಋಗ್ವೇದದಲ್ಲಿ ಪ್ರಸ್ತಾಪ

    ಸಿರಗುಪ್ಪ: ಭಾರತೀಯ ನೃತ್ಯಕಲೆಗಳ ಪರಂಪರೆ ಜಗತ್ತಿಗೆ ಮಾದರಿಯಾಗಿದೆ ಎಂದು ಹಿರಿಯ ಸಾಹಿತಿ ಬೀರಹಳ್ಳಿ ರಾಮರೆಡ್ಡಿ ಅಭಿಪ್ರಾಯಪಟ್ಟರು.
    ನಗರದ 5ನೇ ವಿಭಾಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಸಿರಗುಪ್ಪದ ಪುಟ್ಟರಾಜ ಸಾಂಸ್ಕೃತಿಕ ಕಲಾ ಬಳಗದಿಂದ ಹಮ್ಮಿಕೊಂಡಿದ್ದ ಸಾಮೂಹಿಕ ನೃತ್ಯ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಶಾಸ್ತ್ರೀಯ, ಜಾನಪದ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದೇಶ ಹೆಸರುವಾಸಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಭಾರತೀಯ ನೃತ್ಯಕಲೆಗಳ ಪರಂಪರೆ ಜಗತ್ತಿಗೆ ಮಾದರಿ

    ಭಾರತೀಯ ಶಾಸ್ತ್ರೀಯ ನೃತ್ಯ ಋಗ್ವೇದದಲ್ಲಿ ಪ್ರಸ್ತಾಪ ಮಾಡಲಾಗಿದೆ. ಋಗ್ವೇದದಿಂದ ಪಠ್ಯ, ಯಜುರ್ವೇದದಿಂದ ಅಭಿನಯ, ಸಾಮವೇದದಿಂದ ಸಂಗೀತ, ಅಥರ್ವಣ ವೇದದಿಂದ ರಸವನ್ನು ತೆಗೆದು 5ನೇ ವೇದವನ್ನಾಗಿ ನಾಟ್ಯವೇದವನ್ನು ರಚಿಸಲಾಲಾಯಿತು ಎಂಬುದು ಪ್ರಾಚೀನ ಗ್ರಂಥಗಳಲ್ಲಿ ಹೇಳಲ್ಪಟ್ಟಿದೆ ಎಂದು ಹೇಳಿದರು.

    ಇದನ್ನೂ ಓದಿ: ಭ್ರಷ್ಟಾಚಾರ ಆರೋಪ; ವಿಶ್ವಕಪ್ ವಿಜೇತ ಆಟಗಾರನಿಗೆ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿಷೇಧ

    ಎಚ್.ಎಂ.ಗಿರಿಜಾ ಹಿರೇಮಠ ಕಲಾತಂಡದಿಂದ ಸಮೂಹ ನೃತ್ಯ ಕಾರ್ಯಕ್ರಮ ನಡೆಯಿತು. ಪುಟ್ಟರಾಜ ಸಾಂಸ್ಕೃತಿಕ ಕಲಾ ಬಳಗದ ಅಧ್ಯಕ್ಷ ಮಹಾದೇವಯ್ಯಸ್ವಾಮಿ ಗವಾಯಿ, ಬಿ.ಗುರುನಾಥ, ಗಿರಿಜಾ ಹಿರೇಮಠ ವಿವಿಧ ಗೀತೆಗಳನ್ನು ಹಾಡಿ ರಂಜಿಸಿದರು.
    ಎಸ್ಡಿಎಂಸಿ ಅಧ್ಯಕ್ಷೆ ಬಿ.ವರಲಕ್ಷ್ಮೀ, ಮುಖ್ಯ ಶಿಕ್ಷಕ ಎಚ್.ಎಂ.ಸುರೇಶ, ಶಿಕ್ಷಕರಾದ ಎಂ.ಬಸವನಗೌಡ, ಚಂದಾಸಾಬ್, ಜಿ.ಅಮರೇಶ, ಶರಣಪ್ಪ, ದೊಡ್ಡಬಸಮ್ಮ, ಅಂಬಮ್ಮ, ಚಂದಾಲಿಂಗ ಮತ್ತು ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts