More

    ಧೋನಿ ಸಿಕ್ಸರ್ ದಾಖಲೆ ಮುರಿದ ಮಾರ್ಗನ್

    ಸೌಥಾಂಪ್ಟನ್: ಇಂಗ್ಲೆಂಡ್ ಏಕದಿನ ಕ್ರಿಕೆಟ್ ತಂಡದ ನಾಯಕ ಇವೊಯಿನ್ ಮಾರ್ಗನ್ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರ ದಾಖಲೆಯೊಂದನ್ನು ಮಂಗಳವಾರ ಮುರಿದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕರಾಗಿ ಅತ್ಯಧಿಕ ಸಿಕ್ಸರ್‌ಗಳನ್ನು ಸಿಡಿಸಿದ ದಾಖಲೆ ಈಗ ಮಾರ್ಗನ್ ಅವರದಾಗಿದೆ.

    ಐರ್ಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದ ವೇಳೆ ಮಾರ್ಗನ್ ಈ ಸಾಧನೆ ಮಾಡಿದ್ದಾರೆ. ಮಾರ್ಗನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 212ನೇ ಸಿಕ್ಸರ್ ಸಿಡಿಸುವ ಮೂಲಕ, ನಾಯಕರಾಗಿ 211 ಸಿಕ್ಸರ್ ಸಿಡಿಸಿರುವ ಎಂಎಸ್ ಧೋನಿ ಅವರ ದಾಖಲೆಯನ್ನು ಮುರಿದಿದ್ದಾರೆ.

    ಇದನ್ನೂ ಓದಿ: ಐಪಿಎಲ್‌ನಿಂದ ಹಿಂದೆ ಸರಿದ ವಿವೋ, ಜನಾಕ್ರೋಶಕ್ಕೆ ಬೆದರಿದ ಚೀನಾ ಕಂಪನಿ?

    ಮಾರ್ಗನ್ 163ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರೆ, ಧೋನಿ 332 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು. 324 ಪಂದ್ಯಗಳಲ್ಲಿ 171 ಸಿಕ್ಸರ್ ಸಿಡಿಸಿರುವ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 3ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕ್ಕಲಂ (121 ಪಂದ್ಯ, 170 ಸಿಕ್ಸರ್) ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ (124 ಪಂದ್ಯ, 135 ಸಿಕ್ಸರ್) ನಂತರದ ಸ್ಥಾನದಲ್ಲಿದ್ದಾರೆ.

    ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸರ್ವಾಧಿಕ ಸಿಕ್ಸರ್ ಸಿಡಿಸಿದ ವಿಶ್ವದಾಖಲೆ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಅವರದಾಗಿದೆ. ಅವರು 462 ಪಂದ್ಯಗಳಲ್ಲಿ 534 ಸಿಕ್ಸರ್ ಸಿಡಿಸಿದ್ದರೆ, ಪಾಕಿಸ್ತಾನದ ಶಾಹಿದ್ ಅಫ್ರಿದಿ (524 ಪಂದ್ಯಗಳಲ್ಲಿ 476 ಸಿಕ್ಸರ್) ಮತ್ತು ಭಾರತದ ರೋಹಿತ್ ಶರ್ಮ (364 ಪಂದ್ಯಗಳಲ್ಲಿ 423 ಸಿಕ್ಸರ್) ನಂತರದ ಸ್ಥಾನದಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts